ಪಿಒಪಿ ಗಣೇಶ ತಯಾರಿಸಿದರೆ, ಮಾರಿದರೆ ಕಠಿಣ ಕ್ರಮ

Contributed bysunilkumarpapuu@gmail.com|Vijaya Karnataka
strict action against pop ganesh creation importance of eco friendly festival
ವಿಕ ಕಳಕಳಿ: ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ಸರಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ

ವೆಂ.ಸುನೀಲ್ ಕುಮಾರ್ ಕೋಲಾರ
s್ಠ್ಞಜ್ಝಿ.k್ಠಞa್ಟ14ಃಠಿಜಿಞಛಿsಟ್ಛಜ್ಞಿdಜಿa.್ಚಟಞ

ಪ್ರಸಕ್ತ ಸಾಲಿನಲ್ಲಿಪರಿಸರ ಸ್ನೇಹಿ ಹಬ್ಬ ಆಚರಣೆ ಆದ್ಯತೆ ನೀಡಿರುವ ಮಾಲಿನ್ಯ ನಿಯಂತ್ರಣ ಮಂಡಳಿ ಜಾಗೃತಗೊಂಡಿದ್ದು, ಗಣೇಶ ಮೂರ್ತಿ ತಯಾರಿಕಾ ಘಟಕಗಳಿಗೆ ಭೇಟಿ ಕೊಟ್ಟು ಪರಿಶೀಲಿಸುವ ಕಾರ್ಯಕ್ಕೆ ಮುಂದಾಗಿದೆ.

ಪ್ರತಿವರ್ಷ ಹಬ್ಬದ ಹಿನ್ನೆಲೆಯಲ್ಲಿಒಂದೆರೆಡು ಸಭೆ ನಡೆಸಿ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಸುಮ್ಮನಾಗುತ್ತಿದ್ದರು. ಆದರೆ, ಈ ಬಾರಿ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿಚುರುಕಿನ ಕಾರ್ಯಾಚರಣೆ ನಡೆಸುತ್ತಿರುವ ಅಧಿಕಾರಿಗಳು ತಯಾರಕರು ಹಾಗೂ ವರ್ತಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಮುಂದುವರಿದು ಸರಕಾರಿ ಶಾಲೆಗಳು ಹಾಗೂ ಗ್ರಾಪಂಗಳಿಗೆ ಭೇಟಿ ನೀಡಿ ಪರಿಸರ ಸ್ನೇಹಿ ಹಬ್ಬ ಆಚರಣೆಯ ಮಹತ್ವವನ್ನು ಜನರಿಗೆ ತಿಳಿಸುವ ಕಾರ್ಯದಲ್ಲಿತೊಡಗಿದ್ದು, ಪಿಒಪಿ ಗಣೇಶ ಮೂರ್ತಿಗಳ ತಯಾರಿಕೆ ಹಾಗೂ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಎಚ್ಚರಿಕೆಯನ್ನ ನೀಡಿರುವುದು ಆಶಾದಾಯಕ ಸಂಗತಿಯಾಗಿದೆ.

ಪ್ರತಿವರ್ಷ ಗಣೇಶ ಮೂರ್ತಿಗಳ ವಿಸರ್ಜನೆಯ ಸಂದರ್ಭದಲ್ಲಿಜಲಮೂಲಗಳು ಕಲುಷಿತಗೊಳ್ಳುತ್ತಿವೆ. ಸಾಕಷ್ಟು ಜಾಗೃತಿಯ ಸಾಕಷ್ಟು ಪಿಒಪಿ ಗಣೇಶ ಮೂರ್ತಿಗಳು ವಿಸರ್ಜನೆಗೆ ಬರುತ್ತವೆ. ಪ್ಲಾಸ್ಟರ್ ಆಫ್ ಪ್ಯಾರೀಸ್ ನಿಂದ ತಯಾರಿಸಿದ ಮೂರ್ತಿಗಳು ನೀರಿನಲ್ಲಿಸುಲಭವಾಗಿ ಕರಗುತ್ತಿಲ್ಲ. ಮೂರ್ತಿಗಳಿಗೆ ಬಳಸುವ ರಾಸಾಯನಿಕ ಬಣ್ಣಗಳಲ್ಲಿರುವ ಭಾರಲೋಹಗಳನ್ನು ಹಾಗೂ ಇತರ ವಿಷಕಾರಿ ಅಂಶಗಳು ಕೆರೆ, ಕಲ್ಯಾಣಿ, ನದಿ ಸೇರಿದಂತೆ ಜಲಮೂಲಗಳ ನಿÀäನ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತವೆ.

ಹೀಗಾಗಿ, ಅಧಿಕಾರಿಗಳೊಂದಿಗೆ ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳು ಕೈಜೋಡಿಸಬೇಕಿದ್ದು, ಪರಿಸರ ಸ್ನೇಹಿ ಹಬ್ಬ ಆಚರಿಸುವ ಮೂಲಕ ಜಲಮೂಲಗಳ ಸಂರಕ್ಷಣೆಗೆ ಪ್ರತಿಯೊಬ್ಬರು ತಮ್ಮದೇ ಆದ ಸಹಕಾರವನ್ನು ನೀಡಬೇಕಿದೆ ಎನ್ನುವುದು ಅಧಿಕಾರಿಗಳ ಆಶಯವಾಗಿದೆ.

ಮಣ್ಣಿನ ಗಣಪನಿಗೆ ಆದ್ಯತೆ ಕೊಡಿ: ಪರಿಸರ ಸ್ನೇಹಿ ಗಣೇಶೋತ್ಸವದ ಮೊದಲ ಹೆಜ್ಜೆಯಾಗಿ ನೈಸರ್ಗಿಕ ಜೇಡಿಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಗಳಿಗೆ ಆದ್ಯತೆ ನೀಡಬೇಕಿದೆ. ಯಾವುದೇ ರಾಸಾಯನಿಕ ಲೇಪನವಿಲ್ಲದ, ನೈಸರ್ಗಿಕ ಬಣ್ಣಗಳಿಂದ ಅಲಂಕರಿಸಿದ ಮೂರ್ತಿಗಳನ್ನು ಖರೀದಿಸುವುದು ಉತ್ತಮ. ಇಂತಹ ಮೂರ್ತಿಗಳು ನೀರಿನಲ್ಲಿಸುಲಭವಾಗಿ ಕರಗುವುದರಿಂದ ಜಲಮೂಲಗಳ ಮೇಲಿನ ಮಾಲಿನ್ಯದ ಹೊರೆ ಕಡಿಮೆಯಾಗುತ್ತದೆ.

ಪಿಒಪಿ ಮೂರ್ತಿಗಳಿಗೆ ಕಡಿವಾಣ ಅಗತ್ಯ

ಕಡಿಮೆ ಬೆಲೆ, ಆಕÐರ್ಷಕ ವಿನ್ಯಾಸ ಎಂಬ ಕಾರಣಕ್ಕೆ ಪ್ಲಾಸ್ಟರ್ ಆಫ್ ಪ್ಯಾರಿಸ್ ಮೂರ್ತಿಗಳತ್ತ ಜನರು ಆಕರ್ಷಿತರಾಗುತ್ತಾರೆ. ಆದರೆ ಕ್ಷಣಿಕ ಆಕರ್ಷಣೆಗಿಂತ ಪರಿಸರದ ದೀರ್ಘಕಾಲಿನ ಹಿತ ಮುಖ್ಯ. ಹೀಗಾಗಿ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳು ಹಾಗೂ ಮನೆಗಳಲ್ಲಿಗಣೇಶ ಪ್ರತಿಷ್ಠಾಪಿಸುವವರು ಪಿಒಪಿ ಮೂರ್ತಿಗಳನ್ನು ತ್ಯಜಿಸಿ ಮಣ್ಣಿನ ಮೂರ್ತಿಗಳಿಗೆ ಆದ್ಯತೆ ನೀಡಬೇಕು.

ಶಬ್ದ, ಪ್ಲಾಸ್ಟಿಕ್ ಬಳಕೆಗೂ ನಿಯಂತ್ರಣ

ಗಣೇಶೋತ್ಸವದಲ್ಲಿಧ್ವನಿ ವರ್ಧಕಗಳ ಅತಿಯಾದ ಬಳಕೆ, ಪಟಾಕಿಗಳ ಸದ್ದು ಕೂಡ ಪರಿಸರ ಮತ್ತು ಸಾರ್ವಜನಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ನಿಗದಿತ ಸಮಯ ಹಾಗೂ ಶಬ್ದ ಮಿತಿಯನ್ನು ಪಾಲಿಸುವುದು ಅಗತ್ಯ. ಹಬ್ಬದ ಅಲಂಕಾರದಲ್ಲಿಪ್ಲಾಸ್ಟಿಕ್ ಹೂವು, ಥರ್ಮಾಕೋಲ್ , ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದೆ ಬಟ್ಟೆ, ಕಾಗದ, ಬಿದಿರು, ಎಲೆ, ಹೂವು ಸೇರಿದಂತೆ ನೈಸರ್ಗಿಕ ವಸ್ತುಗಳನ್ನು ಬಳಸಬೇಕು ಎನ್ನುವುದು ವಿಕ ಕಳಕಳಿಯಾಗಿದೆ.

ಕೋಟ್

ಪರಿಸರಕ್ಕೆ ಹಾನಿಯುಂಟು ಮಾಡುವ ಪಿಒಪಿ ಗಣೇಶ ಮೂರ್ತಿಗಳನ್ನು ತಯಾರಿಕೆ ಮಾಡದಂತೆ ಈಗಾಗಲೇ ಗಣೇಶ ಮೂರ್ತಿ ತಯಾರಕರಿಗೆ ಸೂಚಿಸಿದ್ದು, ಘಟಕಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ. ಪಿಒಪಿ ಗಣೇಶ ಮೂರ್ತಿ ತಯಾರಿಕೆ ಅಥವಾ ಮಾರಾಟ ಕಂಡುಬಂದರೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು. ಸಾರ್ವಜನಿಕರೂ ಪರಿಸರ ಸ್ನೇಹಿ ಹಬ್ಬ ಆಚರಿಸುವ ಮೂಲಕ ಕೈಜೋಡಿಸಬೇಕಿದೆ.

- ಸಿ.ಎನ್ .ವಸಂತಶ್ರೀ, ಪರಿಸರ ಅಧಿಕಾರಿ, ಕೆಎಸ್ ಪಿಸಿಬಿ ಕೋಲಾರ

ಫೋಟೋ ಕ್ಯಾಪ್ಷನ್

04ಕೆಎಲ್ ಆರ್ ಎಸ್ ಕೆ1: ಅಧಿಕಾರಿಗಳು ಗಣೇಶ ಮೂರ್ತಿ ತಯಾರಿಕಾ ಘಟಕಕ್ಕೆ ಭೇಟಿ ಪರಿಶೀಲಿಸಿದ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು.

04ಕೆಎಲ್ ಆರ್ ಎಸ್ ಕೆ2: ಫೈಲ್ ಫೋಟೊ