ಸಿದ್ಧಲಿಂಗಸ್ವಾಮಿ ಕುಣಿಗಲ್ (ತುಮಕೂರು) sಜಿdd್ಠvಜ್ಜಿayka್ಟ್ಞaಠಿakaಃಜಞaಜ್ಝಿ.್ಚಟಞ ಗುಣಮಟ್ಟದಲ್ಲಿವಿಶ್ವಮಾನ್ಯತೆ ಹೊಂದಿರುವ ರಾಜ್ಯದ ಸಾಂಪ್ರದಾಯಿಕ ಮೈಸೂರು ಬಿತ್ತನೆ ರೇಷ್ಮೆಗೆ ಅಸ್ತಿತ್ವದ ಸವಾಲು ಎದುರಾಗಿದೆ. ಗೂಡು ಉತ್ಪಾದನೆ ಏರಿಕೆಯ ದಾಖಲೆಧಿಧಿಯಿಂದ ಕುಸಿತದ ಕನಿಷ್ಠ ಮಟ್ಟಕ್ಕೆ ತಲುಪಿದೆ. 2018-19ಧಿರಲ್ಲಿ6,744.87 ಲಕ್ಷ ಗೂಡು ಉತ್ಪಾದನೆಧಿಯಾಗಿದ್ದು, ಅದೇ ಇದುವರೆಗಿನ ಗರಿಷ್ಠ ದಾಖಲೆಯಾಗಿದೆ. ಆದರೆ, 2025-26ರಲ್ಲಿಉತ್ಪಾದನೆ 4,419.90 ಲಕ್ಷ ಗೂಡಿಗೆ ಇಳಿದಿದ್ದು, ಇದು ಕನಿಷ್ಠ ಉತ್ಪಾದನೆಯಾಗಿದೆ. ಹಿಂದಿನ ಗರಿಷ್ಠ ಉತ್ಪಾದನೆಗೆ ಹೋಲಿಸಿದರೆ 2025-26ರಲ್ಲಿ2,324.97 ಲಕ್ಷ ಗೂಡು ಕಡಿಮೆಯಾಗಿದ್ದು, ಶೇ.34.47 ಇಳಿಕೆ ದಾಖಲಾಗಿದೆ. ಮೈಸೂರು ಬಿತ್ತನೆ ರೇಷ್ಮೆಯ ವಿಶಿಷ್ಟ ತಳಿಯನ್ನು ಉಳಿಸಿಕೊಳ್ಳುವ ಸಾಮರ್ಥ್ಯ, ರೈತರ ಕೃಷಿ ಆಯ್ಕೆ ಹಾಗೂ ಬಿತ್ತನೆ ವಲಯದ ನಿರ್ವಹಣೆ ಕುರಿತು ಗಂಭೀರ ಚರ್ಚೆಗೆ ಕಾರಣವಾಗಿದೆ. ವಿಮುಖರಾದ ರೈತರು: ಕುಣಿಗಲ್ , ಮಾಗಡಿ ಹಾಗೂ ತುಮಕೂರು ತಾಲೂಕಿನ ಹೆಬ್ಬೂರು ಹೋಬಳಿಗಳು ಮೈಸೂರು ರೇಷ್ಮೆ ಬಿತ್ತನೆ ವಲಯದ ಕೇಂದ್ರ ಬಿಂದುವಾಗಿದೆ. ರೇಷ್ಮೆ ಬಿತ್ತನೆ ಸುಮಾರು ಎರಡು ಶತಮಾನಗಳ ಇತಿಹಾಸ ಹೊಂದಿದೆ. ಬೋನಸ್ ಮತ್ತು ಪ್ರೋತ್ಸಾಹಧನದಲ್ಲಿವಿಳಂಬ, ರೇಷ್ಮೆ ಇಲಾಖೆಯ ನಿಯಂತ್ರಣದ ಕೊರತೆಯಿಂದಾಗಿ ರೈತರು ಸಾಂಪ್ರದಾಯಿಕ ಬಿತ್ತನೆ ತಳಿಯ ಬದಲು ಮಿಶ್ರತಳಿ ರೇಷ್ಮೆ ಕೃಷಿಯತ್ತ ಮುಖ ಮಾಡುತ್ತಿದ್ದಾರೆ. ಇದು ರೇಷ್ಮೆ ಉತ್ಪಾದನಾ ಭವಿಷ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಮಿಶ್ರತಳಿ, ಬೈವೋಲ್ಟೆನ್ ತಳಿಗೆ ಏಕೆ ಆಸಕ್ತಿ?: ಚಾಕಿ ಮಾಡಿದ ರೇಷ್ಮೆ ಹುಳಗಳನ್ನು ರೈತರಿಗೆ ಕೊಡುವುದರಿಂದ 15 ದಿನದಲ್ಲಿಮಿಶ್ರತಳಿ, ಬೈವೋಲ್ಟೆನ್ ಗೂಡು ಉತ್ಪಾದನೆಯಾಗು ತ್ತದೆ. ಮೈಸೂರು ರೇಷ್ಮೆ ಬೆಳೆಯುವುದು ಸೂಕ್ಷ್ಮ. ಅದು ಚಾಕಿ ಮಾಡಲು 15, ಗೂಡು ಬರಲು 15 ದಿನ ಸೇರಿ ಉತ್ಪಾದನೆ ಕನಿಷ್ಠ 1 ತಿಂಗಳು ಬೇಕು. ಮೈಸೂರು ರೇಷ್ಮೆ ಹುಳುಗಳಿಗೆ ಸೊಪ್ಪುಗಳನ್ನು ಸಣ್ಣದಾಗಿ ಕತ್ತರಿಸಿ ಹಾಕಬೇಕು, ಅದೇ ಮಿಶ್ರ ತಳಿಗೆ ಸೊಪ್ಪು ಕೊಚ್ಚುವ ಅವಶ್ಯಕತೆಯಿಲ್ಲ, ದನದ ಕೊಟ್ಟಿಗೆಗೆ ಸೊಪ್ಪು ಹಾಕಿದಂತೆ ಹಾಕಿದರೂ ತಿಂದುಕೊಳ್ಳುತ್ತವೆ. ಮಿಶ್ರತಳಿಗೆ ಹೋಲಿಸಿದರೆ ಮೈಸೂರು ಬಿತ್ತನೆಗೆ ಹಣ ಪಾವತಿ ವಿಳಂಬ, ದರ ಏರಿಳಿತ ಇರುತ್ತದೆ. ಉದಾಹರಣೆಗೆ ಕಳೆದ 14 ತಿಂಗಳಿಂದ ಮೈಸೂರು ಬಿತ್ತನೆ ಪ್ರೋತ್ಸಾಹಧನ ಹಾಗೂ ಬೋನಸ್ ಬಂದಿಲ್ಲ. ಉತ್ಪಾದನೆ ಸವಾಲು, ಆರ್ಥಿಕ ಲಾಭ-ನಷ್ಟದ ಲೆಕ್ಕಾಚಾರದಲ್ಲಿಇದಕ್ಕೆ ಅಸ್ತಿತ್ವದ ಆತಂಕ ಎದುರಾಗಿದೆ. ಮೈಸೂರು ಬಿತ್ತನೆ ಏಕೆ ಮುಖ್ಯ?: ಟಿಪ್ಪು ಸುಲ್ತಾನನ ಕಾಲದ ಮೈಸೂರು ಬಿತ್ತನೆ ರೇಷ್ಮೆ ಗೂಡು ಎಲ್ಲಾತಳಿಗಳ ರೇಷ್ಮೆ ಉತ್ಪಾದನೆಗೆ ಬೇಕೇ ಬೇಕು. ಇಡೀ ರಾಜ್ಯಕ್ಕೆ ಬಿತ್ತನೆ ಗೂಡು ಪೂರೈಸುವುದು ಮೈಸೂರು ಬಿತ್ತನೆ ವಲಯ ಮಾತ್ರ. ಬಿತ್ತನೆ ವಲಯದ ರೇಷ್ಮೆ ಗಂಡು ರೇಷ್ಮೆ. ಈ ತಳಿ ಇಲ್ಲದಿದ್ದರೆ ಇಡೀ ರೇಷ್ಮೆ ಕೃಷಿಗೇ ಹೊಡೆತ ಬೀಳುತ್ತದೆ.