(ಬೆಂಗಳೂರಿಗೆ)ಇಂದು ವಂದೇ ಭಾರತ್ ಟೈಮಿಂಗ್ ಟ್ರಯಲ್

Contributed byvinaykudrasthe13@gmail.com|Vijaya Karnataka
vande bharat train timing trial high speed journey between bangalore and mangalore
ಇಂದು ವಂದೇ ಭಾರತ್ ಟೈಮಿಂಗ್ ಟ್ರಯಲ್

ಯಶವಂತಪುರ-ಮಂಗಳೂರು ನಡುವೆ ಸಂಚಾರ | 16 ಬೋಗಿಗಳ ಎಇಬಿ ಅಳವಡಿಸಿದ ರೇಕ್ ನೊಂದಿಗೆ ಪರೀಕ್ಷೆ
ವಿನಯ್ ಕೂಡುರಸ್ತೆ

ಘ್ಕಿvಜ್ಞಿayk್ಠd್ಟasಠಿhಛಿಃಜಞaಜ್ಝಿ.್ಚಟಞ

ಪಶ್ಚಿಮ ಘಟ್ಟದ ಮಡಿಲಲ್ಲಿಹಾದು ಹೋಗುವ ಶಿರಾಡಿಘಾಟ್ ರೈಲು ಮಾರ್ಗದಲ್ಲಿವಂದೇ ಭಾರತ್ ಎಕ್ಸ್ ಪ್ರೆಸ್ ಯಶಸ್ವಿ ಪ್ರಾಯೋಗಿಕ ಸಂಚಾರ ನಡೆಸಿದ್ದು, ಕರಾವಳಿ-ಮಲೆನಾಡು ಜನರ ದಶಕಗಳ ಕನಸು ನನಸಾಗುವ ಹಂತಕ್ಕೆ ಬಂದಿದೆ. ಆಗಸ್ಟ್ ಎರಡನೇ ವಾರದಲ್ಲಿಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ನಡುವೆ 20 ಬೋಗಿಗಳ ಎಇಬಿ ರೇಕ್ ನೊಂದಿಗೆ ನಡೆದ ತಾಂತ್ರಿಕ ಪರೀಕ್ಷೆ ಯಶಸ್ವಿಯಾದ ಹಿನ್ನೆಲೆಯಲ್ಲಿರೈಲ್ವೆ ಸಚಿವಾಲಯ ಟೈಮಿಂಗ್ ಟ್ರಯಲ್ ಗೆ ಆದೇಶಿಸಿದೆ.

ನೈಋುತ್ಯ ರೈಲ್ವೆ ಪ್ರಧಾನ ಕಚೇರಿ ಗುರುವಾರ ವೇಳಾಪಟ್ಟಿ ಪ್ರಕಟಿಸಿದ್ದು, ಸೆ.5ರಂದು ಯಶವಂತಪುರ-ಮಂಗಳೂರು ಸೆಂಟ್ರಲ್ ನಡುವೆ 16 ಬೋಗಿಗಳ ಎಇಬಿ ಅಳವಡಿಸಿದ ರೇಕ್ ನೊಂದಿಗೆ ಟೈಮಿಂಗ್ ಟ್ರಯಲ್ ನಡೆಯಲಿದೆ. ಈ ಹಿಂದೆ ಮಂಗಳೂರು-ತಿರುವನಂತಪುರಂ ಮಾರ್ಗದಲ್ಲಿನೇತ್ರಾವತಿ ಸೇತುವೆ ಮೇಲೆ ಸಂಚರಿಸಿದ್ದ ಇದೇ ರೇಕ್ , ಈಗ ಬೆಂಗಳೂರು-ಮಂಗಳೂರು ಮಾರ್ಗದಲ್ಲಿಪರೀಕ್ಷೆಗೊಳಗಾಗಲಿದೆ. ಯಶವಂತಪುರ-ಹಾಸನ ಟ್ರಯಲ್ ಅನ್ನು ಬೆಂಗಳೂರು ವಿಭಾಗ, ಹಾಸನ-ಮಂಗಳೂರು ಟ್ರಯಲ್ ಅನ್ನು ಮೈಸೂರು ವಿಭಾಗ ನಡೆಸಲಿದೆ. ಅಧಿಕಾರಿಗಳು ಜಂಟಿ ತಪಾಸಣೆ ನಡೆಸಲಿದ್ದಾರೆ.

ಏನಿದು ಶಿರಾಡಿ ಸವಾಲು? ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ನಡುವಿನ 55 ಕಿ.ಮೀ ಘಾಟ್ ವಿಭಾಗ ದೇಶದ ಕಠಿಣ ಮಾರ್ಗಗಳಲ್ಲಿಒಂದು. ಇಲ್ಲಿ57 ಸುರಂಗಗಳು, 258 ಸೇತುವೆಗಳು, 108 ತೀಕ್ಷ್ಣ ತಿರುವುಗಳಿವೆ. 1:50 ಇಳಿಜಾರು ಇರುವ ಕಾರಣ ಗಂಟೆಗೆ 30 ಕಿ.ಮೀ ವೇಗದ ನಿರ್ಬಂಧವಿದೆ. ಮಳೆಗಾಲದಲ್ಲಿಭೂಕುಸಿತ, ಜಾರುವಿಕೆ ಭೀತಿ ಇದೆ. ಇದೇ ಕಾರಣಕ್ಕೆ ಹೈಸ್ಪೀಡ್ ರೈಲು ಬಿಡಲು ರೈಲ್ವೆ ಇಲಾಖೆ ಹಿಂದೇಟು ಹಾಕುತ್ತಿತ್ತು. ಆದರೆ ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕ್ ತಂತ್ರಜ್ಞಾನ ಈ ಸವಾಲನ್ನು ಮೆಟ್ಟಿ ನಿಂತಿದೆ. ನಿಗದಿತ ವೇಗ ಮೀರಿದರೆ ರೈಲು ತಾನಾಗಿಯೇ ನಿಲ್ಲುವ ವ್ಯವಸ್ಥೆ ಇದಾಗಿದೆ. ಇದು ಸುರಕ್ಷತೆಗೆ ಹೆಚ್ಚಿನ ಭರವಸೆ ನೀಡಿದೆ.

ಟೈಮಿಂಗ್ ವೇಳಾಪಟ್ಟಿ ಹೇಗಿದೆ?: ರೈಲ್ವೆ ಪ್ರಕಟಿಸಿರುವಂತೆ ಯಶವಂತಪುರದಿಂದ ಬೆಳಗ್ಗೆ 6.05ಕ್ಕೆ ಹೊರಡುವ ರೈಲು ಹಾಸನಕ್ಕೆ 9.05ಕ್ಕೆ, ಸಕಲೇಶಪುರಕ್ಕೆ 10 ಗಂಟೆಗೆ, ಸುಬ್ರಹ್ಮಣ್ಯ ರಸ್ತೆಗೆ 12.35ಕ್ಕೆ ತಲುಪಿ ಮಧ್ಯಾಹ್ನ 2.25ಕ್ಕೆ ಮಂಗಳೂರು ಸೆಂಟ್ರಲ್ ಸೇರಲಿದೆ. ಇದು 8 ಗಂಟೆ 20 ನಿಮಿಷದ ಪ್ರಯಾಣ. ವಾಪಸ್ ಮಧ್ಯಾಹ್ನ 3ಕ್ಕೆ ಮಂಗಳೂರಿನಿಂದ ಹೊರಟು ಸುಬ್ರಹ್ಮಣ್ಯ 4.35, ಸಕಲೇಶಪುರ 6.35, ಹಾಸನ 7.30ಕ್ಕೆ ತಲುಪಿ ರಾತ್ರಿ 11ಕ್ಕೆ ಯಶವಂತಪುರ ತಲುಪಲಿದೆ. ಇದು 8 ಗಂಟೆ ಪ್ರಯಾಣ. ಪ್ರಸ್ತುತ ಇದೇ ಮಾರ್ಗದಲ್ಲಿ11ರಿಂದ 12 ಗಂಟೆ ಬೇಕಾಗುತ್ತದೆ. ಇದರಿಂದ 3ರಿಂದ 4 ಗಂಟೆ ಉಳಿತಾಯವಾಗಲಿದೆ.

ಪ್ರತಿಫಲವೇನು? : ಇದರಿಂದ ಸಕಲೇಶಪುರಕ್ಕೆ ಬಹುಮುಖಿ ಲಾಭವಾಗಲಿದೆ. ಕಾಫಿ, ಮೆಣಸು, ಏಲಕ್ಕಿ ಬೆಳೆಗಾರರಿಗೆ ಬೆಂಗಳೂರು ಮಾರುಕಟ್ಟೆಗೆ ತ್ವರಿತ ಸಂಪರ್ಕ ಸಿಗಲಿದೆ. ವಿದ್ಯಾರ್ಥಿಗಳು, ನೌಕರರು ಬೆಳಗ್ಗೆ ಬೆಂಗಳೂರಿಗೆ ಹೋಗಿ ರಾತ್ರಿ ವಾಪಸ್ ಬರುವ ಡೇ ಟ್ರಿಪ್ ಮಾಡಬಹುದು. ರಾಷ್ಟಿ್ರೕಯ ಹೆದ್ದಾರಿ 75ರಲ್ಲಿಗುಂಡಿ, ಟ್ರಾಫಿಕ್ ಜಾಮ್ ನಿಂದ ಬೇಸತ್ತಿರುವ ಪ್ರಯಾಣಿಕರಿಗೆ ಇದು ವರದಾನವಾಗಲಿದೆ. ಬಿಸಿಲೆ ಘಾಟ್ , ಮಂಜರಾಬಾದ್ ಕೋಟೆ, ಸಕಲೇಶಪುರದ ಹೋಂಸ್ಟೇಗಳಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಲಿದೆ. ಸ್ಥಳೀಯ ವ್ಯಾಪಾರ ವಹಿವಾಟು ಹೆಚ್ಚಲಿದೆ. ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ. ಹಿರಿಯ ಅಧಿಕಾರಿಗಳು ಘಾಟ್ ನಲ್ಲಿರೈಲಿನ ಚಾಲನೆ, ನಿಲ್ದಾಣಗಳಲ್ಲಿಸಮಯ ಪಾಲನೆ ಬಗ್ಗೆ ವಿವರವಾದ ವರದಿ ಸಲ್ಲಿಸಲಿದ್ದಾರೆ. ಬಳಿಕ ದರ, ನಿಲುಗಡೆ ಅಂತಿಮವಾಗಲಿದೆ.

ರೈಲ್ವೆ ಇಲಾಖೆ ಬೆಂಗಳೂರು- ಮಂಗಳೂರು ಪ್ರಯಾಣ ಸಮಯವನ್ನು ಕಡಿಮೆ ಮಾಡಲು ಶ್ರಮಿಸುತ್ತಿದ್ದು, ವಂದೇ ಭಾರತ್ ಎಕ್ಸ್ ಪ್ರೆಸ್ ಟೈಮಿಂಗ್ ಟ್ರಯಲ್ ಗಾಗಿ ಎಲ್ಲಸಿದ್ಧತೆ ನಡೆಸಿದೆ.

-ಮನು, ರೈಲ್ವೆ ಅಧಿಕಾರಿ ಸಕಲೇಶಪುರ