ತುಮಕೂರು: ರಾಜ್ಯ ಸರಕಾರದ ಪಂಚ ಗ್ಯಾರಂಟಿಗಳಲ್ಲಿಒಂದಾದ ಯುವನಿಧಿ ಯೋಜನೆಯಲ್ಲಿನೋಂದಾಯಿಸಿಕೊಂಡಿರುವ ಅಭ್ಯರ್ಥಿಗಳು ಜಾಲತಾಣ hಠಿಠಿps://sಛಿvasಜ್ಞಿdh್ಠsಛ್ಟಿvಜ್ಚಿಛಿs.ka್ಟ್ಞaಠಿaka.ಜಟv.ಜ್ಞಿ ಮೂಲಕ ಕಡ್ಡಾಯವಾಗಿ ತಮ್ಮ ಅರ್ಜಿಯು ಯಾವ ಹಂತದಲ್ಲಿದೆ ಎಂದು ಪರಿಶೀಲಿಸಿಕೊಳ್ಳತಕ್ಕದ್ದು. ಈಗಾಗಲೇ ನೋಂದಾಯಿಸಿಕೊಂಡು ಯೋಜನೆಯಡಿ ಹಣ ಪಡೆಯುತ್ತಿರುವ ಫಲಾನುಭವಿಗಳು ಸ್ವಯಂ ಘೋಷಣೆ ಮಾಡತಕ್ಕದ್ದು ಎಂದು ಜಿಲ್ಲಾಉದ್ಯೋಗಾಧಿಕಾರಿ ಸೂಚಿಸಿದ್ದಾರೆ.
ಫಲಾನುಭವಿಗಳು ಪ್ರತಿ ತಿಂಗಳಿಗೊಮ್ಮೆ ಸ್ವಯಂ ಘೋಷಣೆ ಸಲ್ಲಿಸತಕ್ಕದ್ದು. ಸ್ವಯಂ ಘೋಷಣೆಯನ್ನು ಪ್ರತಿ ತಿಂಗಳ 25ರೊಳಗಾಗಿ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಉದ್ಯೋಗ ವಿನಿಮಯ ಕಚೇರಿ ಅಥವಾ ದೂರವಾಣಿ ಸಂಖ್ಯೆ: 0816-2278488ನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.