ಕ್ರೀಡೆಗಳು ಮಾನವನ ಜೀವನದ ಅವಿಭಾಜ್ಯ ಅಂಗ. ಕ್ರೀಡಾಪಟುಗಳು ಸೋಲು-ಗೆಲುವನ್ನು ಗಣನೆಗೆ ತಾರದೇ ಸ್ಪರ್ಧಾತ್ಮಕ ಮನೋಭಾವದಿಂದ ಆಟವಾಡುವುದು ಒಳ್ಳೆಯ ಆಟಗಾರನ ಲಕ್ಷಣ ಎಂದು ಶಾಸಕ ಡಿ.ಎಮ…. ಐಹೊಳೆ ಹೇಳಿದರು.ಪಟ್ಟಣದ ಕೆಎಲ್ ಇ ಸಂಸ್ಥೆಯ ಮಲಗೌಡಾ ಪಾಟೀಲ ಬಿಸಿಎ ಮಹಾವಿದ್ಯಾಲಯದ ಆವರಣದಲ್ಲಿಹಮ್ಮಿಕೊಳ್ಳಲಾಗಿದ್ದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿ, ‘‘ಕ್ರೀಡಾಕೂಟದಲ್ಲಿನಿರ್ಣಾಯಕರು ಯಾವುದೇ ತಾರತಮ್ಯ ಮಾಡದೇ ನಿಷ್ಪಕ್ಷಪಾತವಾಗಿ ಸರಿಯಾದ ನಿರ್ಣಯ ನೀಡಬೇಕು,’’ ಎಂದು ಸೂಚಿಸಿದರು.
ಕುಪ್ಪನವಾಡಿ ಮುರುNೕಂದ್ರ ವಸತಿ ಶಾಲೆಯ ಅಧ್ಯಕ್ಷ ಡಾ. ಕೆ.ಪಿ. ಧರಿಗೌಡರ ಮಾತನಾಡಿ, ‘‘ವಿದ್ಯಾರ್ಥಿಗಳಲ್ಲಿಧೈರ್ಯ, ಶಿಸ್ತು, ಸ್ವಯಂ ನಿಯಂತ್ರಣ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುವುದು ಕ್ರೀಡಾಕೂಟಗಳ ಮುಖ್ಯ ಉದ್ದೇಶವಾಗಿದೆ. ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಲು ಪ್ರತಿಯೊಬ್ಬ ವಿದ್ಯಾರ್ಥಿಯೂ ಕ್ರೀಡೆಗಳಲ್ಲಿಸಕ್ರಿಯವಾಗಿ ಭಾಗವಹಿಸಬೇಕು,’’ ಎಂದರು.
ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಆರ್ .ಕೆ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಅಪ್ಪಾಸಾಹೇಬ ಕುಲಗುಡೆ, ಸದಸ್ಯರಾದ ಡಿ.ಎಲ…. ಮಿರ್ಜೆ, ವಿ.ಪಿ. ಪಾಟೀಲ, ಎಮ….ಎಮ…. ನಿಶಾನದಾರ, ಎಸ್ .ಎಸ್ . ಸನದಿ, ಕುಶಾಲ ಶೆಟ್ಟಿ, ಸುದರ್ಶನ ಹುಳಿಕೊಪ್ಪ, ಶಿವಾನಂದ ಖವಟಕೊಪ್ಪ ಹಾಗೂ ವಿವಿಧ ಕಾಲೇಜುಗಳ ದೈಹಿಕ ಶಿಕ್ಷಕರು ಮತ್ತು ಕ್ರೀಡಾಪಟುಗಳು ಉಪಸ್ಥಿತರಿದ್ದರು.
- 4ರಾಯಬಾಗ1
ರಾಯಬಾಗದ ಕೆಎಲ್ ಇ ಸಂಸ್ಥೆಯ ಮಲಗೌಡಾ ಪಾಟೀಲ ಬಿಸಿಎ ಮಹಾವಿದ್ಯಾಲಯದ ಆವರಣದಲ್ಲಿಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪಿಯು ಕಾಲೇಜುಗಳ ಕ್ರೀಡಾಕೂಟವನ್ನು ಶಾಸಕ ಡಿ.ಎಮ…. ಐಹೊಳೆ ಉದ್ಘಾಟಿಸಿದರು.