ಶ್ರೀಕೃಷ್ಣದೇವರ ಬೆಳ್ಳಿ ಛಾಯಾಬಿಂಬದ ಶೋಭಾಯಾತ್ರೆ, ಸಮರ್ಪಣೆ, ತೊಟ್ಟಿಲೋತ್ಸವ
ವಿಕ ಸುದ್ದಿಲೋಕ ಪಾಣಾಜೆಯಾದವ ಸಭಾ ಪ್ರಾದೇಶಿಕ ಸಮಿತಿ ನೇತೃತ್ವದಲ್ಲಿಅತ್ಯಂತ ವೈಭವ ಮತ್ತು ಶ್ರದ್ಧಾಭಕ್ತಿಗಳಿಂದ ಜರುಗಿದ 20ನೇ ವರ್ಷದ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯ ’ವಿಂಶತಿ ಸಂಭ್ರಮೋತ್ಸವ* ಶುಕ್ರವಾರ ರಾತ್ರಿ ಶ್ರೀಕೃಷ್ಣ ದೇವರ ತೊಟ್ಟಿಲೋತ್ಸವದೊಂದಿಗೆ ಸಂಪನ್ನಗೊಂಡಿತು.
ಶುಕ್ರವಾರ ಸಂಜೆ ನಡೆದ ಧಾರ್ಮಿಕ ಸಭೆಯನ್ನು ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೋಳಿಲ್ಲಾಯ ಕಡಮಾಜೆ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಜನ್ಮಾಷ್ಟಮಿ ಸಮಿತಿ ಅಧ್ಯಕ್ಷ ಧನಂಜಯ ಮಣಿಯಾಣಿ ಅಧ್ಯಕ್ಷತೆ ವಹಿಸಿದ್ದರು.
ಮನುಕುಲದ ಏಳಿಗೆ ಬಯಸಿದವ ಶ್ರೀಕೃಷ್ಣ: ಸಂಜೀವ ಮಠಂದೂರು
ಮಾಜಿ ಶಾಸಕ ಸಂಜೀವ ಮಠಂದೂರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ’ಶ್ರೀಕೃಷ್ಣ ಪರಮಾತ್ಮನು ದೈವಾಂಶ ಸಂಭೂತ ಹಾಗೂ ಮನುಕುಲದ ಏಳಿಗೆಯನ್ನು ಬಯಸಿದ ಮಹಾನ್ ಚೇತನ. ಇಂದು ನಾವು ಮಕ್ಕಳನ್ನು ಕೃಷ್ಣನ ವೇಷಧಾರಿಗಳನ್ನಾಗಿ ಮಾಡುವ ಮೂಲಕ ಆ ಭಗವಂತನನ್ನು ಕಾಣುತ್ತಿದ್ದೇವೆ. ಭಗವದ್ಗೀತೆಯು ಹಿಂದೂ ಸಮಾಜಕ್ಕೆ ಹುಟ್ಟಿನಿಂದ ಸಾವಿನ ತನಕ ಯಾವ ರೀತಿ ಧರ್ಮ ಮಾರ್ಗದಲ್ಲಿಬದುಕಬೇಕು ಎಂಬ ಅತ್ಯುನ್ನತ ಮಾರ್ಗದರ್ಶನ ನೀಡುತ್ತದೆ’ ಎಂದರು.
ಜಾತಿ ಭೇದವಿಲ್ಲದ ಸಮಾಜದ ಸಂದೇಶ: ಕಿಶೋರ್ ಕುಮಾರ್ ಬೊಟ್ಯಾಡಿ
ವಿಧಾನಪರಿಷತ್ ಶಾಸಕ ಕಿಶೋರ್ ಕುಮಾರ್ ಬೊಟ್ಯಾಡಿ ಮಾತನಾಡಿ, ’ಶ್ರೀಕೃಷ್ಣನ ಜೀವನ ನಮಗೆ ಜಾತಿ ಭೇದವಿಲ್ಲದ ಸಮಾನತೆಯ ಸಮಾಜವನ್ನು ತೋರಿಸಿಕೊಟ್ಟಿದೆ. ಸಮಾಜದಲ್ಲಿರುವ ಅಜ್ಞಾನ ಮತ್ತು ಅಂಧಕಾರವನ್ನು ತೊಡೆದು ಹಾಕುವುದು ಪ್ರತಿಯೊಬ್ಬರ ಕರ್ತವ್ಯ’ ಎಂದು ಕರೆ ನೀಡಿದರು.
ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆ ಸಂಚಾಲಕ ಹೇಮನಾಥ ಶೆಟ್ಟಿ ಕಾವು, ಬ್ಲಾಕ್ ಕಾಂಗ್ರೆಸ್ ಪುತ್ತೂರು ಪ್ರಧಾನ ಕಾರ್ಯದರ್ಶಿ ರವಿ ಪ್ರಸಾದ್ ಶೆಟ್ಟಿ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಸುಭಾಷ್ ರೈ ಬೆಳ್ಳಿಪ್ಪಾಡಿ ಮತ್ತು ಕರಾವಳಿ ಆದಿ ಜಾಂಬವ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಶೋಕ್ ಪೂಜಾರ ಮುಲ್ಕಿ, ವಿಂಶತಿ ಸಂಭ್ರಮೋತ್ಸವ ಸಮಿತಿ ಗೌರವ ಸಂಚಾಲಕ ರಾಮಚಂದ್ರ ಮಣಿಯಾಣಿ ಪಡ್ಯಂಬೆಟ್ಟು, ಅಧ್ಯಕ್ಷ ಗೋಪಾಲ ಮಣಿಯಾಣಿ ದೇವಸ್ಯ, ಪ್ರ.ಕಾರ್ಯದರ್ಶಿ ಸುಶಾಂತ್ ಮಣಿಯಾಣಿ ವೇದಿಕೆಯಲ್ಲಿಉಪಸ್ಥಿತರಿದ್ದರು.
ಸಾಧಕರು, ಸೇವಾಕರ್ತರಿಗೆ ಸನ್ಮಾನ
ಇದೇ ಸಂದರ್ಭದಲ್ಲಿವರಾಹ ಫೌಂಡೇಶನ್ ಮಂಗಳೂರು ಅಧ್ಯಕ್ಷ ಗಿರೀಶ್ ಆಳ್ವ, ಕಳೆದ 19 ವರ್ಷಗಳಿಂದ ಅಷ್ಟಮಿ ಕಾರ ್ಯಕ್ರಮದ ಪೌರೋಹಿತ್ಯವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ವೇ.ಮೂ.ಗೋಪಾಲಕೃಷ್ಣ ಅಡಿಗ ಅಮೆಕ್ಕಳ ಪೆರ್ಲ, ಎನ್ ಎಂಎಂಎಸ್ ಸ್ಕಾಲರ್ ಶಿಪ್ ಪುರಸ್ಕೃತ ವಿದ್ಯಾರ್ಥಿ ಪ್ರದೀಶ್ ಯಾದವ್ ಹಾಗೂ ದಿ. ಶಿವಾನಂದ ಮಣಿಯಾಣಿ ಅವರ ಸವಿ ನೆನಪಿಗಾಗಿ ಶ್ರೀಕೃಷ್ಣ ದೇವರ ರಜತ ಛಾಯಾಬಿಂಬವನ್ನು ಅರ್ಪಿಸಿದ ಸೇವಾಕರ್ತೆ ಲಲಿತಾ ನಡುಕಟ್ಟ ಅವರನ್ನು ಸಮಿತಿಯ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಗುರುವಾರ ಸಂಜೆ ಶ್ರೀಕೃಷ್ಣ ದೇವರ ಬೆಳ್ಳಿಯಾ ಛಾಯಾ ಬಿಂಬದ ಶೋಭಾಯಾತ್ರೆಗೆ ಬೆಳ್ಳಾರೆ ಗೌರಿಪುರಂ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಅಧ್ಯಕ್ಷ ಚಂದ್ರಹಾಸ ಮಣಿಯಾಣಿ ಚಾಲನೆ ನೀಡಿದರು. ಆರ್ಲಪದವು ಶಾಲಾ ಬಳಿಯಿಂದ ಕುಣಿತ ಭಜನೆ, ರಾಜ್ಯ ಪ್ರಶಸ್ತಿ ವಿಜೇತ ಮುರಳಿ ಬ್ರದರ್ಸ್ ಡಾನ್ಸ್ ಕ್ರ್ಯೂ ತಂಡದ ಶ್ರೀಕೃಷ್ಣ ಲೀಲೋತ್ಸವ, ರೆಂಜ ಮಣಿಕಂಠ ಸಿಂಗಾರಿ ಮೇಳ ಹಾಗೂ ಆಕರ್ಷಕ ಸುಡುಮದ್ದು ಪ್ರದರ್ಶನ ಶೋಭಾಯಾತ್ರೆಯಲ್ಲಿವಿಶೇಷ ಆಕರ್ಷಣೆಯಾಗಿ ನೋಡುಗರ ಕಣ್ಮನ ಸೆಳೆಯಿತು. ರಣಮಂಗಲ ಸಭಾಭವನದಲ್ಲಿವೇ.ಮೂ. ಗೋಪಾಲಕೃಷ್ಣ ಅಡಿಗ ನೇತೃತ್ವದಲ್ಲಿಶ್ರೀ ಕೃಷ್ಣನ ರಜತ ಛಾಯ ಬಿಂಬವನ್ನು ಸ್ವಾಗತಿಸಲಾಯಿತು. ಸಾಮೂಹಿಕ ಪ್ರಾರ್ಥನೆ, ದೀಪ ಪ್ರಜ್ವಲನೆ, ಶುದ್ಧಿಕಲಶಾದಿಗಳು, ಪ್ರಸಾದ ವಿನಿಯೋಗ, ಧಾರ್ಮಿಕ ಸಭೆ ಅನ್ನಸಂತರ್ಪಣೆ ನೆರವೇರಿತು.
ಶುಕ್ರವಾರ ಬೆಳಗ್ಗೆ ಪುಣ್ಯಾಹ ಗಣಪತಿ ಹವನ, ಷಡಕ್ಷರ ಹವನ, ಶ್ರೀದೇವರ ಪ್ರತಿಷ್ಠೆ, ಹವನ ಪೂರ್ಣಾಹುತಿ, ಭಜನಾ ಕಾರ್ಯಕ್ರಮ, ಕಲ್ಪೋಕ್ತಪೂಜೆ, ಮಧ್ಯಾಹ್ನ ಪ್ರಸನ್ನಪೂಜೆ, ಪಲ್ಲಪೂಜೆ, ಗೋಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಸಂಸದ ಬ್ರಿಜೇಶ್ ಚೌಟ, ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್ , ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಮತ್ತಿತರ ಗಣ್ಯರು ಕಾರ ್ಯಕ್ರಮದಲ್ಲಿಭಾಗವಹಿಸಿದ್ದರು. ಬೆಳಗ್ಗೆ ಶ್ರೀಕೃಷ್ಣ ವೇಷ ಸ್ಪರ್ಧೆ, ಬೆಳಗ್ಗಿನಿಂದ ಸಂಜೆವರೆಗೆ ಕ್ರೀಡಾಕೂಟ, ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ ್ಯಕ್ರಮ, ಸಂಜೆ ದೀಪಾರಾಧನೆ, ಸಂಕೀರ್ತನ ಸೇವೆ, ಷೋಡಶೋಪಚಾರ ಪೂಜೆ, ಅಷ್ಟಾವಧಾನ ಸೇವೆ, ಅಘ್ರ್ಯ ಪ್ರದಾನ ಸೇವೆ ಸಹಿತ ಶ್ರೀಕೃಷ್ಣ ದೇವರಿಗೆ ತೊಟ್ಟಿಲೋತ್ಸವದೊಂದಿಗೆ ಕಾರ ್ಯಕ್ರಮ ಸಂಪನ್ನಗೊಂಡಿತು.
4 ಪಿಎಲ್ ಲಲಿತ: ಶುಕ್ರವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿಶ್ರೀಕೃಷ್ಣ ದೇವರ ರಜತ ಛಾಯಾಬಿಂಬವನ್ನು ಅರ್ಪಿಸಿದ ಸೇವಾಕರ್ತೆ ಲಲಿತಾ ನಡುಕಟ್ಟ ಅವರನ್ನು ಸನ್ಮಾನಿಸಲಾಯಿತು.
4 ಪಿಎಲ್ ಲೀಲೋತ್ಸವ: ಗುರುವಾರ ರಾತ್ರಿ ಶೋಭಾಯಾತ್ರೆಯಲ್ಲಿರಾಜ್ಯ ಪ್ರಶಸ್ತಿ ವಿಜೇತ ಮುರಳಿ ಬ್ರದರ್ಸ್ ಡಾನ್ಸ್ ಕ್ರ್ಯೂ ತಂಡದ ಶ್ರೀಕೃಷ್ಣ ಲೀಲೋತ್ಸವ ಗಮನ ಸೆಳೆಯಿತು.