ಗೊಲ್ಲ, ಕಾಡುಗೊಲ್ಲಸಮುದಾಯ ಮುಖ್ಯವಾಹಿನಿಗೆ ಬರಲಿ

Contributed bymadhugirinews@gmail.com|Vijaya Karnataka
golla conflict new choice for the kadu golla community by the karnataka government
ಜಿಲ್ಲಾಡಳಿತ, ಜಿಲ್ಲಾಗೊಲ್ಲರ ಸಂಘದಿಂದ ಶ್ರೀ ಕೃಷ್ಣ ಜಯಂತಿ ಆಚರಣೆ

ವಿಕ ಸುದ್ದಿಲೋಕ ತುಮಕೂರು
ಸರಕಾರ ಶ್ರೀ ಕೃಷ್ಣ ಜಯಂತಿಯ ಮೂಲಕ ಸಮುದಾಯದ ಎಲ್ಲರೂ ಒಂದೆಡೆ ಸೇರುವ ಅವಕಾಶ ಮಾಡಿಕೊಟ್ಟಿದೆ. ಇದಕ್ಕಾಗಿ ಸರಕಾರಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಕರ್ನಾಟಕ ರಾಜ್ಯ ಕಾಡುಗೊಲ್ಲರ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾರೋಗೆರೆ ಮಹೇಶ್ ಹೇಳಿದರು.

ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿಜಿಲ್ಲಾಡಳಿತ ಹಾಗೂ ತುಮಕೂರು ಜಿಲ್ಲಾಗೊಲ್ಲರ ಸಂಘದಿಂದ ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸ್ವಾತಂತ್ರ್ಯ ನಂತರ ಮೊದಲ ಬಾರಿ ನಿಗಮ ಸ್ಥಾಪಿಸಿ, ಅದರ ಅಧ್ಯಕ್ಷರಿಗೆ ರಾಜ್ಯ ಸಚಿವರ ಸ್ಥಾನಮಾನ ನೀಡುವ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಯಲ್ಲಿಗುರುತಿಸಿಕೊಳ್ಳುವಂತೆ ಮಾಡಿದೆ ಎಂದರು.

ಗೊಲ್ಲಮತ್ತು ಕಾಡುಗೊಲ್ಲಸಮುದಾಯದವರು ತಮ್ಮ ಜಾತಿಯ ಹೆಸರನ್ನು ಎದೆಯುಬ್ಬಿಸಿ ಹೇಳುವಂತಹ ಧೈರ್ಯ ತೋರಬೇಕು. ಅದರಲ್ಲಿಯೂ ವಿದ್ಯಾವಂತರು ಈ ನಿಟ್ಟಿನಲ್ಲಿಇತರರಿಗೆ ಮಾದರಿಯಾಗಬೇಕು. ರಾಜ್ಯದಲ್ಲಿಕಾಡುಗೊಲ್ಲರ ಸಂಖ್ಯೆ 10 ಲಕ್ಷಕ್ಕೂ ಅಧಿಕವಿದೆ. ಆದರೆ ವಿವಿಧ ಸೌಲಭ್ಯಗಳಿಗಾಗಿ ನಿಗಮದಿಂದ ಅರ್ಜಿ ಕರೆದರೆ ಕೇವಲ 4500 ಜನರು ಅರ್ಜಿ ಸಲ್ಲಿಸಿದ್ದಾರೆ. ಇದು ಶೇ.5 ಸಹ ಇಲ್ಲ. ಜನರಲ್ಲಿಜಾಗೃತಿ ಇಲ್ಲವೋ ಅಥವಾ ಉದಾಸೀನವೋ ತಿಳಿಯದು. ಅರ್ಜಿಗಳು ಹೆಚ್ಚಿಗೆ ಬಂದಷ್ಟು ಸರಕಾರದ ಹೆಚ್ಚು ಅನುದಾನ ನಿರೀಕ್ಷೆ ಮಾಡಬಹುದು. ಈ ವರ್ಷದಿಂದ ಅಲೆಮಾರಿ ಪ್ರವೃತ್ತಿಯ ಕುರಿಗಾಹಿಗಳಿಗೆæ ಒಂದೆಡೆಯಿಂದ ಇನ್ನೊಂದಡೆಗೆ ತಮ್ಮ ವಸ್ತುಗಳು, ಸರಂಜಾಮುಗಳನ್ನು ಸಾಗಿಸಲು ಅನುಕೂಲವಾಗುವಂತೆ ನಿಗಮದಿಂದ ಟ್ರ್ಯಾಕ್ಟರ್ ನೀಡಲು ಅರ್ಜಿ ಕರೆದಿದ್ದೇವೆ ಎಂದರು.

ಜಿಲ್ಲಾಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ ಮಾತನಾಡಿ, ನಮ್ಮಲ್ಲಿಶಿಕ್ಷಣದ ಕೊರತೆ ಇದೆ. ಅದರಲ್ಲಿಯೂ ಮಹಿಳಾ ಶಿಕ್ಷಣ ಬಹಳ ಕೆಳ ಮಟ್ಟದಲ್ಲಿದೆ. ನಮ್ಮಲ್ಲಿರುವ ಮೌಢ್ಯ ಹೋಗಬೇಕಾದರೆ ಮನೆಯ ಜವಾಬ್ದಾರಿ ಹೊರುವ ಹೆಣ್ಣು ಮಕ್ಕಳಿಗೆ ಶಿಕ್ಷಣ ದೊರೆಯಬೇಕು. ಹಾಗಾಗಿ ಹೆಣ್ಣು ಮಕ್ಕಳ ಹಾಸ್ಟೆಲ್ ನಿರ್ಮಾಣಕ್ಕೆ ಜಿಲ್ಲಾಡಳಿತ ಜಾಗ ಗುರುತಿಸಿಕೊಡಬೇಕೆಂಬ ಬೇಡಿಕೆ ನಮ್ಮದು. ನಮ್ಮಲ್ಲಿಜಾಗೃತಿ ಬಂದರೆ ಕನಿಷ್ಠ ದೊಡ್ಡ ಸಂಖ್ಯೆಯಲ್ಲಿರುವ ಕ್ಷೇತ್ರಗಳಲ್ಲಿಯಾದರೂ ನಮ್ಮ ಸಮುದಾಯದ ಶಾಸಕರನ್ನು ನೋಡುವ ಭಾಗ್ಯ ನಮ್ಮದಾಗಲಿದೆ ಎಂದು ಹೇಳಿದರು.

ಎಡಿಸಿ ಡಾ.ಎನ್ .ತಿಪ್ಪೇಸ್ವಾಮಿ ಮಾತನಾಡಿ, ಶ್ರೀ ಕೃಷ್ಣನು ಮನುಷ್ಯ ಸಂಸ್ಕೃತಿಗೆ ಸೇರಿದವ. ಹಾಗಾಗಿಯೇ ತನಗಾಗಿ ರಾಜ ಮರ್ಯಾದೆಯ ಅತಿಥ್ಯವಿದ್ದರೂ ಬಡವನಾದ ವಿಧುರನ ಮನೆಗೆ ಹೋಗಿ ಊಟ ಮಾಡಿದ. ಎಲ್ಲರನ್ನು ಒಳಗೊಳ್ಳಬೇಕು ಎಂಬುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಮತ್ತೊಂದಿಲ್ಲ. ಮನುಷ್ಯ ಇಂದು ಅನುಭವಿಸುತ್ತಿರುವ ಎಲ್ಲಾಸಮಸ್ಯೆಗಳಿಗೂ ಭಗವದ್ಗೀತೆಯಲ್ಲಿಶ್ರೀಕೃಷ್ಣನ ಉತ್ತರವಿದೆ. ಅದನ್ನು ಗಮನವಿಟ್ಟು ಅವಲೋಕಿಸಿದರೆ ಅದು ಜನರಿಗೆ ದಾರಿದೀಪವಾಗಲಿದೆ ಎಂದರು.

ಈ ಸಂದರ್ಭದಲ್ಲಿಪ್ರೊ. ಗುರುಲಿಂಗಯ್ಯ, ಚಂಗಾವರ ಕರಿಯಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಈಶ್ವರ್ ಕು ಮಿರ್ಜಿ, ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್ . ಸಿದ್ದಲಿಂಗಪ್ಪ, ಷಣ್ಮುಗಪ್ಪ, ಮಹಾಲಿಂಗಪ್ಪ, ಚಿಕ್ಕೇಗೌಡ, ಚಿಕ್ಕಪ್ಪಯ್ಯ, ಎಸ್ .ಚಿಕ್ಕರಾಜು, ಬಿ.ಈರಯ್ಯ, ಕಲಾವಿದೆ ಅಕ್ಕಮ್ಮ, ಹನುಮಂತರಾಜು, ಶಿವಕುಮಾರಸ್ವಾಮಿ, ತುಮಕೂರು ವಿವಿ ಸಿಂಡಿಕೇಟ್ ಸದಸ್ಯ ಶಿವಣ್ಣ, ಬಯಲಾಟ ಕಲಾವಿದ ನಾಗರಾಜು, ಗೋವಿಂದರಾಜು, ಮಂಜುನಾಥ್ ಹಾಜರಿದ್ದರು.

ಫೋಟೋ 4ಕೆಜಿಎಚ್ 10: ತುಮಕೂರು ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿಜಿಲ್ಲಾಡಳಿತ ಹಾಗೂ ತುಮಕೂರು ಜಿಲ್ಲಾಗೊಲ್ಲರ ಸಂಘದಿಂದ ಶ್ರೀ ಕೃಷ್ಣ ಜಯಂತಿ ಆಚರಿಸಲಾಯಿತು.