ವಿಕ ಸುದ್ದಿಲೋಕ ಸಕಲೇಶಪುರಪಟ್ಟಣದ ಸೌಂದರ್ಯ ಹೆಚ್ಚಿಸುವುದರ ಜತೆಗೆ ವಾಹನ ಸಂಚಾರವನ್ನು ಸುಗಮಗೊಳಿಸಲು ತೇಜಸ್ವಿ ವೃತ್ತವನ್ನು ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಮುಫೀಜ್ ಹೇಳಿದರು.
ಪಟ್ಟಣದ ತೇಜಸ್ವಿ ವೃತ್ತದ ಅಗಲೀಕರಣ ಹಾಗೂ ಅಭಿವೃದ್ಧಿಗೆ ಯೋಜನಾ ಪ್ರಾಧಿಕಾರ ಮತ್ತು ಪುರಸಭೆ ಮುಂದಾಗಿದ್ದು, ಈ ಹಿನ್ನೆಲೆಯಲ್ಲಿವರ್ತಕರು, ಸಂಘ-ಸಂಸ್ಥೆಗಳ ಮುಖಂಡರು ಹಾಗೂ ಸಾರ್ವಜನಿಕರ ಸಭೆ ನಡೆಸಲಾಯಿತು. ಈ ಸಭೆಯಲ್ಲಿಅವರು ಮಾತನಾಡಿ, ‘‘ಪಟ್ಟಣದಲ್ಲಿದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ತೇಜಸ್ವಿ ವೃತ್ತಲ್ಲಿವಾಹನ ದಟ್ಟಣೆ ಉಂಟಾಗುತ್ತಿದೆ. ಇದನ್ನು ನಿಯಂತ್ರಿಸುವ ಉದ್ದೇಶದಿಂದ ವೃತ್ತದ ಅಗಲೀಕರಣಕ್ಕೆ ಯೋಜನೆ ರೂಪಿಸಲಾಗಿದೆ. ಸುಮಾರು 50 ಅಡಿ ವ್ಯಾಪ್ತಿಯಲ್ಲಿವೃತ್ತವನ್ನು ಅಭಿವೃದ್ಧಿಪಡಿಸಲು ಪ್ರಾಧಿ ಕಾರದಿಂದ ಹಣ ಮೀಸಲಿಡಲಾಗಿದೆ,’’ ಎಂದು ತಿಳಿಸಿದರು.
ವೃತ್ತದ ಅಭಿವೃದ್ಧಿಯೊಂದಿಗೆ ಪ್ರಮುಖ ಮಾರ್ಗಗಳಿಗೂ ಹೊಸ ರೂಪ ನೀಡಲು ಯೋಜಿಸಲಾಗಿದ್ದು, ಹಾಸನ, ಬೇಲೂರು ಹಾಗೂ ಮಂಗಳೂರು ಮಾರ್ಗಗಳಲ್ಲಿದೊಡ್ಡ ಗಾತ್ರದ ಕಮಾನುಗಳು ಮತ್ತು ನಾಮಫಲಕಗಳನ್ನು ಅಳವಡಿಸುವ ಉದ್ದೇಶವಿದೆ. ಇದರಿಂದ ತೇಜಸ್ವಿ ವೃತ್ತ ನಗರದ ಪ್ರಮುಖ ಆಕರ್ಷಣೆಯ ಕೇಂದ್ರವಾಗಲಿದೆ ಎಂದು ಅವರು ಹೇಳಿದರು.
ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ ಮಾತನಾಡಿ, ‘‘ಇತ್ತೀಚೆಗೆ ಜಿಲ್ಲಾಧಿಕಾರಿ ಅವರು ಪಟ್ಟಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿತೇಜಸ್ವಿ ವೃತ್ತದ ಕಿರಿದಾದ ರಸ್ತೆಯಿಂದಾಗಿ ಉಂಟಾಗುತ್ತಿರುವ ವಾಹನ ದಟ್ಟಣೆ ಗಮನಿಸಿದ್ದರು. ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿವೃತ್ತದ ಅಗಲೀಕರಣಕ್ಕೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿಪುರಸಭೆ ಹಾಗೂ ಪ್ರಾಧಿಕಾರ ಜಂಟಿಯಾಗಿ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಿವೆ,’’ ಎಂದು ತಿಳಿಸಿದರು.
ಇದೆ ಸಂದರ್ಭ ವರ್ತಕರ ಸಂಘದ ಅಧ್ಯಕ್ಷ ಮಧು ಮಾತನಾಡಿ, ‘‘ಅಗಲೀಕರಣಕ್ಕೆ ವರ್ತಕರಿಂದ ಕೆಲವು ಷರತ್ತುಗಳನ್ನು ಮುಂದಿಡಲಾಗಿದೆ. ತೇಜಸ್ವಿ ವೃತ್ತದ ಅಭಿವೃದ್ಧಿಗೆ ತಮ್ಮ ವಿರೋಧವಿಲ್ಲ, ಸುಮಾರು 50 ಅಡಿಯಷ್ಟು ಅಗಲೀಕರಣ ಮಾಡುವ ಬದಲಾಗಿ 30 ಅಡಿ ಯಷ್ಟು ವೃತ್ತವನ್ನು ಅಭಿವೃದ್ಧಿಪಡಿಸಬೇಕು,’’ ಎಂದು ಮನವಿ ಮಾಡಿದರು.
‘‘ವೃತ್ತದ ಸುತ್ತಮುತ್ತ ಕಳೆದ 50 ವರ್ಷಗಳಿಂದ ವಾಸಿಸುತ್ತಿರುವ ಕುಟುಂಬಗಳ ಹಿತಾಸಕ್ತಿಯನ್ನು ಪರಿಗಣಿಸಬೇಕು. ಅಗಲೀಕರಣದಿಂದ ಮನೆ ಅಥವಾ ಅಂಗಡಿ ಕಳೆದುಕೊಳ್ಳುವವರಿಗೆ ಸೂಕ್ತ ಪರಿಹಾರ ನೀಡಿದ ಬಳಿಕವೇ ಕಾಮಗಾರಿ ಆರಂಭಿಸಬೇಕು,’’ ಎಂದು ಒತ್ತಾಯಿಸಿದರು.
ಪಟ್ಟಣದ ಅಭಿವೃದ್ಧಿ ಮತ್ತು ಸಂಚಾರ ವ್ಯವಸ್ಥೆ ಸುಧಾರಣೆಗೆ ಸಾರ್ವಜನಿಕರು ಹಾಗೂ ವರ್ತಕರು ಸಹಕಾರ ನೀಡಬೇಕು ಎಂದು ಅಧಿ ಕಾರಿಗಳು ಸಭೆಯಲ್ಲಿಮನವಿಮಾಡಿದರು. ಅಭಿವೃದ್ಧಿಯ ಜೊತೆಗೆ ತಮ್ಮ ಬದುಕು ಮತ್ತು ಆಸ್ತಿಯ ರಕ್ಷಣೆಯನ್ನೂ ಪರಿಗಣಿಸಬೇಕು ಎಂಬುದು ವರ್ತಕರ ಒತ್ತಾಯಸಿದರು.
ಪುರಸಭೆ ಮುಖ್ಯಾಧಿಕಾರಿ ಮಹೇಶ್ವರಪ್ಪ, ಪ್ರಾಧಿ ಕಾರದ ಸದಸ್ಯರಾದ ಬೈಕೆರೆ ದೇವರಾಜ್ , ಚರಣ್ , ಪಟ್ಟಣ ಠಾಣೆ ಉಪನಿರೀಕ್ಷಕ ಮಹೇಶ್ , ಪ್ರಾಧಿಕಾರದ ಎಂಜಿನಿಯರ್ ಹಾಗೂ ಅಧಿಕಾರಿಗಳು, ವರ್ತಕರ ಸಂಘದ ಪದಾಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಇದ್ದರು.
ಫೋಟೋ(ಊಓ3ಏ1)-
ಸಕಲೇಶಪುರನ ಪುರಭವನದಲ್ಲಿ ಏರ್ಪಡಿಸಿದ್ದ ತೇಜಸ್ವಿ ವೃತ್ತ ಹಾಗೂ ರಸ್ತೆ ಅಗಲೀಕರಣ ಕುರಿತು ಏರ್ಪಡಿಸಿದ್ದ ಸಭೆಯಲ್ಲಿಪ್ರಾಧಿಕಾರದ ಅಧ್ಯಕ್ಷ ಸಯ್ಯದ್ ಮುಫೀಜ್ ಮಾತನಾಡಿದರು.