ಕೊಣನೂರು : ಸಮೀಪದ ಕಡವಿನಹೊಸಳ್ಳಿಯಲ್ಲಿರೈತ ಪುಟ್ಟೇಗೌಡ ಎಂಬುವವರಿಗೆ ಸೇರಿದ ತಂಬಾಕು ಹದಗೊಳಿಸುವ ಬ್ಯಾರನ್ ಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.ತಂಬಾಕು ಹದ ಮಾಡುವ ವೇಳೆ ಬೆಂಕಿ ಅವಘಡ ಸಂಭವಿಸಿದ್ದು, 500 ಮಾಲೆ ಹೊಗೆಸೊಪ್ಪು, ಮಾಲೆ ಕಟ್ಟಲು ಬಳಸಿದ್ದ ಕರೆಕಡ್ಡಿಗಳು ಬೆಂಕಿಗಾಹುತಿಯಾಗಿವೆ. ತಂಬಾಕು ಹದ ಮಾಡುವಾಗ ಅತೀವ ಶಾಖದಿಂದ ಬ್ಯಾರನ್ ನಲ್ಲಿಬೆಂಕಿ ಹೊತ್ತಿಕೊಂಡು ಹೊಗೆಸೊಪ್ಪು, ಕರೆಕಡ್ಡಿ ಜತೆಗೆ ಚಾವಣಿ ಹಾಗೂ ಹೆಂಚುಗಳು ಹಾಳಾಗಿವೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದರು. ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಎಚ್ .ಪಿ.ಶ್ರೀಧರ್ ಗೌಡ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಸೂಕ್ತ ಪರಿಹಾರ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಏಖN4ಓN್ಕ4-5 ಧಿ ಕೊಣನೂರು ಸಮೀಪದ ಕಡವಿನಹೊಸಳ್ಳಿಯಲ್ಲಿಬ್ಯಾರನ್ ಗೆ ಬೆಂಕಿ ಬಿದ್ದು ಸುಟ್ಟು ಹೋಗಿದೆ.
ಏಖN4ಓN್ಕ6 ಧಿ ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಎಚ್ .ಪಿ. ಶ್ರೀಧರ್ ಗೌಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕುಟುಂಬದ ಸದಸ್ಯರಿಗೆ ಧೈರ್ಯ ಹೇಳಿದರು.