ನಗರದ ಬಿಸಿಎಂ ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿಶರಣ ಸಾಹಿತ್ಯ ಪರಿಷತ್ತು ಹಿರೇಕೆರೂರು ಘಟಕದಿಂದ ವಚನ ದಿನ ಕಾರ್ಯಕ್ರಮ ಜರುಗಿತು.ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಕೆ.ಎಂ.ಹರಿಯಾಳ್ ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ಉಪನ್ಯಾಸಕ ಎಚ್ .ಎಸ್ .ಹಲಗೇರಿ ಮಾತನಾಡಿ, ‘‘ಶರಣರ ವಚನ ಸಾಹಿತ್ಯದಲ್ಲಿಬದುಕಿನ ಸಾರವೇ ಅಡಗಿದೆ. ಅದು ಇಂದಿಗೂ, ಮುಂದೆಂದಿಗೂ ಜೀವಂತವಾಗಿರುವ ಸಾಹಿತ್ಯ. ಜೀವನ ಸಂಸ್ಕಾರವಿರುವ ಈ ಸಾಹಿತ್ಯವನ್ನು ನಮ್ಮ ಮಕ್ಕಳಿಗೆ ಉಣಬಡಿಸುವ ಅಗತ್ಯವಿದೆ’’ ಎಂದರು.
ತಾಲೂಕು ಶರಣ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಸಿ.ಬಿ. ಮಾಳಗಿ ಮಾತನಾಡಿ, ‘‘ಪ.ಗು. ಹಳಕಟ್ಟಿಯವರು ವಚನ ಸಾಹಿತ್ಯವನ್ನು ಸಂಶೋಧಿಸದೇ ಇದ್ದಿದ್ದರೆ ಅದು ಕಣ್ಮರೆಯಾಗುತ್ತಿತ್ತು’’ ಎಂದರು.
ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಚಾರ್ಯ ಎಂ.ಬಿ. ಕಾಗಿನಲ್ಲಿಮತ್ತು ಕದಳಿ ವೇದಿಕೆ ಅಧ್ಯಕ್ಷೆ ಬಸಮ್ಮ ಅಬಲೂರು ಮಾತನಾಡಿದರು. ವಸತಿ ನಿಲಯದ ಮೇಲ್ವಿಚಾರಕಿ ಭಾರತಿ ಸ್ವಾಗತಿಸಿದರು, ಚಿಕ್ಕನರಗುಂದ ಮಠ ನಿರೂಪಿಸಿದರು, ಆರ್ .ಟಿ. ಬಣಕಾರ್ ವಂದಿಸಿದರು. ಸಮಾರಂಭದಲ್ಲಿವಸತಿ ನಿಲಯದ ಸಿಬ್ಬಂದಿ, ವಿದ್ಯಾರ್ಥಿನಿಯರು ಹಾಗೂ ಹಿರಿಯರಾದ ಆರ್ .ಎಲ್ . ತೆಂಬದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.