ವಿಕ ಸುದ್ದಿಲೋಕ ಸಾಗರ 60ರ ನಂತರ ಮರುಳು ಎನ್ನುವುದು ಸುಳ್ಳು. ಅರವತ್ತರ ನಂತರ ಮರಳಿ ಅರಳುವುದೇ ಸತ್ಯ. ಹಿರಿಯರನ್ನು ಕಡೆಗಣ್ಣಿನಿಂದ ನೋಡುವ ಸಂಸ್ಕೃತಿ ಸಮಾಜಕ್ಕೆ ಮಾರಕ ಎಂದು ಸಾಹಿತಿ ವಿ.ಗಣೇಶ್ ಹೇಳಿದರು. ಇಲ್ಲಿನ ಸರಕಾರಿ ನೌಕರರ ಭವನದ ಆವರಣದಲ್ಲಿಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಸಾಗರ ಶಾಖೆ ವತಿಯಿಂದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಹಿರಿಯ ನಾಗರಿಕರ ಕ್ರೀಡಾಕೂಟಕ್ಕೆ ಗುಂಡು ಎಸೆಯುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಹಿರಿಯರ ಮಾರ್ಗದರ್ಶನ ಸಿಕ್ಕಾಗ ಸುಸ್ಥಿರ ಸಮಾಜ ನಿರ್ಮಾಣವಾಗುತ್ತದೆ. 60ರ ನಂತರ ತಾವು ವೃದ್ಧರು ಎಂದು ಮನೆಯಲ್ಲಿಕುಳಿತುಕೊಳ್ಳದೆ, ಸಿಗುವ ಅವಕಾಶಗಳನ್ನು ಬಳಸಿಕೊಂಡು ಸಮಾಜ ಮುಖಿ ಚಟುವಟಿಕೆಗಳಲ್ಲಿತೊಡಗಿಸಿಕೊಳ್ಳ ಬೇಕು. ಕಲೆ, ಸಾಹಿತ್ಯ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿತೊಡಗಿಸಿ ಕೊಂಡಾಗ ಮನಸ್ಸು ಉಲ್ಲಾಸ ಭರಿತವಾಗಿರುತ್ತದೆ. ನಿವೃತ್ತ ನೌಕರರ ಸಂಘ ಹಲವು ವರ್ಷಗಳಿಂದ ಇಂತಹ ಕ್ರೀಡಾ ಚಟುವಟಿಕೆಗಳನ್ನು ಮಾದರಿಯಾಗಿ ನಡೆಸಿಕೊಂಡು ಬರುತ್ತಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಉಮೇಶ್ ಹಿರೇನೆಲ್ಲೂರು ಮಾತನಾಡಿ, ನಿವೃತ್ತ ನೌಕರರ ಸಂಘದ ಸಾಗರ ಶಾಖೆಯು ರಾಜ್ಯದಲ್ಲಿಯೇ ಮಾದರಿಯಾಗುವ ರೀತಿಯಲ್ಲಿಪ್ರತಿವರ್ಷ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ವಿಶ್ವ ಹಿರಿಯ ನಾಗರಿಕರ ದಿನಾಚರಣೆಗೆ ಸರಕಾರ ಪ್ರತಿ ಜಿಲ್ಲೆಗೆ 1 ಲಕ್ಷ ರೂ. ಅನುದಾನ ನೀಡುತ್ತದೆ. ಆದರೆ ತಾಲೂಕು ಕೇಂದ್ರಗಳಲ್ಲಿಆಯೋಜಿಸುವ ಕಾರ್ಯಕ್ರಮಗಳಿಗೆ ಅನುದಾನ ನೀಡದೆ ತಾರತಮ್ಯ ಧೋರಣೆ ಅನುಸರಿಸುತ್ತಿದೆ. ಮುಂದಿನ ದಿನಗಳಲ್ಲಿತಾಲೂಕು ಕೇಂದ್ರ ಗಳಲ್ಲಿನಡೆಯುವ ಕಾರ್ಯಕ್ರಮಗಳಿಗೂ ಸರಕಾರ ಆರ್ಥಿಕ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಸಂಘದ ಗೌರವಾಧ್ಯಕ್ಷ ಎಸ್ .ಬಸವರಾಜ್ , ರಾಜ್ಯ ಸಂಘಟನಾ ಕಾರ್ಯದರ್ಶಿ ಮ.ಸ.ನಂಜುಂಡ ಸ್ವಾಮಿ, ಸೋಮರಾಜ್ , ಎಚ್ .ಜಿ.ಸುಬ್ರಹ್ಮಣ್ಯ ಭಟ್ , ಸಿದ್ದಾನಾಯ್ ್ಕ, ದಮಯಂತಿ, ಮರಳುಸಿದ್ದಪ್ಪ, ಸತ್ಯನಾರಾಯಣ ಮತ್ತಿತರರು ಇದ್ದರು.