ಆಭರಣ

Contributed by: shubha.hegde@timesgroup.com|Vijaya Karnataka•
oxidized jewelry exuding grandeur on the hands
ಬಾಲಿವುಡ್ಡಿಗರ ಬೆಳ್ಳಿ ಒಡವೆಯ ಬೆಡಗು

ಶುಭಾ
ಇಂಟ್ರೊ: ಬಾಲಿವುಡ್ ನಟಿಯರು ಆಗಾಗ ಆಕ್ಸಿಡೈಸ್ಡ್ ಸಿಲ್ವರ್ ಆಭರಣಗಳ ಜೊತೆ ವಿಭಿನ್ನ ಸ್ಟೈಲ್ ನೊಂದಿಗೆ ಗಮನ ಸೆಳೆಯುತ್ತಾರೆ.

ಮೂಗಿನ ಮೇಲೆ ಕುಳಿತು ಇಡೀ ಮುಖದ ಅಂದ ಹೆಚ್ಚಿಸುವ ಮುಗೂತಿ, ಕತ್ತನ್ನು ಬಿಗಿದು ಹಿಡಿದ ಚೋಕರ್ಸ್, ಕಿವಿಯಲ್ಲಿನೇತಾಡುವ ರಿಂಗಿನೊಂದಿಗೆ ಬೆರೆತ ದೊಡ್ಡ ಗಾತ್ರದ ಜುಮುಕಿ, ಮುಂಗೈ ಬೆಸೆದ ಹತ್ತಾರು ಗೊಂಚಲ ಬಳೆ, ಕಾಲಲ್ಲಿಸದ್ದು ಮಾಡುವ ಗೆಜ್ಜೆಯ ನಾದದೊಂದಿಗೆ ಆಕ್ಸಿಡೈಸ್ಡ್ ಸಿಲ್ವರ್ ಎನ್ನುವ ಆಭರಣ ಲೋಕ ಅರಳುತ್ತದೆ. ಒಂದಷ್ಟು ವರ್ಷಗಳಿಂದಲೂ ಸ್ಟ್ರೀಟ್ ಫ್ಯಾಷನ್ ನಲ್ಲಿಮೇಲ್ಪಂಕ್ತಿಯಲ್ಲಿಇರುವ ಈ ಬಗೆಯ ಆಭರಣಗಳು ಇಂದು ಬೃಹತ್ ಮಳಿಗೆಯೊಳಗೆ ತಮ್ಮ ಸಾಮ್ರಾಜ್ಯ ವಿಸ್ತರಿಸಿವೆ. ಈ ಮೂಲಕ ಆಕ್ಸಿಡೈಸ್ಡ್ ಸಿಲ್ವರ್ ಆಭರಣಗಳು ಸಾಮಾನ್ಯ ಹುಡುಗಿಯರಿಂದ ಸೆಲೆಬ್ರಿಟಿಗಳವರೆಗೂ ಆಪ್ತವಾಗಿವೆ. ಈ ಮೂಲಕ ಆಕ್ಸಿಡೈÓ್ಡ… ಸಿಲ್ವರ್ ಆಭರಣಗಳು ಪ್ರಸ್ತುತ ಫ್ಯಾಷನ್ ಲೋಕದಲ್ಲಿಹೊಸ ಕ್ರಾಂತಿ ಮಾಡಿವೆ.

ಆಕರ್ಷಕ ವಿನ್ಯಾಸ

ವಿಶಿಷ್ಟವಾದ ಕಪ್ಪು-ಬೆಳ್ಳಿಯ ಮಿಶ್ರಣದ ವಿನ್ಯಾಸ ಹೊಂದಿರುವ ಆಕ್ಸಿಡೈÓ್ಡ… ಸಿಲ್ವರ್ ಆಭರಣಗಳು ವಿಂಟೇಜ್ ಲುಕ್ ಹಾಗೂ ಆಧುನಿಕ ಶೈಲಿಯ ಸುಂದರ ಸಂಗಮ. ಹೂವು, ಬಳ್ಳಿ, ದೇವತೆ ಮತ್ತಿತರ ವಿಭಿನ್ನ ಚಿತ್ತಾರಗಳ ಜೊತೆಗೆ ವಿಭಿನ್ನ ಆಕರಗಳೊಂದಿಗೆ ಗಮನ ಸೆಳೆಯುವ ಇವುಗಳನ್ನು ಸಾಂಪ್ರದಾಯಿಕ ಸೀರೆಗಳು, ಬೊಹೆಮಿಯನ್ ಫ್ಯೂಷನ್ ಉಡುಪುಗಳು ಅಥವಾ ಮಾಡರ್ನ್ ವೆಸ್ಟ್ರನ್ ಉಡುಗೆಗಳ ಜೊತೆಗೂ ಧರಿಸಬಹುದು. ಕೈಗೆಟುಕುವ ಬೆಲೆಯಲ್ಲಿಐಷಾರಾಮಿ ಲುಕ್ ನೀಡುತ್ತವೆ ಎಂಬುದೇ ಆಕ್ಸಿಡೈಸ್ಡ್ ಸಿಲ್ವರ್ ಜುವೆಲ್ಲರಿಯ ಆಕರ್ಷಣೆಯ ಹಿಂದಿನ ಗುಟ್ಟು.

ಒಂದಿಡೀ ಲುಕ್ ಬದಲಿಸುವ ಆಕ್ಸಿಡೈಸ್ಡ್ ಆಭರಣ ಈಗ ಸಾಮಾನ್ಯ ದಿನಕ್ಕೂ ಹಾಗೂ ಹಬ್ಬಕ್ಕೂ ಸೈ ಎನಿಸಿದೆ. ದೇಸಿ ಫ್ಯೂಷನ್ ನಿಂದ ಹಿಡಿದು ಕ್ಲಾಸಿಕ್ ಸೀರೆಗಳವರೆಗೆ ಬಾಲಿವುಡ್ ನ ಖ್ಯಾತ ನಟಿಯರು ತಮ್ಮ ಉಡುಪುಗಳೊಂದಿಗೆ ಬೆಳ್ಳಿ ಆಭರಣಗಳನ್ನು ಸ್ಟೈಲ್ ಮಾಡಿ ಈ ಆಭರಣದ ಸೊಬಗನ್ನು ಇನ್ನಷ್ಟು ಇಮ್ಮಡಿಸಿದ್ದಾರೆ.

ನಟಿಯರ ನವೀನ ಸ್ಟೈಲ್

ನಟಿ ಸೋನಮ್ ಕಪೂರ್ ಬುಡಕಟ್ಟು ಶೈಲಿಯ ಉಡುಪಿಗೆ ಹೊಕ್ಕುಳಿನ ಭಾಗದವರೆಗೂ ತಲುಪುವ ಬೃಹತ್ ಬೆಳ್ಳಿಯ ಹಾರವನ್ನು ತೊಟ್ಟು ವಿಶಿಷ್ಟ ಬೋಹೀಮಿಯನ್ ಲುಕ್ ನಲ್ಲಿಕಾಣಿಸಿಕೊಂಡಿದ್ದು ಗಮನ ಸೆಳೆದಿತ್ತು. ಇನ್ನೂ ಹಲವು ಸಂದರ್ಭಗಳಲ್ಲಿಇವರು ಆಕ್ಸಿಡೈಸ್ಡ್ ಸಿಲ್ವರ್ ಆಭರಣಗಳನ್ನು ಬೇರೆ ಬೇರೆ ಬಗೆಯ ಉಡುಪುಗಳೊಂದಿಗೆ ಪ್ರಯೋಗ ಮಾಡಿದ್ದಾರೆ. ರವೀನಾ ಟಂಡನ್ ಕೂಡ ದೊಡ್ಡ ಗಾತ್ರದ ಬೆಳ್ಳಿಯ ಜುಮಕಿಗಳನ್ನು ಜೋಡಿಸಿ ತಮ್ಮ ದೇಸಿ ಲುಕ್ ನೊಂದಿಗೆ ಮೋಡಿ ಮಾಡಿದ್ದಾರೆ. ಶ್ವೇತವರ್ಣದ ತರುಣ್ ತಹಿಲಿಯಾನಿ ಸೀರೆಯೊಂದಿಗೆ ರಕುಲ್ ಪ್ರೀತ್ ಸಿಂಗ್ ಡಿಸೈನರ್ ಚೋಕರ್ ಧರಿಸಿ ಅತ್ಯಾಕರ್ಷಕ ಶೈಲಿಯನ್ನು ಪ್ರದರ್ಶಿಸಿದ್ದಾರೆ. ಪ್ರಿಂಟೆಡ್ ಸೀರೆಗೆ ಮಲೈಕಾ ಅರೋರಾ ಭಾರವಾದ ಶ್ಯಾಂಡಲಿಯರ್ ಶೈಲಿಯ ಬೆಳ್ಳಿ ಕಿವಿಯೋಲೆಗಳನ್ನು ಧರಿಸಿ ಫ್ಯಾಷನ್ ವೈಬ್ ನೀಡಿದ್ದಾರೆ. ವಿದ್ಯಾ ಬಾಲನ್ ಅವರು ಮೂರು ಎಳೆಯ ಬೆಳ್ಳಿಯ ಮಟರ್ ಮಾಲಾ ಧರಿಸಿ ಸಾಂಪ್ರದಾಯಿಕ ಸೌಂದರ್ಯವನ್ನು ಮೆರೆದಿದ್ದಾರೆ. ಕೈಮಗ್ಗದ ಸೀರೆಗಳಿಗೆ ದಪ್ಪನೆಯ ಬೆಳ್ಳಿಯ ನೆಕ್ಲೇಸ್ ಗಳು, ವಿಶಿಷ್ಟ ಉಂಗುರಗಳು ಮತ್ತು ಮೂಗುತಿಯನ್ನು ಧರಿಸಿ ರಾಜಗಾಂಭೀರ್ಯದ ಲುಕ್ ತೋರುತ್ತಾರೆ. ಇವರು ಹಲವು ಬಾರಿ ಆಕ್ಸಿಡೈಸ್ಡ್ ಸಿಲ್ವರ್ ಆಭರಣಗಳಲ್ಲಿಮಿಂಚಿದ್ದಾರೆ. ತಮನ್ನಾ ಭಾಟಿಯಾ ಬೃಹತ್ ಬೆಳ್ಳಿಯ ಹಾರವನ್ನು ತೊಟ್ಟು ರಾಯಲ್ ಲುಕ್ ಪಡೆದುಕೊಂಡಿದ್ದಾರೆ. ಅನುಷ್ಕಾ ಶರ್ಮಾ ದೊಡ್ಡ ಗಾತ್ರದ ಆಕ್ಸಿಡೈÓ್ಡ… ಇಯರ್ ರಿಂಗ್ಸ್ ಗಳನ್ನು ಎಥ್ನಿಕ್ ಮತ್ತು ಫ್ಯೂಷನ್ ಉಡುಗೆಗಳೊಂದಿಗೆ ಧರಿಸಿ ಸರಳ ಹಾಗೂ ಆಕರ್ಷಕ ಲುಕ್ ನಲ್ಲಿಕಾಣಿಸಿದ್ದರು. ಇನ್ನೂ ಹಲವು ನಟಿಯರು ಆಕ್ಸಿಡೈಸ್ಡ್ ಸಿಲ್ವರ್ ಆಭರಣಗಳನ್ನು ವಿಭಿನ್ನ ಸ್ಟೈಲ್ ನೊಂದಿಗೆ ಅದರ ವೈಭವ ಹೆಚ್ಚಿಸಿದ್ದಾರೆ.