ಕ್ರೈಂ

Contributed by: bhrahmanand.arali@timesgroup.com|Vijaya Karnataka•
seizure of large quantity of ration rice and arrests for selling marijuana in colony
45 ಕ್ವಿಂಟಾಲ್ ಪಡಿತರ ಅಕ್ಕಿ ಜಪ್ತಿ ವಿಕ ಸುದ್ದಿಲೋಕ ಕಲಬುರಗಿ ನಗರದ ಹೊರವಲಯದ ರೆಹಮತ್ ನಗರ ಕಾಲೊನಿಯಲ್ಲಿಕಾನೂನುಬಾಹಿರವಾಗಿ ಸಂಗ್ರಹಿಸಿಟ್ಟಿದ್ದ ಭಾರಿ ಪ್ರಮಾಣದ ಸಾರ್ವಜನಿಕ ಪಡಿತರ ಅಕ್ಕಿಯನ್ನು ಆಹಾರ ನಿರೀಕ್ಷಕರು ಮತ್ತು ಪೊಲೀಸರು ಜಂಟಿ ದಾಳಿ ನಡೆಸಿ ಜಪ್ತಿ ಮಾಡಿದ್ದಾರೆ. ರೆಹಮತ್ ನಗರ ಕಾಲೊನಿಯ ಮಹಮ್ಮದ ಫಾರುಕ್ ಎಂಬಾತನ ಮನೆಯಲ್ಲಿಸರಕಾರದ ನಾನಾ ಯೋಜನೆಗಳಿಗೆ ಹಾಗೂ ಪಡಿತರ ಚೀಟಿದಾರರಿಗೆ ವಿತರಿಸಲು ಮೀಸಲಿಟ್ಟಿದ್ದ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ, ಹೆಚ್ಚಿನ ಬೆಲೆಗೆ ಕಾಳಸಂತೆಯಲ್ಲಿಮಾರಾಟ ಮಾಡಲು ಯೋಜಿಸಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಆಹಾರ ನಿರೀಕ್ಷಕಿ ವಿದ್ಯಾಶ್ರೀ ಪಾಟೀಲ್ ಹಾಗೂ ವಿಶ್ವವಿದ್ಯಾಲಯ ಠಾಣೆಯ ಪೊಲೀಸರು ಜಂಟಿಯಾಗಿ ಮನೆ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಮನೆ ಬೀಗ ಮುರಿದು ತಪಾಸಣೆ ನಡೆಸಿದಾಗ ರೂ.1,53,680 ಮೌಲ್ಯದ 20 ಕೆ.ಜಿ ತೂಕದ ಒಟ್ಟು 105 ಚೀಲದಲ್ಲಿದ್ದ 45 ಕ್ವಿಂಟಾಲ್ ಪಡಿತರ ಅಕ್ಕಿ ಪತ್ತೆಯಾಗಿದೆ. ದಾಳಿಯ ಸುಳಿವು ಅರಿತ ಆರೋಪಿ ಮಹಮ್ಮದ ಫಾರುಕ್ ಸ್ಥಳದಿಂದ ತಲೆಮರೆಸಿಕೊಂಡಿದ್ದಾನೆ. ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿಅಗತ್ಯ ವಸ್ತುಗಳ ಕಾಯಿದೆ 1955 ರ ಕಲಂ 3 ಮತ್ತು 7 ರ ಅಡಿಯಲ್ಲಿಪ್ರಕರಣ ದಾಖಲಾಗಿದೆ. ಗಾಂಜಾ ಮಾರಾಟ: ಬಂಧನ ಕಲಬುರಗಿ: ನಗರದ ರೋಜಾ ಮಾರ್ಕೆಟ್ ನ ಅಕ್ಬರಿ ಮಸೀದಿ ಬಳಿ ಅಕ್ರಮವಾಗಿ ಗಾಂಜಾ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಇಬ್ಬರು ಮಹಿಳೆಯರು ಸೇರಿ ಮೂವರು ಆರೋಪಿಗಳನ್ನು ರೋಜಾ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ರೋಜಾ ಠಾಣೆ ಪಿಎಸ್ ಐ ಸುಲೋಚನಾ ಅವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಸೀನ್ ಆಫ್ ಕ್ರೈಮ್ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಮಾರ್ಕೆಟ್ ಜಾಗಕ್ಕೆ ದಾಳಿ ನಡೆಸಲಾಗಿತ್ತು. ಈ ವೇಳೆ ಸಂಶಯಾಸ್ಪದವಾಗಿ ಕುಳಿತಿದ್ದ ಮೂವರನ್ನು ತಪಾಸಣೆಗೆ ಒಳಪಡಿಸಿದಾಗ ಅವರ ಬಳಿ ಇದ್ದ ಪ್ಲಾಸ್ಟಿಕ್ ಕವರ್ ಗಳಲ್ಲಿಒಣಗಿದ ಗಾಂಜಾ ಎಲೆ ಮತ್ತು ಬೀಜ ಪತ್ತೆಯಾಗಿವೆ. ನಬಿ ಸೈಯದ್ ಮಹೆಬೂಬ್ ಸಾಬ್ , ರಸೂಲ್ ಬೀ ಸೈಯದ್ ಮಹೆಬೂಬ್ ಸಾಬ್ , ಹೀನಾ ಪರವೀನ ಮೊಹಮ್ಮದ್ ಇಬ್ರಾಹಿಂ ಬಂಧಿತರು. ಇವರಿಂದ ಒಟ್ಟು 60 ಗ್ರಾಂ ಗಾಂಜಾ ಹಾಗೂ ಮಾರಾಟದ ಹಣವನ್ನು ಜಪ್ತಿ ಮಾಡಲಾಗಿದೆ ಎಂದು ದೂರಿನಲ್ಲಿತಿಳಿಸಿದ್ದಾರೆ.