ವಿಕ ಸುದ್ದಿಲೋಕ ಶಿಡ್ಲಘಟ್ಟ ತಾಲೂಕಿನ ವಸತಿ ಶಾಲೆಯೊಂದರ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿವಸತಿ ಶಾಲೆಯ ಪ್ರಿನ್ಸಿಪಾಲ್ ವಿರುದ್ಧ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿದೂರು ದಾಖಲಾಗಿದೆ. ದಿಬ್ಬೂರಹಳ್ಳಿ ಠಾಣೆ ವ್ಯಾಪ್ತಿಯ ವಸತಿ ಶಾಲೆಯಲ್ಲಿನ 9ನೇ ತರಗತಿಯ ಅಪ್ರಾಪ್ತೆ ನೀಡಿದ ದೂರಿನ ಮೇರೆಗೆ ಪ್ರಿನ್ಸಿಪಾಲ್ ಈಶ್ವರ್ ರೆಡ್ಡಿ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ. ಓದು ಬರಹವನ್ನು ಹೇಳಿಕೊಡುವ ನೆಪದಲ್ಲಿಕೊಠಡಿಗೆ ಬಾಲಕಿಯನ್ನು ಕರೆಸಿಕೊಂಡು ಅವಳ ವಿರೋಧದ ನಡುವೆಯೂ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಒಮ್ಮೆ ಬಾಲಕಿಯು ಕೊಠಡಿಯಿಂದ ಅಳುತ್ತಾ ಹೊರ ಬಂದಿದ್ದನ್ನು ವಸತಿ ಶಾಲೆಯ ಶಿಕ್ಷಕಿ ಗಮನಿಸಿದ್ದು, ಆಕೆಯನ್ನು ವಿಚಾರಿಸಿದಾಗ ಪ್ರಿನ್ಸಿಪಾಲ್ ನಡೆದುಕೊಂಡು ರೀತಿ ಬಗ್ಗೆ ಹೇಳಿಕೊಂಡಿದ್ದಾಳೆ. ಸಂತ್ರಸ್ತ ಬಾಲಕಿ ನೀಡಿದ ದೂರಿನ ಮೇರೆಗೆ ದಿಬ್ಬೂರಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಾಲಕಿಗೆ ಬಾಲಕಿಯರ ಬಾಲಮಂದಿರದಲ್ಲಿಸಧ್ಯ ಆಶ್ರಯ ನೀಡಲಾಗಿದೆ.