*‘ಬಸವ ತತ್ವ ಹಾಗೂ ಸಂವಿಧಾನ ಸಂರಕ್ಷಣೆ ಹೋರಾಟ ಸಮಿತಿಯಿಂದ’ ಬೃಹತ್ ಪ್ರತಿಭಟನೆ, ವಿಚಾರ ಸಂಕಿರಣಬಸವ ತತ್ವ ಉಳಿವಿಗೆ ಹೋರಾಟ ಅನಿವಾರ್ಯ
ವಿಕ ಸುದ್ದಿಲೋಕ ಕಲಬುರಗಿ
ಇಂದಿನ ದಿನಗಳಲ್ಲಿಮನುವಾದ, ಕೋಮುವಾದದ ವಿರುದ್ಧ ಬಸವಾದಿ ಶರಣರ ತತ್ವ ಸಿದ್ಧಾಂತ, ವಚನ ಸಾಹಿತ್ಯ ಉಳಿಸಿಕೊಳ್ಳಲು ಸೈದ್ಧಾಂತಿಕ ಹೋರಾಟ ನಡೆಸುವುದು ಅತ್ಯಂತ ಅನಿವಾರ್ಯವಾಗಿದೆ. ಮುಂದಿನ ದಿನಗಳಲ್ಲೂಬಸವ ತತ್ವ ವಿರೋಧಿಸುವ ಸಮಾವೇಶಗಳ ವಿರುದ್ಧ ಹೋರಾಟ ನಿಶ್ವಿತ ಎಂದು ‘ಬಸವ ತತ್ವ ಹಾಗೂ ಸಂವಿಧಾನ ಸಂರಕ್ಷಣೆ ಹೋರಾಟ ಸಮಿತಿಯಿಂದ’ ಶುಕ್ರವಾರ ನಡೆದ ವಿಚಾರ ಸಂಕಿರಣದಲ್ಲಿಒಕ್ಕೂರಲ ನಿರ್ಣಯ ಮಾಡಲಾಯಿತು.
ಸೆ.27ರಂದು ನಗರದಲ್ಲಿನಡೆಯಲಿರುವ ಬಸವಾದಿ ಶರಣರ ಹಿಂದೂ ಸಮಾವೇಶ ವಿರೋಧಿಸಿ ನಗರದ ಜಗತ್ ವೃತ್ತದಲ್ಲಿನಡೆದ ವಿಚಾರ ಸಂಕಿರಣದಲ್ಲಿ‘ಬಸವಾದಿ ಶರಣರ ಹಿಂದೂ ಸಮಾವೇಶ’ದ ವಿರುದ್ಧ ಆಕ್ರೋಶ ವ್ಯಕ್ತವಾಯಿತು.
ಪ್ರೊ.ಆರ್ .ಕೆ ಹುಡಗಿ ಮಾತನಾಡಿ, ನಾವು ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವವರು. ನಮ್ಮ ಸಿದ್ಧಾಂತಗಳನ್ನು ವಿರೋಧಿಸುವವರನ್ನು ಅಥವಾ ಶರಣರ ತತ್ವಗಳ ಹನನಕ್ಕೆ ಯತ್ನಿಸುವವರನ್ನು ನಾವು ವೈಯಕ್ತಿಕವಾಗಿ ದ್ವೇಷಿಸುವುದಿಲ್ಲ. ಬದಲಾಗಿ ಅವರ ತಪ್ಪು ವಿಚಾರಗಳನ್ನು ಸೈದ್ಧಾಂತಿಕವಾಗಿ ಖಂಡಿಸುತ್ತೇವೆ. ನಮ್ಮ ಈ ಹೋರಾಟ ವೈಯಕ್ತಿಕವಲ್ಲ, ಸಂಪೂರ್ಣವಾಗಿ ಸೈದ್ಧಾಂತಿಕವಾದದ್ದು ಎಂದರು.
ಜಾಗತಿಕ ಲಿಂಗಾಯತ ಮಹಾಸಭೆ ಕೇಂದ್ರ ಸಮಿತಿ ಉಪಾಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿ, ಕಲಬುರಗಿಯಲ್ಲಿನಡೆಯುತ್ತಿರುವ ಬಸವಾದಿ ಹಿಂದೂ ಸಮಾವೇಶಕ್ಕೆ ರಾಜ್ಯ ಸರಕಾರ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು. ಇನ್ನು ನೀಡಿದ್ದರೆ ತಕ್ಷಣವೇ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡು, ವಾಕ್ ಸ್ವಾತಂತ್ರ್ಯವನ್ನೇ ಕಳೆದುಕೊಂಡಿರುವ ಕನ್ಹೇರಿ ಸ್ವಾಮೀಜಿಗೆ ಬಸವಣ್ಣನವರ ಹೆಸರನ್ನು ಬಳಸುವ ಯಾವುದೇ ನೈತಿಕ ಹಕ್ಕಿಲ್ಲಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರೊ.ಮೀನಾಕ್ಷಿ ಬಾಳಿ ಮಾತನಾಡಿ, ಬಸವಾದಿ ಶರಣರ ತತ್ವ ಮತ್ತು ವಚನ ಸಾಹಿತ್ಯವನ್ನು ಹತ್ತಿಕ್ಕಲು ಆರ್ ಎಸ್ ಎಸ್ ಹಾಗೂ ಸನಾತನಿ ಶಕ್ತಿಗಳು ಬಸವಣ್ಣನವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಬಸವ ತತ್ವಕ್ಕೂ ವೈದಿಕ ಆಚರಣೆಗಳಿಗೂ ಅಜಗಜಾಂತರ ವ್ಯತ್ಯಾಸವಿದೆ. ನಮ್ಮದು ಸಮಾನತೆ, ಕಾಯಕ ಮತ್ತು ದಾಸೋಹ ಸಿದ್ಧಾಂತವಾದರೆ, ಅವರದು ತಾರತಮ್ಯ, ಕರ್ಮ ಮತ್ತು ದಾನ ಸಿದ್ಧಾಂತ. ದಲಿತರನ್ನು ಅಸ್ಪೃಶ್ಯರೆಂದು ದೂರವಿಟ್ಟವರು ಅವರು, ಎಲ್ಲರನ್ನೂ ಅಪ್ಪಿಕೊಂಡು ಕಲ್ಯಾಣ ಕಟ್ಟಿದವರು ಬಸವಾದಿ ಶರಣರು ಎಂದು ಸಿದ್ಧಾಂತಗಳ ಹೋಲಿಕೆ ಮಾಡುವ ಮೂಲಕ ಗಮನ ಸೆಳೆದರು.
ಚಿಂತಕಿ ಕೆ.ನೀಲಾ ನಿರ್ಣಯ ಮಂಡಿಸಿದರು. ಗುರಮಠಕಲ್ ಖಾಸಾ ಮಠದ ಶಾಂತವೀರ ಸ್ವಾಮೀಜಿ, ಚನ್ನಬಸವಾನಂದ್ ಸ್ವಾಮೀಜಿ, ಬಸವಪ್ರಭು ಸ್ವಾಮೀಜಿ, ಪ್ರಭುಶ್ರೀ ಮಾತಾಜಿ, ಬಸವರಾಜ ಧನ್ನೂರ, ಮರೆಪ್ಪ ಹಳ್ಳಿ, ರವೀಂದ್ರ ಶಾಬಾದಿ, ಆರ್ ಕೆ ಹುಡಗಿ, ಕೆ.ನೀಲಾ, ಅರ್ಜುನ್ ಭದ್ರೆ, ಪೀಡಪ್ಪ ಜಾಲಗಾರ, ಆರ್ .ಜೆ ಶೆಟಗಾರ್ , ಬೀದರ್ ನ ಹುಗ್ಗಿ ಪಾಟೀಲ್ , ಶಿವಕುಮಾರ ಬಿದರಿ, ಲಚಪ್ಪ ಜಮಾದರ, ಅಶೋಕ್ ಘೂಳಿ, ಅಪ್ಪಾರಾವ ಅಕ್ಕೋಣಿ, ನಾಗನಾಥ ಸೊರಳೆ, ಚಂದ್ರಶೇಖರ ಕರಜಗಿ, ಭೀಮಶಾ ಖನ್ನಾ ಕಾಯಕ ಶರಣರ ಸಮಾಜದ ಹಲವರು ಪಾಲ್ಗೊಂಡಿದ್ದರು.
***
ಕೋಟ್ ...
ಬಸವಾದಿ ಶರಣರ ಸಮ್ಮೇಳನ ಎನ್ನುವ ಇವರು, ಕಾರ್ಯಕ್ರಮಕ್ಕೆ ಬಸವ ತತ್ವದ ಒಬ್ಬನೇ ಒಬ್ಬ ಮಠಾಶರನ್ನೂ ಏಕೆ ಆಹ್ವಾನಿಸಿಲ್ಲ? ಲಿಂಗಾಯತವು ಸ್ವತಂತ್ರ ಧರ್ಮವಾಗಿ ಸಾಂವಿಧಾನಿಕ ಮಾನ್ಯತೆ ಪಡೆಯುವ ಹಂತದಲ್ಲಿದೆ. ಇದನ್ನು ಸಹಿಸದ ಕೆಲವರು ಜನರ ಹಾದಿ ತಪ್ಪಿಸಲು ’ಹಿಂದೂ ಬಸವಾದಿ ಶರಣರ ಸಮಾವೇಶ’ ಎಂಬ ಹೆಸರಿನಲ್ಲಿಷಡ್ಯಂತ್ರ ರೂಪಿಸುತ್ತಿದ್ದಾರೆ.
- ಬಸವರಾಜ ಧನ್ನೂರ, ಕೇಂದ್ರ ಸಮಿತಿ ಉಪಾಧ್ಯಕ್ಷ, ಜಾಗತಿಕ ಲಿಂಗಾಯತ ಮಹಾಸಭೆ
***
ಕೋಟ್ ...
ಬಸವಾದಿ ಶರಣರ ಚಿಂತನೆ ಮತ್ತು ಸಂವಿಧಾನ ಉಳಿಸುವ ಕೆಲಸ ನಮ್ಮ ಮೇಲಿದೆ. ಸಾವಿರಾರು ವರ್ಷಗಳಿಂದ ಮನುವಾದಿಗಳು ಶರಣರ ತತ್ವ ನಿರ್ನಾಮಕ್ಕೆ ಯತ್ನಿಸುತ್ತಿದ್ದಾರೆ. ಶರಣರ ಜತೆ ಹಿಂದೂ ಎಂದು ಸೇರಿಸುವುದಕ್ಕಾಗಿ ನಮ್ಮ ವಿರೋಧವಿದೆ. ಈ ಹೋರಾಟ ಮುಂದುವರಿಯಲಿದೆ.
- ಶ್ರೀ ಶಾಂತವೀರ ಶಿವಾಚಾರ್ಯರು, ಖಾಸಾ ಮಠ, ಗುರಮಠಕಲ್
***
ಕೋಟ್ ...
ಕುತ್ತಿಗೆಯಲ್ಲಿಇಷ್ಟಲಿಂಗವಿಲ್ಲ, ಹಣೆಯಲ್ಲಿವಿಭೂತಿಯಿಲ್ಲದೆ ಮಹಿಳೆಯರಂತೆ ಕುಂಕುಮ ಧರಿಸಿ ತಿರುಗಾಡುವ ವ್ಯಕ್ತಿಯನ್ನು ಸ್ವಾಮೀಜಿ ಎಂದು ಒಪ್ಪಿಕೊಳ್ಳಲು ಸಾಧ್ಯವೇ? ಶರಣರ ಚಳವಳಿ ಮತ್ತು ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟವನ್ನು ದಮನ ಮಾಡಲೆಂದೇ ಕನ್ಹೇರಿ ಸ್ವಾಮೀಜಿಯನ್ನು ಆರ್ ಎಸ್ ಎಸ್ ಇವರನ್ನು ಕರ್ನಾಟಕಕ್ಕೆ ಡೆಪ್ಯೂಟ್ ಮಾಡಿದೆ.
- ಅವಿನಾಶ್ ಬೋಸಗಿಕರ್ , ಮಹಾರಾಷ್ಟ್ರ
***
ಬಾಕ್ಸ್ ...
ಕುಂಕುಮ ಧರಿಸುವವರಿಗೆ ಶರಣರ ನಂಟಿಲ್ಲ
ಬಸವ ಪರಂಪರೆಯಲ್ಲಿವಿಭೂತಿ ಮತ್ತು ರುದ್ರಾಕ್ಷಿಗೆ ಅಗ್ರಸ್ಥಾನವಿದೆ. ಸಿದ್ಧಗಂಗಾ ಮಠದ ಶಿವಕುಮಾರ ಮಹಾಸ್ವಾಮಿಗಳು, ಸುತ್ತೂರು ಶ್ರೀಗಳು, ಚನ್ನಬಸವ ಪಟ್ಟದ್ದೇವರು ಸೇರಿ ಎಲ್ಲಹಿರಿಯ ಗುರುಗಳು ಹಣೆಯಲ್ಲಿವಿಭೂತಿಯನ್ನೇ ಧರಿಸಿದ್ದರು. ಆದರೆ, ವಿಭೂತಿ ತ್ಯಜಿಸಿ ಕುಂಕುಮ ಧರಿಸುವ ಕನ್ಹೇರಿ ಸ್ವಾಮೀಜಿ ಜಂಗಮ ದೀಕ್ಷೆಯ ನಿಯಮಗಳನ್ನೇ ಗಾಳಿಗೆ ತೂರಿದ್ದಾರೆ. ಇವರಿಗೆ ಬಸವಣ್ಣನವರ ತತ್ವಗಳಿಗೂ ಯಾವುದೇ ಸಂಬಂಧವಿಲ್ಲಎಂದು ಧನ್ನೂರ್ ಟೀಕಿಸಿದರು.
***
ಹೇಳಿದರು.
*
ಬಾಕ್ಸ್ ...
ಬೃಹತ್ ಪ್ರತಿಭಟನಾ ಮೆರವಣಿಗೆ
ಬಸವಾದಿ ಶರಣರ ಹಿಂದೂ ಸಮಾವೇಶ ವಿರೋಧಿಸಿ ಸಾವಿರಾರು ಜನರು ಬೃಹತ್ ಪ್ರತಿಭಟನೆ ನಡೆಸಿದರು. ನಗರದ ಕನ್ನಡ ಭವನದ ಬಳಿ ಸೇರಿದ ಜನರು ಕೈಯಲ್ಲಿಬಸವಣ್ಣನ ಚಿತ್ರ ಇರುವ ಹಾಗೂ ಬಸವ ತತ್ವ ಹಾಗೂ ಸಂವಿಧಾನ ಸಂರಕ್ಷಣೆಯ ಹೆಸರಿನ ಬಿಳಿ ಧ್ವಜಗಳನ್ನು ಹಿಡಿದುಕೊಂಡು ಜಗತ್ ವೃತ್ತದವರೆಗೆ ಪ್ರತಿಭಟನಾ ರಾರ ಯಲಿ ನಡೆಸಿದರು. ಈ ವೇಳೆ ‘ಜೈ ಬಸವೇಶ, ಭಾರತ ದೇಶ’ ಕನ್ಹೇರಿ ಸ್ವಾಮೀಜಿಗೆ ಧಿಕ್ಕಾರ’ ಸೇರಿ ಹಲವು ಘೋಷಣೆ ಕೂಗಿದರು.