ವಿಕ ಸುದ್ದಿಲೋಕ ಮಡಿಕೇರಿಶ್ರೀಕೃಷ್ಣನನ್ನು ಶ್ರದ್ಧಾಭಕ್ತಿಯಿಂದ ಪೂಜಿಸುವುದರ ಜತೆಗೆ ಜ್ಞಾನ, ಸತ್ಯ ಹಾಗೂ ಪ್ರೀತಿಯ ಸಂಕೇತದಿಂದ ನೋಡುತ್ತೇವೆ. ಆ ನಿಟ್ಟಿನಲ್ಲಿಶ್ರೀಕೃಷ್ಣನ ಆದರ್ಶವನ್ನು ತಿಳಿದುಕೊಳ್ಳುವಂತಾಗಬೇಕು ಎಂದು ಶ್ರೀ ಕಂಚಿಕಾಮಾಕ್ಷಿಯಮ್ಮ ದೇವಾಲಯ ಸಮಿತಿ ಗೌರವಾಧ್ಯಕ್ಷ ಜಿ.ವಿ.ರವಿಕುಮಾರ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿನಗರದ ಗಾಂಧಿ ಭವನದಲ್ಲಿಶುಕ್ರವಾರ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿಮಾತನಾಡಿದರು.
‘‘ಶ್ರೀಕೃಷ್ಣನಿಗೆ ಪುಪ್ಪಾಲಂಕಾರ, ಪುಪ್ಪಾರ್ಚನೆ ಹಾಗೂ ವಿಶೇಷ ಪೂಜೆಗಳನ್ನು ಮಾಡುವುದರ ಹಿಂದಿನ ಉದ್ದೇಶ ಕೇವಲ ಆಚರಣೆಗೆ ಸೀಮಿತವಾಗಬಾರದು. ಅವರ ಆದರ್ಶ ಗುಣಗಳು, ಶಿಸ್ತು, ಪ್ರೀತಿ, ಒಗ್ಗಟ್ಟು ಮತ್ತು ಸಹಬಾಳ್ವೆಯ ಸಂದೇಶಗಳನ್ನು ಜೀವನದಲ್ಲಿಅಳವಡಿಸಿಕೊಳ್ಳಬೇಕು. ಕೃಷ್ಣನ ಸಂದೇಶಗಳು ಇನ್ನಷ್ಟು ಪ್ರಸ್ತುತವಾಗಿವೆ. ಆಡಂಬರದ ಆಚರಣೆಗಿಂತ ಕೃಷ್ಣನ ಜೀವನ ಮೌಲ್ಯಗಳನ್ನು ಪಾಲಿಸುವುದು ಮುಖ್ಯ,’’ ಎಂದು ಹೇಳಿದರು.
ಕುಶಾಲನಗರ ನಿವೃತ್ತ ಕಲಾ ಶಿಕ್ಷಕ ಉ.ರಾ.ನಾಗೇಶ್ ಉಪನ್ಯಾಸ ನೀಡಿ, ‘‘ಕೃಷ್ಣನ ಜೀವನ ಸಂದೇಶಗಳು ಇಂದಿಗೂ ಪ್ರಸ್ತುತ. ಬದುಕುವ ಕಲೆಯನ್ನು ತೋರಿಸಿದ ಯೋಗೇಶ್ವರ. ಕೃಷ್ಣ ಜನ್ಮಾಷ್ಟಮಿ ಇತರ ಜಯಂತಿಗಳಿಗಿಂತ ವಿಭಿನ್ನವಾದ ಆಚರಣೆಯಾಗಿದ್ದು, ಭಗವಂತನನ್ನು ಮನುಷ್ಯ ರೂಪದಲ್ಲಿಕಂಡುಕೊಂಡ ಸಂಸ್ಕೃತಿಯ ಪ್ರತೀಕವಾಗಿದೆ,’’ ಎಂದು ಅಭಿಪ್ರಾಯಪಟ್ಟರು.
‘‘ನಗರಸಭೆ ಅಧ್ಯಕ್ಷೆ ಪಿ.ಕಲಾವತಿ, ಕೃಷ್ಣಾಷ್ಟಮಿ ಹಬ್ಬವು ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾಗದೆ, ಮಕ್ಕಳಲ್ಲಿಸಂಭ್ರಮ, ಉತ್ಸಾಹ ಹಾಗೂ ಕುಟುಂಬಗಳಲ್ಲಿಸಂತಸದ ವಾತಾವರಣವನ್ನು ಮೂಡಿಸುವ ವಿಶೇಷ ಹಬ್ಬವಾಗಿದೆ,’’ ಎಂದರು.
ಸಮಿತಿ ಖಜಾಂಚಿ ಜಿ.ಸಿ.ರಮೇಶ್ ಮಾತನಾಡಿ, ‘‘ಕಾರಾಗೃಹದಲ್ಲಿಜನಿಸಿದ ಶ್ರೀಕೃಷ್ಣನು ತನ್ನ ಜೀವನದುದ್ದಕ್ಕೂ ಧರ್ಮ, ನ್ಯಾಯ ಮತ್ತು ಕರ್ತವ್ಯದ ಮಹತ್ವವನ್ನು ಜಗತ್ತಿಗೆ ಸಾರಿದ ಮಹಾನ್ ವ್ಯಕ್ತಿ ,’’ ಎಂದು ಹೇಳಿದರು.
‘‘ಮಹಾಭಾರತ ಯುದ್ಧದ ಸಂದರ್ಭದಲ್ಲಿಅರ್ಜುನನಿಗೆ ಭಗವದ್ಗೀತೆಯ ಮೂಲಕ ಜೀವನದ ಮಹತ್ತರ ಸಂದೇಶ ನೀಡಿದ್ದಾರೆ. ಮನುಷ್ಯನು ಫಲಾಪೇಕ್ಷೆ ಮಾಡದೆ ತನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂಬ ಸಂದೇಶ ಇಂದಿನ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿದೆ,’’ ಎಂದು ತಿಳಿಸಿದರು.
‘‘ಶ್ರೀಕೃಷ್ಣನ ಆದರ್ಶ, ಜೀವನ ಮೌಲ್ಯಗಳು ಹಾಗೂ ಧರ್ಮದ ಸಂದೇಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿಅಳವಡಿಸಿಕೊಳ್ಳಬೇಕು,’’ ಎಂದು ಸಲಹೆ ನೀಡಿದರು.
ಮಡಿಕೇರಿ ತಾಲೂಕು ತಹಸೀಲ್ದಾರ್ ಶ್ರೀಧರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿಶ್ರೀ ಕಂಚಿಕಾಮಾಕ್ಷಿಯಮ್ಮ ದೇವಾಲಯ ಸಮಿತಿ ಅಧ್ಯಕ್ಷ ಜಿ.ಎಲ್ .ದಾಸ, ಗೌರವಾಧ್ಯಕ್ಷ ಜಿ.ಎ.ಚಾಮಿ, ಜಿ.ಜಿ.ಬಾಲಕೃಷ್ಣ, ಉಪಾಧ್ಯಕ್ಷ ಜಿ.ಸಿ.ಜಗದೀಶ್ , ಪ್ರಧಾನ ಕಾರ್ಯದರ್ಶಿ ಜಿ.ಆರ್ .ಗಣೇಶ್ , ನಿರ್ದೇಶಕ ರಘುರಾಮ್ , ದಲಿತ ಸಂಘರ್ಷ ಸಮಿತಿಯ ಸಂಚಾಲಕ ಎಚ್ .ಎಲ್ .ದಿವಾಕರ್ , ಮಹಿಳಾ ಸಂಚಾಲಕಿ ಪ್ರೇಮಾ ಕೃಷ್ಣಪ್ಪ ಪಾಲ್ಗೊಂಡಿದ್ದರು.
ಫೋಟೊ: ಎಂಡಿಕೆ04ಎನ್ - ಕೃಷ್ಣ ಜನ್ಮಾಷ್ಟಮಿ
ಕ್ಯಾಪ್ಷನ್ : ಕಾರ್ಯಕ್ರಮವನ್ನು ಗಣ್ಯರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.