ಇಂದೇ ಇಂದು ಲಕ್ಷ ಆಕ್ಷೇಪಣಾ ಪತ್ರ ಸಲ್ಲಿಕೆಗೆ

Contributed bykeregaddemurthy@gmail.com|Vijaya Karnataka
a million objection letters for environmental achievement
ಇಂದು ಲಕ್ಷ ಆಕ್ಷೇಪಣಾ ಪತ್ರ ಸಲ್ಲಿಕೆಗೆ ಚಾಲನೆ

ವಿಕ ಸುದ್ದಿಲೋಕ ಶಿರಸಿ
ಜಿಲ್ಲೆಯಲ್ಲಿ567 ಹಳ್ಳಿಗಳನ್ನು ಅತೀ ಸೂಕ್ಷತ್ರ್ಮ ಪ್ರದೇಶವೆಂದು ಗುರುತಿಸಿದ ಕಸ್ತೂರಿರಂಗನ್ ವರದಿಯ 7ನೇ ಅಧಿಸೂಚನೆಗೆ 1ಲಕ್ಷ ಆಕ್ಷೇಪಣಾ ಪತ್ರ ಸಲ್ಲಿಸುವ ಅಭಿಯಾನ ಸೆ.5ರಂದು ನಗರದಲ್ಲಿಆರಂಭಗೊಳ್ಳಲಿದೆ.

2 ಹಂತದಲ್ಲಿಸೆ.7 ಹೊನ್ನಾವರ ಹಾಗೂ 9ರಂದು ಅಂಕೋಲಾದಲ್ಲಿಅಭಿಯಾನ ಮುಂದುವರಿಯಲಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.

ಸೂಕ್ಷತ್ರ್ಮ ಪ್ರದೇಶ ಗುರುತಿಸುವಿಕೆಯಿಂದ ಕೃಷಿ, ಜನಜೀವನದ ಮೇಲೆ ಪರಿಣಾಮ ಬೀರಲಿದೆ. ವಸತಿ ಪ್ರದೇಶವನ್ನು ಸೂಕ್ಷತ್ರ್ಮ ಪ್ರದೇಶವೆಂದು ಗುರುತಿಸಿರುವುದರಿಂದ ವರದಿಯನ್ನು ವಿರೋಧಿಸುವುದು ಅನಿವಾರ್ಯ ಎಂದು ವಿವರಿಸಿದ್ದಾರೆ.

ಕೇಂದ್ರ ಸರಕಾರದ ಅರಣ್ಯ ಮತ್ತು ಪರಿಸರ ಇಲಾಖೆಗೆ 10 ಪ್ರಮುಖ ಅಂಶಗಳು ಆಕ್ಷೇಪ ಪತ್ರದಲ್ಲಿಅಡಕವಾಗಿದೆ. ಅದರಂತೆ ವರದಿ ವಿರೋಧಿಸಿ ಕೇಂದ್ರ ಪರಿಸರ ಇಲಾಖೆಗೆ ರಾಜ್ಯ ಸರಕಾರವು 43 ಅಂಶಗಳನ್ನು ಹಕ್ಕೊತ್ತಾಯಿಸಲು ಕೈಪಿಡಿಯೊಂದನ್ನು ಹೋರಾಟಗಾರರ ವೇದಿಕೆ ರೂಪಿಸಿದೆ. ಇದನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಆಕ್ಷೇಪಣಾ ಪ್ರಮುಖ ಅಂಶಗಳು

ಕಸ್ತೂರಿ ರಂಗನ್ ವರದಿಯು ಅವೈಜ್ಞಾನಿಕವಾಗಿದ್ದು, ಸೆಟಲೈಟ್ ಚಿತ್ರಣದ ಆಧಾರದ ಮೆಲೆ ವಾಸ್ತವಿಕ ಮತ್ತು ನೈಜತೆಯ ಚಿತ್ರಣಕ್ಕೆ ವ್ಯತಿರಿಕ್ತವಾಗಿದೆ. ಗ್ರಾಮದ ಶೇ.20 ಕ್ಕಿಂತ ಹೆಚ್ಚು ಭೌಗೋಳಿಕ ಪ್ರದೇಶ ಜೀವವೈವಿಧ್ಯ ಪರಿಸರ ಸೂಕ್ಷತ್ರ್ಮ ಪ್ರದೇಶವನ್ನಾಗಿ ಸೇರಿಸಲ್ಪಟ್ಟಿದೆ. ಘೊಷಿಸಿದ ಸೂಕ್ಷತ್ರ್ಮ ಪ್ರದೇಶ ವ್ಯಾಪ್ತಿಯ ಗ್ರಾಮಮಟ್ಟದ ಜನಾಭಿಪ್ರಾಯ ಅಥವಾ ಭೌತಿಕ ಸರ್ವೆಮಾಡಿ ವಿಷಯ ಸಂಗ್ರಹ ಮಾಡಿಲ್ಲ. ಕೃಷಿ, ತೆಂಗಿನತೋಟ ಹಾಗೂ ಇನ್ನಿತರ ಕೃಷಿ ತೋಟಗಾರಿಕೆ ಬೆಳೆಗಳಿಂದ ಹಸಿರು ಪ್ರದೇಶವನ್ನು ಸಹಿತ ಅರಣ್ಯ ಪ್ರದೇಶವೆಂದು ಪರಿಗಣಿಸಿರುವುದು ನೈಸರ್ಗಿಕ ವಿರೋಧ ಕ್ರಮವಾಗಿದೆ. ಸೂಕ್ಷತ್ರ್ಮ ಪ್ರದೇಶ ಘೋಷಿಸುವುದರಿಂದ ಗ್ರಾಮಸ್ಥರ ಮತ್ತು ಅರಣ್ಯವಾಸಿಗಳ ಜೀವನ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಆಗುವುದನ್ನು ಪರಿಗಣಿಸಿಲ್ಲಎಂಬ ಪ್ರಮುಖ ಹತ್ತು ಅಂಶಗಳನ್ನು ಆಕ್ಷೇಪಣಾ ಪತ್ರದಲ್ಲಿಪ್ರಸ್ತಾಪಿಸಲಾಗಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.

4ಎಸ್ಸಾರೆಸ್ 7

ಹಳ್ಳಿ ಹಳ್ಳಿಗಳಲ್ಲಿನ ಜಾಗೃತಿ ಸಭೆ ನಡೆದಿರುವುದು.