ಬಸವಕಲ್ಯಾಣ : ಅಣ್ಣ-ತಮ್ಮಂದಿರ ನಡುವೆ ಶುರುವಾದ ಜಗಳ ಕೊಲೆಯಲ್ಲಿಅಂತ್ಯವಾದ ಘಟನೆ ಸೋಮವಾರ ತಡರಾತ್ರಿ ತಾಲೂಕಿನ ಶಿವಪುರ ಗ್ರಾಮದಲ್ಲಿನಡೆದಿದೆ. ಗ್ರಾಮದ ನಿವಾಸಿ ಸಚಿನ್ ಗೋವಿಂದರಾವ (26) ಹತ್ಯೆಗೀಡಾದವರು. ಮದ್ಯ ಸೇವಿಸಿ ಮನೆಯಲ್ಲಿಕುಟುಂಬಸ್ಥರೊಂದಿಗೆ ನಿತ್ಯ ಜಗಳವಾಡುತ್ತಿದ್ದ ಸಚಿನ್ ಮತ್ತು ಈತನ ಅಣ್ಣ ನಿತಿನ್ ಮಧ್ಯೆ ಕ್ಷುಲಕ ಕಾರಣಕ್ಕೆ ಮದ್ಯದ ಅಮಲಿನಲ್ಲಿಗಲಾಟೆಯಾಗಿದೆ. ಮಾತಿಗೆ ಮಾತು ಬೆಳೆದು ಅಣ್ಣ ನಿತಿನ್ ಆತನು ತಮ್ಮನಾದ ಸಚಿನ್ ಗೆ ಕಲ್ಲಿನಿಂದ ಹೊಡೆದು ಹತ್ಯೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಘಟನಾ ಸ್ಥಳಕ್ಕೆ ಎಸ್ ಪಿ ಪ್ರದೀಪ ಗುಂಟಿ, ಹುಮನಾಬಾದ್ ಡಿವೈಎಸ್ಪಿ ಮಡೋಳಪ್ಪ, ಬಸವಕಲ್ಯಾಣ ಸಿಪಿಐ ಅಲಿಸಾಬ್ , ಪಿಎಸ್ ಐ ಚಂದ್ರಶೇಖರ ಭೇಟಿ ನೀಡಿ ಪರಿಶೀಲಿಸಿದರು. ಕೊಲೆ ಮಾಡಿದ ನಿತಿನ್ ಗೆ ಬಂಧಿಸಲಾಗಿದೆ. ಈ ಕುರಿತು ಬಸವಕಲ್ಯಾಣ