ರಾಜೀವ ಸ್ಮಾರಕ ಶಿಕ್ಷಣ ಸಂಸ್ಥೆಯ ಅಡಿಯಲ್ಲಿನಿರ್ಮಾಣಗೊಂಡಿರುವ ರಾಜೀವ ಗಾಂಧಿ ಔಷಧ ಮಹಾವಿದ್ಯಾಲಯಕ್ಕೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ.ಭಗವಾನ ಬಿ.ಸಿ ಭೇಟಿ ನೀಡಿದಾಗ ಗೌರವಿಸಲಾಯಿತು.**
(ಕಿಕ್ಕರ್ ) ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿಗೆ ಸನ್ಮಾನ
ಔಷಧ ಮಹಾವಿದ್ಯಾಲಯಕ್ಕೆ ಭೇಟಿ
ವಿಕ ಸುದ್ದಿಲೋಕ ಕಲಬುರಗಿ
ನಗರದ ಹೊರ ವಲಯದ ಖಣದಾಳ ರಸ್ತೆಯಲ್ಲಿನಿರ್ಮಾಣವಾಗಿರುವ ಸುಮಾರು 3 ಎಕರೆ ಸ್ಥಳದಲ್ಲಿರಾಜೀವ ಸ್ಮಾರಕ ಶಿಕ್ಷಣ ಸಂಸ್ಥೆಯ ಅಡಿಯಲ್ಲಿನಿರ್ಮಾಣಗೊಂಡಿರುವ ರಾಜೀವ ಗಾಂಧಿ ಔಷಧ ಮಹಾವಿದ್ಯಾಲಯಕ್ಕೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ.ಭಗವಾನ ಬಿ.ಸಿ ಭೇಟಿ ನೀಡಿದರು.
ನಂತರ ಆಡಳಿತ ಮಂಡಳಿ ಸನ್ಮಾನ ಸ್ವೀಕರಿಸಿ ವಿದ್ಯಾರ್ಥಿಗಳೊಡನೆ ಸಂವಾದ ನಡೆಸಿದರು. ರಾಜೀವ ಸ್ಮಾರಕ ಶಿಕ್ಷಣ ಸಂಸ್ಥೆಯು ಸುಮಾರು 36 ವರ್ಷಗಳ ಸೇವೆ ಸಲ್ಲಿಸಿತ್ತಿದ್ದು. ಇದರ ಅಡಿಯಲ್ಲಿನಿರ್ಮಾಣಗೊಂಡಿರುವ ಕಾಲೇಜು ವಿಶಾಲ ಉತ್ತಮ ಗಾಳಿಯಾಡುವ ತರಗತಿ ಕೊಠಡಿಗಳು ಸುರಕ್ಷಿತ ವ್ಯವಸ್ಥೆ ಮತ್ತು ಪ್ರಯೋಗಾಲಯಗಳಲ್ಲಿಆಧುನಿಕ ಉಪಕರಣಗಳು, ರಾಸಾಯನಿಕಗಳು ಮತ್ತು ಸುರಕ್ಷತೆಯ ಸಾಧನಗಳಿವೆ ಎಂದು ಹೇಳಿದರು.
ಗ್ರಂಥಾಲಯ ವ್ಯವಸ್ಥೆಯಲ್ಲಿಉಲ್ಲೇಖ ಪುಸ್ತಕಗಳು, ಜರ್ನಲ್ ಗಳು, ಇ-ಸಂಪನ್ಮೂಲಗಳು ಹಾಗೂ ವಿದ್ಯಾರ್ಥಿನಿಯರುಗಳು ಪ್ರತ್ಯೇಕ ಓದುವ ಸ್ಥಳ, ಕಂಪ್ಯೂಟರ್ ಲ್ಯಾಬ್ , ವೇಗ ಇಂಟರ್ ನೆಟ್ ವೈ.ಪೈ ಸೌಲಭ್ಯ, ಜತೆಯಲ್ಲಿಸ್ಮಾರ್ಟ್ ಕ್ಲಾಸ್ ಮತ್ತು ಪ್ರೊಜೆಕ್ಟ್ಗಳ ವ್ಯವಸ್ಥೆ, ಅನ್ ಲೈನ್ ಅದ್ಯಯನ, ಡಿಜಿಟಲ್ ಗ್ರಂಥಾಲಯ ಸೌಲಭ್ಯ, ಪ್ರಾಚಾರ್ಯರ ಕೊಠಡಿ, ಆಡಳಿತ ಕಚೇರಿ, ದಾಖಲೆ ವಿಭಾಗ, ಕುಡಿಯುವ ನೀರಿನ ವ್ಯವಸ್ಥೆ, ಸೆಮಿನರ್ ಹಾಲ್ , ಆಡಿಟೋರಿಯಂ, ಅಗ್ನಿ ಶಾಮಕ ಮತ್ತು ತುರ್ತು ಸುರಕ್ಷಿತ ವ್ಯವಸ್ಥೆ ಹಾಗಾಗಿ ವಿದ್ಯಾರ್ಥಿಗಳು ಹಸಿರು ಪರಿಸರ ಮತ್ತು ಸ್ವಚ್ಛತಾ ವ್ಯವಸ್ಥೆ ಒಟ್ಟಾರೆ ಸೈದ್ಧಾಂತಿಕ ಜಾನ್ , ಪ್ರಯೋಗಿಕ ಕೌಶಲ, ಸಂಶೋದನಾ ಸಾಮರ್ಥ್ಯ ಎಲ್ಲಾಸೌಲಭ್ಯಗಳು ಈ ಕಾಲೇಜಿನಲ್ಲಿಒದಗಿಸಿಕೊಡಲಾಗಿದೆ ಎಂದರು. ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಕಿಶೋರಸಿಂಗ್ ಛತ್ರಪತಿ ಮಾತನಾಡಿದರು.
ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಅಶೋಕ ಕುಮಾರ ಮಾಲಪಾನಿ, ರಾಜೀವ ಗಾಂಧಿ ಪ್ರಾಚಾರ್ಯರಾದ ಪ್ರೊ.ಸಿದ್ದಣ್ಣ ದುರ್ಗದ, ಡಾ.ಗುರುರಾಜ ವಡಗೇರಿ, ಆಡಳಿತ ಮಂಡಳಿ ಸದಸ್ಯರಾದ ಪ್ರೊ.ಹರಿಪ್ರಸನ್ನ ಚಿತ್ತಾಪುರಕರ್ , ಪ್ರೊ.ವಿಶ್ವನಾಥ ಜೀವಣಗಿ, ಪ್ರಾದ್ಯಾಪಕ ಡಾ.ಹಣಮಂತ ಕಲ್ಲೂರ, ಡಾ. ಪ್ರಭುದೇವ ಮಠಪತಿ, ಡಾ. ಚನ್ನಮ್ಮ ಮಜ್ಜಿಗೆ, ಪ್ರೊ.ಶಿವರಾಜ ಸೊಲಂಕರ, ಪ್ರೊ.ಉಪೇಂದ್ರ ಕುಲಕರ್ಣಿ, ಕಿಶೋರ ಚಿಟಗುಪಕರ್ , ಡಾ.ನಜಿಮೊದ್ದಿನ್ ಇತರರಿದ್ದರು.