ಸಿನಿಮಾ ಸೆಸ್ ಅರ್ಜಿ ವಿಚಾರಣೆ ಇಂದು

Contributed by: srikanth.g@timesgroup.com|Vijaya Karnataka•
easy access to chcgpi cinema halls positioning against the law providing 2 cess
ಬೆಂಗಳೂರು: ಸಿನಿಮಾ ಹಾಗೂ ಸಾಂಸ್ಕೃತಿಕ ಕಾರ್ಯಕರ್ತರ ಕಲ್ಯಾಣ ಯೋಜನೆಗಳಿಗೆ ಅನುದಾನ ಒದಗಿಸಲು ಚಿತ್ರಮಂದಿರಧಿಗಳು, ಮಲ್ಟಿಪ್ಲೆಕ್ಸ್ ಗಳಲ್ಲಿಸಿನಿಮಾ ಟಿಕೆಟ್ ದರದ ಮೇಲೆ ಶೇ.2ರಷ್ಟು ಸೆಸ್ (ಉಪಕರ) ಸಂಗ್ರಹಿಸುವುದುನ್ನು ಕಡ್ಡಾಯಗೊಳಿಸುವ ಕರ್ನಾಟಕ ಚಲನಚಿತ್ರ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಕಾಯಿದೆ-2024ರ ಸಾಂವಿಧಾನಿಕ ಸಿಂಧುತ್ವ ವಿಚಾರ ಹೈಕೋರ್ಟ್ ಮೆಟ್ಟಿಲೇರಿದೆ. ಕಾಯಿದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ, ವಿನಾಯಕ ಚಿತ್ರಮಂದಿರ ಮತ್ತಿತರರು ಸಲ್ಲಿಸಿರುವ ಅರ್ಜಿಗಳು ನ್ಯಾ.ಎಚ್ .ಟಿ. ನರೇಂದ್ರಪ್ರಸಾದ್ ಅವರಿದ್ದ ಏಕಸದಸ್ಯ ಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿದ್ದವು. ಕೆಲ ಕಾಲ ಅರ್ಜಿಗಳನ್ನು ಪರಿಶೀಲಿಸಿದ ನ್ಯಾಯಪೀಠ, ಕಾಯಿದೆ ಜಾರಿಗೆ ಬರದಿದ್ದರೂ ಸೆಸ್ ಸಂಗ್ರಹಕ್ಕೆ ನೀಡಲಾಗಿಧಿರುವ ನೋಟಿಸ್ ಗಳಿಗೆ ಬೇರೆ ಅರ್ಜಿಗಳಲ್ಲಿಈಗಾಗಲೇ ತಡೆ ನೀಡಲಾಗಿದೆ. ಈ ಅರ್ಜಿಗಳಲ್ಲಿಕಾಯಿದೆಯ ಸಿಂಧುತ್ವವನ್ನು ಪ್ರಶ್ನಿಸಲಾಗಿದೆ. ಆದ್ದರಿಂದ ಈ ವಿಚಾರವನ್ನು ಅಡ್ವೊಕೇಟ್ ಜನರಲ್ ಅವರ ಗಮನಕ್ಕೆ ತರುವಂತೆ ಸರಕಾರದ ಪರ ವಕೀಲರಿಗೆ ಸೂಚಿಸಿದ ನ್ಯಾಯಪೀಠ, ವಿಚಾರಣೆಯನ್ನು ಬುಧವಾರಕ್ಕೆ (ಸೆ.30) ಮುಂದೂಡಿತು.