ಬರ ಪಟ್ಟಿಗೆ ಸೊರಬ ಸೇರಿಸಲು ಸರಕಾರಕ್ಕೆ ಆಗ್ರಹ

Contributed by: gururaja.jd@gmail.com|Vijaya Karnataka•
demand to declare sorab as a drought hit area
ವಿಕ ಸುದ್ದಿಲೋಕ ಆನವಟ್ಟಿ ಈ ವರ್ಷ ಮಳೆ ಕೊರತೆಯಿಂದ ಬೆಳೆಗಳು ಫಸಲಿಗೆ ಬರುವ ಹಂತದಲ್ಲೆಒಣಗುತ್ತಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಸರಕಾರ ಸೊರಬ ತಾಲೂಕನ್ನು ಬರ ಪೀಡಿತ ಪ್ರದೇಶ ಎಂದು ಘೋಷಿಸಿ, ರೈತರ ಸಾಲ ಮನ್ನಾ ಮಾಡುವಂತೆ ಮನವಿ ಸಲ್ಲಿಸಲು ಸಂಘದ ವಾರ್ಷಿಕ ಮಹಾಸಭೆಯಲ್ಲಿನಿರ್ಣಯ ಕೈಗೊಳ್ಳ ಲಾಗಿದೆ ಎಂದು ಆನವಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಬಿ. ರಾಜೇಂದ್ರ ನಾಯಕ್ ತಿಳಿಸಿದರು. ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿನಡೆದ ಸಂಘದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸಂಘವು ಪ್ರಸಕ್ತ ಸಾಲಿನಲ್ಲಿ30.89 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಸಂಕಷ್ಟದ ಪರಿಸ್ಥಿತಿ ಯಲ್ಲಿಯೂ ಸಂಘದ ಸದಸ್ಯರ ಸಹಕಾರದೊಂದಿಗೆ ರೈತರಿಗೆ ಅಗತ್ಯ ರಸಗೊಬ್ಬರಗಳನ್ನು ಪೂರೈಸಿದೆ. ಮುಂದಿನ ದಿನಗಳಲ್ಲಿಗೋದಾಮು ನಿರ್ಮಿಸಿ, ರೈತರಿಗೆ ಕೀಟನಾಶಕ ಔಷಧ ಗಳನ್ನು ಒದಗಿಸುವ ಯೋಜನೆ ಇದೆ ಎಂದರು. ಪ್ರಸ್ತುತ ಕಾತುವಳ್ಳಿಯಲ್ಲಿಪಡಿತರ ವಿತರಣೆ ಮಾಡಲಾಗುತ್ತಿದ್ದು, ಮುಂ ದಿನ ದಿನಗಳಲ್ಲಿಇತರ ಗ್ರಾಮ ಗಳಲ್ಲಿಯೂ ಪಡಿತರ ವಿತರಣೆಗೆ ಅವಕಾಶ ದೊರೆತರೆ ಸೇವೆ ವಿಸ್ತರಿಸಲಾಗುವುದು ಎಂದರು. ಸಭೆಯ ಅಂಗವಾಗಿ ಸಂಘದ ಸದಸ್ಯರಿಗೆ ಕಣ್ಣಿನ ಉಚಿತ ತಪಾಸಣೆ ನಡೆಸಲಾಯಿತು. ವಿವಿಧ ರಸಗೊಬ್ಬರ ಗಳು ಹಾಗೂ ಕೀಟನಾಶಕಗಳನ್ನು ಯಾವ ಸಂದರ್ಭದಲ್ಲಿ, ಎಷ್ಟು ಪ್ರಮಾಣದಲ್ಲಿಮತ್ತು ಯಾವ ವಿಧಾನದಲ್ಲಿಬಳಸಬೇಕು ಎಂಬ ಬಗ್ಗೆ ರೈತರಿಗೆ ಮಾಹಿತಿ ನೀಡಲಾಯಿತು. ಸಂಘದ ಉಪಾಧ್ಯಕ್ಷ ಈರಪ್ಪ ತಲ್ಲೂರು, ನಿರ್ದೇಶಕರಾದ ಟಿ.ಎಸ್ .ಕೊಟ್ರೇಶಪ್ಪ, ಜಗದೀಶ್ ಹೊಸಳ್ಳಿ, ಕುಬೇರಪ್ಪ ಹುಣಸವಳ್ಳಿ, ಎಂ.ಕೃಷ್ಣಪ್ಪ, ನಾಗರಾಜ್ , ಪ್ರಭುಗೌಡ, ಸುರೇಂದ್ರ ಗೌಡ ಬೆನ್ನೂರು, ಪುಷ್ಪಾವತಿ, ಬ್ಯಾಂಕ್ ಪ್ರತಿನಿಧಿ ಕೃಷ್ಣಮೂರ್ತಿ, ಸಿಇಒ ಎ.ಪಿ. ಹರ್ಷ ಮತ್ತಿತರರಿದ್ದರು.