ವಿಕ ಸುದ್ದಿಲೋಕ ರೋಣತಾಲೂಕಿನ ಹೊಳೆಆಲೂರು ಗ್ರಾಮದ ಸಮೀಪ ಗುರುವಾರ ತಡರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿಯೋಧನೊಬ್ಬ ಮೃತಪಟ್ಟ ಘಟನೆ ಸಂಭವಿಸಿದೆ.
ಬಸಯ್ಯ ದೇವಗಿರಿಮಠ (42) ಮೃತ ಯೋಧ. ರಜೆಗೆ ಸ್ವ ಗ್ರಾಮಕ್ಕೆ ಆಗಮಿಸಿದ್ದ ಸಂದರ್ಭದಲ್ಲಿಹೊಳೆಆಲೂರು ಬಳಿಯ ರೈಲ್ವೆ ಕ್ರಾಸ್ ಹತ್ತಿರ ದ್ವಿಚಕ್ರ ವಾಹನದಲ್ಲಿತೆರಳುತ್ತಿದ್ದ ಸಂದರ್ಭದಲ್ಲಿಅಪಘಾತ ಸಂಭವಿಸಿದೆ. ಮೃತ ಯೋಧನಿಗೆ ತಂದೆ, ತಾಯಿ, ಪತ್ನಿ, ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧುಗಳು ಇದ್ದಾರೆ.
ಅಗಲಿದ ಯೋಧನ ಅಂತ್ಯಕ್ರಿಯೆ ಶುಕ್ರವಾರ ಹುಲ್ಲೂರು ಗ್ರಾಮದ ಬೆನಹಾಳ ರಸ್ತೆಯ ಸ್ವಂತ ಜಮೀನಿನಲ್ಲಿಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ಈ ವೇಳೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಅಂತ್ಯಕ್ರಿಯೆ ವೇಳೆ ಭಾರತೀಯ ಸೇನೆಯ ಸಿಬ್ಬಂದಿ, ತಾಲೂಕು ಆಡಳಿತ, ಮಾಜಿ ಸೈನಿಕರ ಸಂಘದಿಂದ ಅಂತಿಮ ನಮನ ಸಲ್ಲಿಸಲಾಯಿತು ಹಾಗೂ ವಿವಿಧ ಗಣ್ಯರು ಆಗಮಿಸಿ ಮೃತ ಯೋಧನ ಅಂತಿಮ ದರ್ಶನ ಪಡೆದರು. ಅಪಘಾತ ಕುರಿತು ರೋಣ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.
ಫೋಟೊ: 04 ್ಕON PಏOTO 02:
ರಸ್ತೆ ಅಪಘಾತದಲ್ಲಿಮೃತಪಟ್ಟ ಹುಲ್ಲೂರು ಗ್ರಾಮದ ಯೋಧ ಬಸಯ್ಯ ದೇವಗಿರಿಮಠ ಪಾರ್ಥಿವ ಶರೀರಕ್ಕೆ ಸಕಲ ಸರಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಲಾಯಿತು.