ಸಿಂಧನೂರು: ‘‘ರಾಜ್ಯ ಸರಕಾರ ಭ್ರಷ್ಟಾಚಾರದಲ್ಲಿಮುಳುಗಿದ್ದರಿಂದಲೇ ರಾಜ್ಯದ 6.5 ಕೋಟಿ ಜನರು ರೊಚ್ಚಿಗೆದ್ದು ಬಿಜೆಪಿಯ ಹೋರಾಟಕ್ಕೆ ಬೆಂಬಲಿಸುತ್ತಿದ್ದಾರೆ,’’ಎಂದು ಮಾಜಿ ಉಪ ಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ ಎಂದರು.ಪಾದಯಾತ್ರೆ ಸಂದರ್ಭದಲ್ಲಿಪತ್ರಕರ್ತರೊಂದಿಗೆ ಮಾತನಾಡಿದರು. ‘‘ಮಳೆ ಇಲ್ಲ, ತೇವಾಂಶ ಕೊರತೆಯಿಂದ ಬೆಳೆ ಹಾಳಾಗುತ್ತಿದೆ. ರೈತರ ಸಾಲ ಮನ್ನಾ ಮಾಡಬೇಕು. ರಾಜ್ಯದಲ್ಲಿಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಜನರಿಗೆ ಅವರವರ ಊರಿನಲ್ಲೇ ಉದ್ಯೋಗ ಕೊಟ್ಟು ಗುಳೆ ತಪ್ಪಿಸಬೇಕು. ಸಿಎಂ ಡಿ.ಕೆ.ಶಿವಕುಮಾರ್ ಅವರು ಕಳೆದ ಮೂರುವರೆ ತಿಂಗಳಿನಿಂದ ಮಾತಿನಲ್ಲೇ ಮಂಟಪ ಕಟ್ಟುತ್ತಿದ್ದಾರೆ. ಜನಪರ, ನಾಗರಿಕ ಸರಕಾರದ ಜವಾಬ್ದಾರಿ ನಿಭಾಯಿಸುವಲ್ಲಿಸಿಎಂ ಸಂಪೂರ್ಣ ವಿಫಲವಾಗಿದ್ದಾರೆ. ಬರ ಪರಿಹಾರ ಮತ್ತು ಕುಡಿಯುವ ನೀರಿಗಾಗಿ ಪ್ರತಿ ಜಿಲ್ಲೆಗೆ 100 ಕೋಟಿ ರೂ. ಬಿಡುಗಡೆ ಮಾಡಬೇಕು. ಬರಪರಿಹಾರ ಕಾಮಗಾರಿ, ಗೋಶಾಲೆ ಪ್ರಾರಂಭಿಸಬೇಕು. ಕಾಂಗ್ರೆಸ್ಸಿನ ಇನ್ನೊಂದು ಪಾದಯಾತ್ರೆ ಬಗ್ಗೆ ಪ್ರತಿಕ್ರಿಯಿಸಿ, ‘‘ಇದು ಲಜ್ಜೆಗೆಟ್ಟ ಸರಕಾರ. ಸರಕಾರ, ಸಚಿವರು ಪ್ರತಿ ಜಿಲ್ಲೆಗಳಿಗೆ ಪ್ರವಾಸ ಮಾಡಿ ಜನರ ಸಮಸ್ಯೆ ತಿಳಿದುಕೊಳ್ಳಬೇಕಿತ್ತು. ಅವನ್ನು ಪರಿಹರಿಸಬೇಕಿತ್ತು. ಹಾಗಿದ್ದರೆ, ಅದು ನಾಗರಿಕ ಸರಕಾರ. ಆದರೆ, ಇದು ಲಜ್ಜೆಗೆಟ್ಟ ಸರಕಾರ,’’ ಎಂದು ಟೀಕಿಸಿದರು.