ಜ.14, 15ಕ್ಕೆ ರಾಧಿಜ್ಯಧಿಮಧಿಟ್ಟದ ಸಿದ್ಧರಾಮೇಶ್ವರ ಜಯಂತಿ
----
ವಿಕ ಸುದ್ದಿಲೋಕ ಹೊಳಲ್ಕೆರೆ(ಧಿಚಿಧಿತ್ರಧಿದುರ್ಗ)
ಪ್ರಪ್ರಥಮ ಬಾರಿಗೆ ತಾಲೂಕಿನಲ್ಲಿಜ.14 ಮತ್ತು 15ರಂದು ನಡೆಯಲಿರುವ ರಾಜ್ಯ ಮಟ್ಟದ ಶ್ರೀಗುರು ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದ ಯಶಸ್ಸಿಧಿಗೆ ಸರ್ವರೂ ಸಹಕಾರ ನೀಡಬೇಕು ಎಂದು ಪುಷ್ಪಗಿರಿ ಮಠದ ಶ್ರೀಸೋಮಶೇಖರ ಸ್ವಾಮೀಜಿ ತಿಳಿಸಿದರು.
ಹೊಳಲ್ಕೆರೆ ಪಟ್ಟಣದ ವಾಲ್ಮೀಕಿ ಭವನದ ಮೈದಾನದಲ್ಲಿಬುಧವಾರ ಶ್ರೀಗುರು ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮ ರೂಪುರೇಷೆಗಳಿಗೆ ಪೂಜೆ ನೆರವೇರಿಸಿ, ಮಾತನಾಡಿದರು.
ಶ್ರೀಗುರು ಸಿದ್ದರಾಮೇಶ್ವರರು ಒಂದು ಜಾತಿಗೆ ಸೀಮಿತರಾದವರಲ್ಲ. ಅವರು ಕಾಯಕ ಯೋಗಿಯಾಗಿದ್ದವರು. ಎರಡು ದಿನಗಳ ಕಾಲ ನಡೆಯುವ ಕಾರ್ಯಕ್ರಮಕ್ಕೆ ರಾಜ್ಯದಿಂದಷ್ಟೆ ಅಲ್ಲ, ಹೊರ ರಾಜ್ಯದಿಂದಲೂ ಭಕ್ತರು ಆಗಮಿಸುತ್ತಾರೆ. ಹಾಗಾಗಿ ಎಲ್ಲಸಿದ್ಧತೆಗಳು ಉತ್ತಮ ರೀತಿಯಲ್ಲಿನಡೆಯಬೇಕು. ಇದಕ್ಕಾಗಿ ಎಲ್ಲಸಮಾಜದವರು ಸಹಕಾರ ನೀಡಬೇಕು ಎಂದರು.
ಎಂಎಲ್ ಸಿ ಕೆ.ಧಿಎಸ್ . ನವೀನ್ ಮಾತನಾಡಿ, ಜಯಂತಿ ಆಚರಣೆ ಹೊಳಲ್ಕೆರೆ ತಾಲೂಕಿಗೆ ದೊರೆತಿರುವುದು ನಮ್ಮೆಲ್ಲರ ಸೌಭಾಗ್ಯ. ನೊಳಂಬ ಸಮಾಜದ ಬಂಧುಗಳು ಹಗಲಿರುಳೆನ್ನದೆ ಅತ್ಯಂತ ಶ್ರಮವಹಿಸಿ ಕಾರ್ಯಕ್ರಮ ನಡೆಸುತ್ತಿದ್ದಾರೆ. ನಾವೆಲ್ಲರೂ ಪಕ್ಷ ಬೇಧ, ಜಾತಿ ಬೇಧ ಮರೆತು ಕಾರ್ಯಕ್ರಮ ಯಶಸ್ವಿಗೊಳಿಸಬೇಕು. ಇದಕ್ಕಾಗಿ ಎಲ್ಲರೀತಿಯ ಅಗತ್ಯ ಸಹಕಾರ ನೀಡಲು ಸಿದ್ದನಿದ್ದೇನೆ ಎಂದರು.
ಶಾಸಕ ಮಾಧುಸ್ವಾಮಿ ಮಾತನಾಡಿ, ರಾಜ್ಯದ ಎಲ್ಲಜಿಲ್ಲೆ, ತಾಲೂಕಿನ ಮುಖಂಡರು ಸಲಹೆ, ಸಹಕಾರ ನೀಡುವ ಮೂಲಕ ಕಾರ್ಯಕ್ರಮ ಯಶಸ್ವಿಯಾಗಿ ಕೈಜೋಡಿಸಬೇಕು ಎಂದರು.
ಯಳನಾಡು ಮಠದ ಶ್ರೀಸಿದ್ದರಾಮೇಶ್ವರ ದೇಶಿಕೇಂದ್ರ ಸ್ವಾಮೀಜಿ, ಗೊಲ್ಲಹಳ್ಳಿ ಮಠದ ಶ್ರೀವಿಭವ ವಿದ್ಯಾಶಂಕರ ದೇಶಿಕೇಂದ್ರ ಸ್ವಾಮೀಜಿ, ಮಾಜಿ ಶಾಸಕ ಎಸ್ .ಎಂ.ನಾಗರಾಜ…, ನೊಳಂಬ ಸಮಾಜದ ರಾಜ್ಯಾಧ್ಯಕ್ಷ ಬಿ.ಕೆ.ಚಂದ್ರಶೇಖಧಿರ್ , ನಿವೃತ್ತ ಐಪಿಎಸ್ ಅಧಿಕಾರಿ ಸಿದ್ದರಾಮಪ್ಪ, ನೊಳಂಬ ಸಮಾಜದ ತಾಲೂಕಾಧ್ಯಕ್ಷ ವಡೇರಹಳ್ಳಿ ಕುಬೇರಪ್ಪ, ಸ್ವಾಗತ ಸಮಿತಿ ಅಧ್ಯಕ್ಷ ಕಡ್ಲಪ್ಪನಹಟ್ಟಿ ಶಶಿಧರ್ , ಹೊಸದುರ್ಗ ತಾಲೂಕು ಅಧ್ಯಕ್ಷ ಹನುಮಂತಪ್ಪ, ಮುಖಂಡರಾದ ಮಾಧುರಿ ಗಿರೀಶ್ , ಕಾಟೀಹಳ್ಳಿ ಶಿವಣ್ಣ, ಕೆ.ಸಿ.ರಮೇಶ್ , ನೊಳಂಬ ಸಮಾಜದ ಬಂಧುಗಳು, ಮತ್ತಿತರರಿದ್ದರು.
-----
ಡಿ.31.ಹೆಚ….ಎಲ….ಕೆ.1
ಹೊಳಲ್ಕೆರೆ ಪಟ್ಟಣದಲ್ಲಿಜ.14, 15ರಂದು ನಡೆಯುವ ರಾಜ್ಯ ಮಟ್ಟದ ಶ್ರೀಗುರು ಸಿದ್ದರಾಮೇಶ್ವರ ಸ್ವಾಮಿ ಜಯಂತಿ ಕಾರ್ಯಕ್ರಮ ರೂಪುರೇಷೆಗಳಿಗೆ ಪೂಜೆ ನೆರವೇರಿಸಲಾಯಿತು.

