ಬಸವನಗದ್ದೆಯಲ್ಲಿರಕ್ತದಾನ ಶಿಬಿರ

Contributed by: mkrtth@gmail.com|Vijaya Karnataka•
successful blood donation and eye check up camp in basavanagadde
ವಿಕ ಸುದ್ದಿಲೋಕ ತೀರ್ಥಹಳ್ಳಿ ಗಣೇಶೋತ್ಸವ ಅಂಗವಾಗಿ ತಾಲೂಕಿನ ಬಸವನಗದ್ದೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿಇತ್ತೀಚೆಗೆ ವಿದ್ಯಾಗಣಪತಿ ಸೇವಾ ಸಮಿತಿ, ಬೆಂಗಳೂರಿನ ಲಯನ್ಸ್ ಕ್ಲಬ್ ಅನ್ನಪೂರ್ಣ ವತಿಯಿಂದ ಪ್ರಥಮ ಬಾರಿಗೆ ರಕ್ತದಾನ ಶಿಬಿರ , ವಾಸನ್ ಐ ಕೇರ್ ಸಹಯೋಗ ದಲ್ಲಿನೇತ್ರ ಉಚಿತ ತಪಾಸಣಾ ಕಾರ ್ಯಕ್ರಮ ನಡೆಯಿತು. 23 ಜನರು ರಕ್ತದಾನ, 82 ಜನರು ನೇತ್ರ ತಪಾಸಣೆ ಮಾಡಿಸಿಕೊಂಡರು. ಗ್ರಾಮಾಂತರ ಪ್ರದೇಶದಲ್ಲಿನಡೆದ ಗಣೇಶೋತ್ಸವದಲ್ಲಿವಿವಿಧ ಸಂಘಸಂಸ್ಥೆಗಳ ನೇತೃತ್ವದಲ್ಲಿನಡೆದ ಆರೋಗ್ಯ ಕುರಿತು ಕಾಳಜಿ ವಹಿಸುವ ಜೀವಪರ ಕಾರ ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ಲಯನ್ ಕ್ಲಬ್ ಮುಖ್ಯಸ್ಥ ಕನಕರಾಜ್ ಕಳ್ಳಿಗದ್ದೆ ಮಾತನಾಡಿದರು. ಲಯನ್ಸ್ ಕ್ಲಬ್ ಮುಖ್ಯಸ್ಥ ಕನಕರಾಜ್ ಕಳ್ಳಿಗದ್ದೆ, ವಿದ್ಯಾಗಣಪತಿ ಸೇವಾ ಸಮಿತಿ ಅಧ್ಯಕ್ಷ ಸುಬ್ರಮಣ್ಯ, ಕಾರ ್ಯದರ್ಶಿ ರಾಮಕೃಷ್ಣ, ಪ್ರಮೋದ್ , ಮೋಹನ್ , ಪ್ರದೀಪ್ , ಸುನಿಲ್ , ಆದರ್ಶ, ಆಶಾಜ್ಯೋತಿ ಫೌಂಡೇಷನ್ ನ ಸ್ವಾಮಿ, ಗ್ರಾ.ಪಂ. ಮಾಜಿ ಸದಸ್ಯೆ ಸರೋಜ, ಮುಖ್ಯಶಿಕ್ಷಿಕಿ ಅನಿತಾ ಸೂರ ್ಯ ಭಾಗವಹಿಸಿದ್ದರು.