100 ರೂ. ಸಲುವಾಗಿ ಯುವಕನ ಕೊಲೆ!

Contributed by: skchoudhari121@gmail.com|Vijaya Karnataka•
murder of a youth for 100 rupees two accused arrested after victims demand
ವಿಕ ಸುದ್ದಿಲೋಕ ಅಫಜಲಪುರ ಬೈಕ್ ಗೆ ಪೆಟ್ರೋಲ್ ತಂದುಕೊಟ್ಟು 100 ರೂ. ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದಕ್ಕಾಗಿ ಯುವನನ್ನು ಕೊಲೆ ಮಾಡಿದ ಇಬ್ಬರು ಆರೋಪಿಗಳನ್ನು ಗಾಣಗಾಪುರ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಖಲೀಂ ಸಾಬ್ (22)ಕೊಲೆಯಾದವ. ಕೊಲೆ ಆರೋಪಿಗಳಾದ ನಂದಿಕೂರ ತಾಂಡಾದ ಸಂದೀಪ್ ಪವಾರ್ ಮತ್ತು ಸಂದೀಪ್ ಚವ್ಹಾಣ್ ಗೆ ಪೊಲೀಸರು ಬಂಧಿಸಿದ್ದಾರೆ. ಸೆ.25ರಂದು ಗ್ರಾಮದ ಹೊಲದಲ್ಲಿಕೈ, ಕಾಲು, ತಲೆ ಕತ್ತರಿಸಿದ ಸ್ಥಿತಿಯಲ್ಲಿಯುವಕನ ಶವ ಸಿಕ್ಕಿತ್ತು. ನಂತರದ ಪೊಲೀಸ್ ತನಿಖೆಯಲ್ಲಿಗೊಬ್ಬುರ(ಬಿ) ಗ್ರಾಮದ ಖಲೀಂ ಸಾಬ್ (22) ಎಂಬುದು ತಿಳಿದು ಬಂದಿತ್ತು. ಕೊಳೆತ ಸ್ಥಿತಿಯಲ್ಲಿದೊರೆತ ಶವ ಹಾಗೂ ಯಾವುದೇ ಸಾಕ್ಷ್ಯಗಳು ಇಲ್ಲದ ಕಾರಣ ಪ್ರಕರಣ ಜಟಿಲತೆಯಿಂದ ಕೂಡಿತ್ತು. ಕೊನೆಗೂ ತನಿಖೆ ನಡೆಸಿದಾಗ ಕೊಲೆಗೆ ಕಾರಣ ಪತ್ತೆಯಾಯಿತು. ಘಟನೆ ಹಿನ್ನೆಲೆ: ಆರೋಪಿಗಳು ಗಾಣಗಾಪುರಕ್ಕೆ ಹೋಗಿ ವಾಪಸ್ ಬರುವಾಗ ತಮ್ಮ ಬೈಕ್ ನಲ್ಲಿನ ಪೆಟ್ರೋಲ್ ಖಾಲಿಯಾದ ಕಾರಣ ಬೈಕ್ ತಳ್ಳಿಕೊಂಡು ಬರುತ್ತಿದ್ದರು. ಆಗ ಭೇಟಿಯಾದ ಖಲೀಂ ಸಾಬ್ ಇವರನ್ನು ಮಾತನಾಡಿ, ‘ಪೆಟ್ರೋಲ್ ತಂದು ಕೊಡುತ್ತೇನೆ, ನನಗೆ ಹಣ ಕೊಡಬೇಕು’ ಎಂದು ಬೇಡಿಕೆ ಇಟ್ಟಿದ್ದನು. ಅದರಂತೆ ಪೆಟ್ರೋಲ್ ಕೂಡ ತಂದು ಕೊಟ್ಟಿದ್ದ. ಆರೋಪಿಗಳು ಖಲೀಂ ಸಾಬ್ ಗೆ 200 ರೂ. ಕೊಟ್ಟಿದ್ದಾರೆ. ಆದರೆ ‘ನೀವು ಕೊಟ್ಟ ಹಣ ಸಾಕಾಗಿಲ್ಲ’ ಇನ್ನೂ 100 ರೂ. ನೀಡಿ ಎಂದು ಆರೋಪಿಗಳನ್ನು ಪೀಡಿಸಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಅಂತ್ಯದಲ್ಲಿಚಾಕುವಿನಿಂದ ಕೊಲೆ ಮಾಡಿದ್ದಾರೆ. ನಂತರ ರುಂಡ ಮುಂಡ ಬೇರೆ ಮಾಡಿ ಯಾರಿಗೂ ತಿಳಿಯಬಾರದು ಎಂದು ಶವವನ್ನು ಸಮೀಪದ ತೊಗರಿ ಹೊಲದಲ್ಲಿಎಸೆದು ಹೋಗಿದ್ದರು ಎಂಬುದು ವಿಚಾರಣೆಯಲ್ಲಿಬಯಲಾಗಿದೆ. ಎಸ್ ಪಿ ಅಡ್ಡೂರು ಶ್ರೀನಿವಾಸುಲು, ಎಎಸ್ ಪಿ ಮಹೇಶ್ ಮೇಘಣ್ಣವರ ಮಾರ್ಗದರ್ಶನದಲ್ಲಿಡಿವೈಎಸ್ ಪಿ ತಮ್ಮರಾಯ ಪಾಟೀಲ…, ಸಿಪಿಐ ಲಖನ್ ಮಸಗುಪ್ಪಿ, ಪಿಎಸ್ ಐ ಸಂಗೀತಾ ಸಿಂಧೆ ಸೇರಿ ಸಿಬ್ಬಂದಿ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.