ರಾಮಲಿಂಗೇಶ್ವರ ದೇವರ ಜಾತ್ರೆ ಸೆ.7 ರಂದು

Contributed bytvlbdr@gmail.com|Vijaya Karnataka
ramalingshwara devar jatra special programs for devotees on sept 7
ಚಿತ್ರ:ರಾಮಲಿಂಗೇಶ್ವರ ಲಿಂಗ ದೇವರು, ಚಿತ್ರವಿದೆ ಬಳಸಿ

ರಾಮಲಿಂಗೇಶ್ವರ ದೇವರ ಜಾತ್ರೆ ಸೆ.7 ರಂದು
ಬೀದರ್ ; ಹುಮನಾಬಾದ್ ತಾಲೂಕಿನ ಸುಲ್ತಾನಬಾದ್ ವಾಡಿ ಗ್ರಾಮದ ಆರಾಧ್ಯ ದೇವರಾದ ಶ್ರೀ ರಾಮಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವವು ಶ್ರಾವಣದ ಕಡೆಯ ಸೋಮವಾರ ಸೆ.7 ರಂದು ನಡೆಯಲಿದೆ ಎಂದು ಮಂದಿರದ ಪ್ರಕಟಣೆ ತಿಳಿಸಿದೆ. ಅಂದು ದೇವರಿಗೆ ರುದ್ರಪೂಜೆ , ಗ್ರಾಮದಾದ್ಯಂತ ಪಲ್ಲಕ್ಕಿ ಮೆರವಣಿಗೆ, ಕುಸ್ತಿ, ಭಜನೆ, ಸಂಗೀತ ದರ್ಬಾರ್ ಸೇರಿ ದಿನವಿಡೀ ನಾನಾ ಧಾರ್ಮಿಕ ಕೈಂಕರ್ಯಗಳು ನಡೆಯಲಿವೆ. ದೇವರ ದರುಶನಕ್ಕೆ ಆಗಮಿಸುವ ಭಕ್ತರಿಗೆ ಮಹಾಪ್ರಸಾದ ವಿತರಣೆ ನಡೆಯಲಿದೆ. ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ್ , ಮಾಜಿ ಸಚಿವ ರಾಜಶೇಖರ ಪಾಟೀಲ್ ಸೇರಿ ನಾನಾ ಜನಪ್ರತಿನಿಧಿಗಳು, ಗಣ್ಯರು, ಮುಖಂಡರು ದೇವರ ಆಶೀರ್ವಾದ ಪಡೆಯಲಿದ್ದಾರೆ. ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸಿ ರಾಮಲಿಂಗೇಶ್ವರ ದೇವರ ದರುಶನ ಪಡೆದುಕೊಂಡು, ಪ್ರಸಾದ ಸೇವಿಸಿ, ಪುನೀತರಾಗಬೇಕು ಎಂದು ರಾಮಲಿಂಗೇಶ್ವರ ಮಂದಿರದ ಆಡಳಿತ ಮಂಡಳಿಯ ಅಧ್ಯಕ್ಷ ವೆಂಕಟರಾವ್ ಪಾಟೀಲ್ , ಉಪಾಧ್ಯಕ್ಷ ಈಶ್ವರ ಜಾಂತೆ, ಕಾರ್ಯದರ್ಶಿ ಧನರಾಜ ಜ್ಯಾಂತೆ, ಗ್ರಾಮಸ್ಥರಾದ ರಾಮಚಂದ್ರ ಉಪ್ಪಾರ, ಬಲವಂತ ಉಪ್ಪಾರ, ಅರ್ಜುನ ಜಮಾದಾರ, ದಯಾನಂದ ಚಿದ್ರೆ ಹಾಗೂ ಮಂದಿರದ ಅರ್ಚಕರಾದ ಬಸ್ಸಯ್ಯ ಸ್ವಾಮಿ ಮಠ ಅವರು ಕೋರಿದ್ದು, ಭಕ್ತರನ್ನು ಸ್ವಾಗತಿಸಿದ್ದಾರೆ.