ಇಲಾಖೆಗಳ ಸಮನ್ವಯದಿಂದ ಪರಿಣಾಮಕಾರಿ ಸೇವೆ

Contributed by: kugweprakash@gmail.com|Vijaya Karnataka•
governments emphasis on social services
ವಿಕ ಸುದ್ದಿಲೋಕ ಸಾಗರ ಪ್ರತಿ ವೃತ್ತಿಯಲ್ಲೂಸೇವೆ ಸಲ್ಲಿಸುವವರಿಗೆ ಕಾಲಕಾಲಕ್ಕೆ ತರಬೇತಿ ಅಗತ್ಯ. ನಾವು ಇಲಾಖೆಯ ಮೂಲಕ ಜನಸೇವೆಗೆ ಬಂದವರು. ಸರಕಾರ ಜಾರಿಗೆ ತಂದ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನವಾಗಬೇಕಾದರೆ ಅವುಗಳ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿರಬೇಕು. ತಿಳಿದ ಮಾಹಿತಿಯನ್ನು ಸಮುದಾಯದ ನಡುವೆ ಹಂಚಿಕೊಳ್ಳಲು ಸೂಕ್ತ ತರಬೇತಿ ಅಗತ್ಯ ಎಂದು ಸಹಾಯಕ ಕೃಷಿ ನಿರ್ದೇ ಶಕ ಬಿ.ಎಲ್ . ಶಿವಪ್ರಕಾಶ್ ಹೇಳಿದರು. ಇಲ್ಲಿನ ಪಶುಪಾಲನಾ ಇಲಾಖೆ ಸಭಾಂ ಗಣದಲ್ಲಿಕೃಷಿ ಇಲಾಖೆ, ಕೃಷಿಕ ಸಮಾಜ ಹಾಗೂ ಪಶುಪಾಲನಾ ಇಲಾಖೆ ವತಿ ಯಿಂದ ಆತ್ಮ ಯೋಜನೆಯಡಿ ವಿಸ್ತರಣಾ ಕಾರ್ಯಕರ್ತರಿಗೆ ಆಯೋಜಿ ಸಿದ್ದ ತರಬೇತಿ ಹಾಗೂ ರೇಬಿಸ್ ರೋಗದ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕೃಷಿ, ತೋಟಗಾರಿಕೆ, ಪಶು ಪಾಲನೆ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿ ಕ್ಷೇತ್ರದಲ್ಲಿಕೆಲಸ ಮಾಡುವಾಗ ಹಲವು ಸವಾಲುಗಳನ್ನು ಎದುರಿಸುತ್ತಾರೆ. ಆದ್ದರಿಂದ ಇಲಾಖೆಗೆ ಸಂಬಂಧಿಸಿದ ಎಲ್ಲವಿಷಯಗಳ ಬಗ್ಗೆ ಮಾಹಿತಿ ಹೊಂದಿರ ಬೇಕು. ಆತ್ಮ ಯೋಜನೆಯಡಿ ಕಾಲಕಾಲಕ್ಕೆ ತರಬೇತಿ ನೀಡಲಾಗುತ್ತಿದ್ದು, ಸಿಬ್ಬಂದಿ ಸಕ್ರಿಯವಾಗಿ ಪಾಲ್ಗೊಂಡು ಅದರ ಮಾಹಿತಿಯನ್ನು ಜನರಿಗೆ ತಲುಪಿಸಬೇಕು ಎಂದರು. ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಅರುಣ್ ಮಾತನಾಡಿ, ರೇಬಿಸ್ ರೋಗದ ಕುರಿತು ಸಮುದಾಯ ದಲ್ಲಿಜಾಗೃತಿ ಅಗತ್ಯ. ನಾಯಿ ಕಚ್ಚಿದೆ ಎಂದು ನಿರ್ಲಕ್ಷ್ಯ ಮಾಡಬಾರದು. ವಿವಿಧ ಸಂದರ್ಭಗಳಲ್ಲಿನಾಯಿ ಕಡಿತವು ದೇಹದ ಮೇಲೆ ಮಾರಕ ಪರಿಣಾಮ ಬೀರ ಬಹುದು. ಈ ಹಿನ್ನೆಲೆಯಲ್ಲಿರೇಬಿಸ್ ಕುರಿತು ಜನರಲ್ಲಿಜಾಗೃತಿ ಮೂಡಿಸಲು ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ ಎಂದು ಹೇಳಿದರು. ಕೃಷಿಕ ಸಮಾಜದ ಅಧ್ಯಕ್ಷ ವಿ.ಜಿ. ಶ್ರೀಧರ್ ಅಧ್ಯಕ್ಷತೆ ವಹಿಸಿದ್ದರು. ಪ್ರಕಾಶ್ ರಾವ್ ಮಂಚಾಲೆ, ನೀಗಪ್ಪ ಗೌಡ, ಲಕ್ಷ್ಮೀನಾರಾಯಣ ಇದ್ದರು. ಪರ್ವಿನ್ ಪ್ರಾರ್ಥಿಸಿ, ಗಣಪತಿ ಹೆನಗೆರೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ವಿನಾಯಕ ರಾವ್ ಬೇಳೂರು ನಿರೂಪಿಸಿದರು.