’’ದಲಿಯನ ಡೋಲು’’ ಪ್ರದರ್ಶನಕ್ಕೆ ಪ್ರೇಕ್ಷಕರ ಮೆಚ್ಚುಗೆ

Contributed byajithswarga@gmail.com|Vijaya Karnataka

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸ್ವರ್ಗ ಭೂಮಿಕಾ ಸಂಡೇ ಥಿಯೇಟರ್‌ 'ದಲಿಯನ ಡೋಲು' ನಾಟಕ ಪ್ರದರ್ಶನ ಕಂಡಿತು. ಉದಯ ಸಾರಂಗ ನಿರ್ದೇಶನದ ಈ ನಾಟಕ ಪ್ರೇಕ್ಷಕರ ಮೆಚ್ಚುಗೆ ಪಡೆಯಿತು. ಜಾನಪದ ಸೊಗಡಿನ ಕಥಾ ಹಂದರ ಹೊಂದಿದ್ದ ಈ ನಾಟಕ ಗ್ರಾಮೀಣ ರಂಗಭೂಮಿಯ ಪುನರುಜ್ಜೀವನಕ್ಕೆ ನಾಂದಿ ಹಾಡಿತು. ಸೂರ್ಯ ಕಲಾವಿದರು ಬೆಂಗಳೂರು ತಂಡದವರು ಕಲಾವಿದರನ್ನು ಅಭಿನಂದಿಸಿದರು.

daliyana dolu kannada play receives audience acclaim

ಬೆಂಗಳೂರು ರವಿಂದ್ರ ಕಲಾಕ್ಷೇತ್ರದಲ್ಲಿಯಶಸ್ವಿಯಾದ ಕನ್ನಡ ನಾಟಕ

ವಿಕ ಸುದ್ದಿಲೋಕ ಪೆರ್ಲ

ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿಸೂರ್ಯ ಕಲಾವಿದರು ಬೆಂಗಳೂರು ಆಯೋಜಿಸಿದ ‘ರಂಗ ಸಂಭ್ರಮ 2026’ ಕಾರ ್ಯಕ್ರಮದಲ್ಲಿಪೆರ್ಲ ಶಾಲಾ ಶಿಕ್ಷಕ ಉದಯ ಸಾರಂಗ ನಿರ್ದೇಶನದಲ್ಲಿಶ್ರೀನಿವಾಸ ಪೆರಿಕ್ಕಾನ ನೇತೃತ್ವದ ಸ್ವರ್ಗ ಭೂಮಿಕಾ ಸಂಡೇ ಥಿಯೇಟರ್ ನ ‘ ದಲಿಯನ ಡೋಲು ’ ಕನ್ನಡ ನಾಟಕ ಯಶಸ್ವಿಯಾಗಿ ಪ್ರದರ್ಶನಗೊಂಡು ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಗಿದೆ.

ದಲಿಯನ ಕಥಾ ಪಾತ್ರದಲ್ಲಿಎಣ್ಮಕಜೆ ಗ್ರಾಪಂ ಸದಸ್ಯ ರಾಮಚಂದ್ರ ಎಂ., ಮಾಯಾವಿಯಾಗಿ ಯುವ ಉದ್ಯಮಿ ರಾಜೇಶ್ ಸ್ವರ್ಗ, ಊರಿನ ಜಮೀನ್ದಾರಿಯಾಗಿ ಉಪನ್ಯಾಸಕಿ ನವ್ಯಾಶ್ರೀ ಸ್ವರ್ಗ, ಮಂಜನಾಗಿ ಕೃಷ್ಣ ಮೋಹನ ಪೊಸೊಳ್ಯ, ಗುಣಾಜೆ ಅಂಗನವಾಡಿ ಶಿಕ್ಷಕಿ ಸುಮತಿ, ವೈಷ್ಣವಿ ಪೊಸೊಳ್ಯ, ಕುಟುಂಬಶ್ರೀ ಸದಸ್ಯೆ ಪೂರ್ಣಿಮಾ ಹಾಗೂ ಶಿಕ್ಷಕ ಅಶೋಕ ಕೊಡ್ಲಮೊಗರು ಪಾತ್ರಗಳಿಗೆ ಜೀವ ನೀಡಿದ್ದಾರೆ.

ಕಾರ್ತಿಕ್ ಪೆರಿಕ್ಕಾನ, ವೈಷ್ಣವ್ , ಮೋಕ್ಷಿತ್ ಸಂಗೀತ ನೀಡಿದ್ದಾರೆ. ಕಿರಣ್ ಕಲಾಂಜಲಿ ಹಾಗೂ ಶಂಕರ ಸ್ವಾಮಿಕೃಪಾ ರಂಗಪರಿಕರ, ಪ್ರಸಾಧನದಲ್ಲಿಸಹಕರಿಸಿದ್ದರು. ಗ್ರಾಮೀಣ ಭಾಗದಲ್ಲಿರಂಗ ಭೂಮಿಯನ್ನು ಪೋಷಿಸುತ್ತಿರುವ ತಂಡ, ಹಾಗೂ ಪಾತ್ರಧಾರಿಗಳನ್ನು ಸೂರ್ಯ ಕಲಾವಿದರು ಬೆಂಗಳೂರು ಪ್ರಧಾನ ಕಾರ ್ಯದರ್ಶಿ, ಸಿನಿಮಾ ನಟ ವಿಕ್ರಂ ಸೂರಿ ಹಾಗೂ ರಂಗನಿರ್ದೇಶಕ ಮಹತೇಶ್ ಬಡಿಗೇರ ಅಭಿನಂದಿಸಿದ್ದಾರೆ.

‘‘ನಾನಾ ವಲಯದ ಪ್ರತಿಭಾನ್ವಿತರನ್ನು ಒಟ್ಟು ಸೇರಿಸಿ ಸಂಡೇ ಥಿಯೇಟರ್ ತಂಡವನ್ನು ರಚಿಸಲಾಗಿದೆ. ಜಾನಪದ ಸೊಗಡಿನ ಸಂಸ್ಕಾರದ ಸೆಳೆ ಜಾಗತೀಕರಣದ ಮಾಯಾಲೋಕದಲ್ಲಿ ಹೋರಾಡುವ ಕಥಾ ಹಂದರದ ನಾಟಕ ನೋಡುಗರಿಗೆ ಆಪ್ತವಾಗುತ್ತಿದೆ. ಪ್ರತೀ ಪಾತ್ರ ಹಾಗೂ ದೃಶ್ಯಗಳು ಕೌತುಕವನ್ನು ಸೃಷ್ಟಿಸುವುದು ಪ್ರಧಾನ ಭೂಮಿಕೆ. ಉದಯ ಸಾರಂಗ ನೇತೃತ್ವದಲ್ಲಿಸ್ವರ್ಗ ಪ್ರದೇಶದಲ್ಲಿ ಹಿಂದೆ ಸರಿದು ಹೋದ ನಾಟಕರಂಗ ಸಾಂಪ್ರದಾಯಿಕ ಜನಪದ ಪ್ರಕಾರಗಳನ್ನೂ ಪುನಃ ಚೇತರಿಸುವಂತೆ ಮಾಡುವುದು ನಮ್ಮ ಉದ್ದೇಶ’’ ಎಂದು ಥಿಯೇಟರ್ ಸಂಚಾಲಕ ಶ್ರೀನಿವಾಸ ಪೆರಿಕ್ಕಾನ ತಿಳಿಸಿದ್ದಾರೆ.

( 7 ಪಿಎಲ್ ನಾಟಕ: ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಸ್ವರ್ಗ ಭೂಮಿಕಾ ಸಂಡೇ ಥಿಯೇಟರ್ ನ ’’ದಲಿಯನ ಡೋಲು’’ ಕನ್ನಡ ನಾಟ ಪ್ರದರ್ಶನಗೊಂಡಿತು.

7 ಪಿಎಲ್ ನಾಟಕ 1

7 ಪಿಎಲ್ ನಾಟಕ 2 )