ಹಾವೇರಿ: 2026-27ನೇ ಸಾಲಿನ ಸಾಲಿನ ‘ಜಿಲ್ಲಾಮಟ್ಟದ ಉತ್ತಮ ಶಿಕ್ಷಕ’ ಪ್ರಶಸ್ತಿಗೆ ಹಾವೇರಿ ಜಿಲ್ಲೆಯ ವಿವಿಧ ತಾಲೂಕುಗಳ 21 ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ. ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ7, ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ7 ಹಾಗೂ ಪ್ರೌಢಶಾಲಾ ವಿಭಾಗದಲ್ಲಿ7 ಶಿಕ್ಷಕರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕಿರಿಯ ಪ್ರಾಥಮಿಕ ಶಾಲಾ ವಿಭಾಗ:ಬ್ಯಾಡಗಿ ತಾಲೂಕಿನ ಮಾಲತೇಶ ಗುಡಗೂರ, ಹಾವೇರಿ ತಾಲೂಕಿನ ಹನುಮಂತಪ್ಪ ಹಳ್ಳಪ್ಪನವರ, ಹಾನಗಲ್ ತಾಲೂಕಿನ ಎನ್ .ಎಫ್ .ಭಜಂತ್ರಿ, ಹಿರೇಕೆರೂರು ತಾಲೂಕಿನ ಗೀತಮ್ಮ ಮರಳಪ್ಪನವರ, ರಾಣೇಬೆನ್ನೂರು ತಾಲೂಕಿನ ಬಿಲ್ಕಿಸ್ ಜಹಾಂ ಕಲ್ಯಾಣಿ, ಸವಣೂರು ತಾಲೂಕಿನ ನೀಲಮ್ಮ ಕೆಂಡದಮಠ ಹಾಗೂ ಶಿಗ್ಗಾವಿ ತಾಲೂಕಿನ ಸರೋಜಾ ವಡಕಮ್ಮನವರ ಅವರನ್ನು ಆಯ್ಕೆ ಮಾಡಲಾಗಿದೆ.
ಹಿರಿಯ ಪ್ರಾಥಮಿಕ ಶಾಲಾ ವಿಭಾಗ:
ಬ್ಯಾಡಗಿಯ ಶಿವಬಸವ ಅಜಗೊಂಡರ, ಹಾವೇರಿಯ ದಾಕ್ಷಾಯಿಣಿ ಕೆ., ಹಾನಗಲ್ಲಿನ ಜಿಲಾನಿ ಕಡಕೋಳ, ಹಿರೇಕೆರೂರಿನ ಸಿದ್ದಪ್ಪ ಕುರಿಯವರ, ರಾಣೇಬೆನ್ನೂರಿನ ಜಿ. ರೇಣುಕಮ್ಮ, ಸವಣೂರಿನ ಮಂಜುನಾಥ ಬಾವಿಕಟ್ಟಿ ಹಾಗೂ ಶಿಗ್ಗಾವಿಯ ಮುಬಿನತಾಜ್ ದಖನಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪ್ರೌಢಶಾಲಾ ವಿಭಾಗ:
ಬ್ಯಾಡಗಿಯ ಅರ್ಪಣಾ ಎಲ್ ., ಹಾವೇರಿಯ ಎಸ್ .ಎಸ್ .ನಡುವಿನಮಠ, ಹಾನಗಲ್ಲಿನ ಪರಶುರಾಮ ಹುನಗುಂದ, ಹಿರೇಕೆರೂರಿನ ಕುಸುಮಾವತಿ ಮೇಗಳಮನಿ, ರಾಣೇಬೆನ್ನೂರಿನ ಶಿವಕುಮಾರಗೌಡ ಬೆಳಕೇರಿ, ಸವಣೂರಿನ ಶಶಿಕಲಾ ಹೊಸಳ್ಳಿ ಹಾಗೂ ಶಿಗ್ಗಾವಿಯ ರವೀಂದ್ರ ದುಂದೂರ ಅವರು ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿಸಲ್ಲಿಸಿರುವ ಸೇವೆ, ಬೋಧನಾ ಕಾರ್ಯದಲ್ಲಿನ ಬದ್ಧತೆ ಹಾಗೂ ಶಾಲೆಯ ಶೈಕ್ಷಣಿಕ ಚಟುವಟಿಕೆಗಳಲ್ಲಿತೋರಿರುವ ಸಾಧನೆಗಳನ್ನು ಪರಿಗಣಿಸಿ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರಿಗೆ ಸೆ.5ರಂದು ಜಿಲ್ಲಾಗುರುಭವನದಲ್ಲಿನಡೆಯಲಿರುವ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿಗೌರವಿಸಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಅಧಿಕಾರಿಗಳು ಪ್ರಕಟಣೆಯಲ್ಲಿತಿಳಿಸಿದ್ದಾರೆ.