Protests Against Kaveri Water Regulatory Authority Order Intense Anger From Karnataka Army Officers
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶ ಖಂಡಿಸಿ ಪ್ರತಿಭಟನೆ
Contributed by: Mahadev Swamy|Vijaya Karnataka•
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶ ಖಂಡಿಸಿ ಪ್ರತಿಭಟನೆ
ಕರ್ನಾಟಕ ಸೇನಾ ಪಡೆ ಆಕ್ರೋಶವಿಕ ಸುದ್ದಿಲೋಕ ಮೈಸೂರು
ನಿತ್ಯ ತಮಿಳುನಾಡಿಗೆ 4 ಸಾವಿರ ಕ್ಯುಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶ ಖಂಡಿಸಿ ಕರ್ನಾಟಕ ಸೇನಾ ಪಡೆ ಪದಾಧಿಕಾರಿಗಳು ನಗರದಲ್ಲಿಪ್ರತಿಭಟನೆ ನಡೆಸಿದರು.
ನಗರದ ಹಳೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ಒಂದು ಕೈಯಲ್ಲಿಬೆಣ್ಣೆ, ಮತ್ತೊಂದು ಕೈಯಲ್ಲಿಸುಣ್ಣ ಹಿಡಿದು, ಕಾವೇರಿ ಪ್ರಾಧಿಕಾರ ಕನ್ನಡಿಗರಿಗೆ ಸುಣ್ಣ ಹಚ್ಚಿ, ತಮಿಳುನಾಡಿಗೆ ಬೆಣ್ಣೆ ತಿನ್ನಿಸುತ್ತಿದೆ,’’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘‘ಕಾವೇರಿ ವಿಚಾರದಲ್ಲಿಕರ್ನಾಟಕಕ್ಕೆ ಪದೇ ಪದೆ ಆಗುತ್ತಿರುವ ಅನ್ಯಾಯ ಎತ್ತಿಹಿಡಿಯಲು ಮತ್ತು ವಸ್ತುಸ್ಥಿತಿ ಅಧ್ಯಯನ ಮಾಡಲು ರಾಜ್ಯ ಸರಕಾರ ಕೂಡಲೇ ತಜ್ಞರ ಸತ್ಯಶೋಧನಾ ಸಮಿತಿ ರಚಿಸಬೇಕು. ಕನ್ನಡಿಗರ ಪಾಲಿಗೆ ಮರಣಶಾಸನವಾಗಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವನ್ನು ಕೇಂದ್ರ ಸರಕಾರ ಕೂಡಲೇ ರದ್ದುಗೊಳಿಸಬೇಕು. ರಾಜ್ಯದ ಬಹುತೇಕ ತಾಲೂಕುಗಳು ಭೀಕರ ಬರಗಾಲಕ್ಕೆ ತುತ್ತಾಗಿದ್ದು, ಜಲಾಶಯಗಳಲ್ಲಿಕುಡಿಯುವ ನೀರಿಗೂ ತೀವ್ರ ಅಭಾವ ಎದುರಾಗಿದೆ. ನಗರದ ಅನೇಕ ಬಡಾವಣೆಗಳಲ್ಲಿವಾರಕ್ಕೆ ಒಂದೆರಡು ಬಾರಿ ಮಾತ್ರ ನೀರು ಒದಗಿಸಲಾಗುತ್ತಿದೆ. ಈ ಕಠಿಣ ಪರಿಸ್ಥಿತಿಯನ್ನು ಸುಪ್ರೀಂ ಕೋರ್ಟ್ ಗೆ ಮನವರಿಕೆ ಮಾಡಿಕೊಟ್ಟು, ತಮಿಳುನಾಡಿಗೆ ನೀರು ಹರಿಸುವುದನ್ನು ಕೂಡಲೇ ನಿಲ್ಲಿಸಬೇಕು,’’ ಎಂದು ಒತ್ತಾಯಿಸಿದರು.
‘‘ನೆರೆರಾಜ್ಯ ತಮಿಳುನಾಡಿನಲ್ಲಿಬೆಳೆ ಬೆಳೆಯಲು ನೀರು ಕೇಳುತ್ತಿದ್ದರೆ, ನಮ್ಮಲ್ಲಿಕುಡಿಯುವ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿರಾಜ್ಯದ ಕಾಂಗ್ರೆಸ್ ಸರಕಾರ ತಕ್ಷಣವೇ ಸೂಕ್ತ ಕಾನೂನು ಕ್ರಮ ಕೈಗೊಂಡು ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು,’’ ಎಂದು ಆಗ್ರಹಿಸಿದರು.
ಕರ್ನಾಟಕ ಸೇನಾ ಪಡೆಯ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಪ್ರಭುಶಂಕರ್ .ಎಂ.ಬಿ., ಪ್ರಜೀಶ್ , ಶಿವಲಿಂಗಯ್ಯ, ಮಧುವನ ಚಂದ್ರು, ಗೊರೂರು ಮಲ್ಲೇಶ್ , ಸೋಮೇಗೌಡ, ಸಿಂಧುವಳ್ಳಿ ಶಿವಕುಮಾರ್ , ವರಕೂಡು ಕೃಷ್ಣೇಗೌಡ, ಹೊನ್ನೇಗೌಡ, ನೇಹಾ, ಶೋಭಾ ರಾಣಿಗೌಡ, ಬೋಗಾದಿ ಸಿದ್ದೇಗೌಡ, ನಾಗರಾಜು, ದರ್ಶನ್ ಗೌಡ, ರಾಧಾಕೃಷ್ಣ, ರಂಗಪ್ಪ, ಗಣೇಶ್ ಪ್ರಸಾದ್ , ಶಿಲ್ಪಾ, ಸುಜಾತಾ, ಜ್ಯೋತಿ, ಬಸವರಾಜು, ಪ್ರದೀಪ್ .ಆರ್ , ಆನಂದ್ , ತ್ಯಾಗರಾಜ್ , ನಾಗೇಂದ್ರ, ನಾಗೇಶ್ ಕುಮಾರ್ , ನಾರಾಯಣ ಗೌಡ, ರವೀಶ್ , ರಾಮಕೃಷ್ಣೇಗೌಡ ವಿಷ್ಣು ಇದ್ದರು.
ಫೋಟೋ
ನಿತ್ಯ ತಮಿಳುನಾಡಿಗೆ 4 ಸಾವಿರ ಕ್ಯುಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶ ಖಂಡಿಸಿ ಕರ್ನಾಟಕ ಸೇನಾ ಪಡೆ ಪದಾಧಿಕಾರಿಗಳು ನಗರದ ಹಳೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.