ಇಂದಿನಿಂದ ಸಾಮಾಜಿಕ ಕ್ರೋಡೀಕರಣ ಆಂದೋಲನ

Contributed byvenkatesh.narasappa@timesgroup.com|Vijaya Karnataka

ಕಲಬುರಗಿ ಜಿಲ್ಲೆಯಲ್ಲಿ ಮಾ.11 ರಿಂದ 31ರವರೆಗೆ ಸಾಮಾಜಿಕ ಕ್ರೋಡೀಕರಣ ಆಂದೋಲನ ನಡೆಯಲಿದೆ. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಸ್ವ-ಸಹಾಯ ಗುಂಪುಗಳಲ್ಲಿ ಮಹಿಳೆಯರ ಸೇರ್ಪಡೆಗೆ ಒತ್ತು ನೀಡಲಾಗುವುದು. ಹೊಸದಾಗಿ 87,696 ಕುಟುಂಬಗಳನ್ನು ಗುರಿಯಾಗಿರಿಸಲಾಗಿದೆ. ಗೃಹಲಕ್ಷ್ಮಿ, ಉದ್ಯೋಗ ಖಾತರಿ, ಪ್ರಧಾನ ಮಂತ್ರಿ ಆವಾಸ್‌ ಯೋಜನೆ ಫಲಾನುಭವಿಗಳು, ದುರ್ಬಲ ವರ್ಗದವರು, ವಿಶೇಷ ಚೇತನರು, ತೃತೀಯ ಲಿಂಗದವರು ಹೊಸ ಸಂಘ ರಚಿಸಬಹುದು. ಸಮುದಾಯ ಬಂಡವಾಳ ನಿಧಿ, ಸುತ್ತುನಿಧಿ, ತರಬೇತಿ, ಮಾರ್ಗದರ್ಶನ, ಸೌಲಭ್ಯ ಪಡೆಯಲು ಅವಕಾಶವಿದೆ.

rural social cohesion movement starts today

ಇಂದಿನಿಂದ ಸಾಮಾಜಿಕ ಕ್ರೋಡೀಕರಣ ಆಂದೋಲನ

ಕಲಬುರಗಿ: ಜಿಲ್ಲಾಪಂಚಾಯಿತಿ ಹಾಗೂ ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಯ ಸಹಯೋಗದೊಂದಿಗೆ ಜಿಲ್ಲೆಯ ವ್ಯಾಪ್ತಿಯ ಪ್ರತಿ ಗ್ರಾಪಂಯಲ್ಲಿಮಾ.11ರಿಂದ 31ರವರೆಗೆ ಸಾಮಾಜಿಕ ಕ್ರೋಡೀಕರಣ ಆಂದೋಲನವನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಸಿಇಒ ಭಂವರ್ ಸಿಂಗ್ ಮೀನಾ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಗ್ರಾಮೀಣ ಭಾಗದ ಪ್ರತಿ ಕುಟುಂಬದ ಒಬ್ಬ ಮಹಿಳೆ ಸ್ವ-ಸಹಾಯ ಗುಂಪುಗಳಲ್ಲಿಸೇರ್ಪಡೆಯಾಗುವುದು ಆಂದೋಲನದ ಮುಖ್ಯ ಉದ್ದೇಶವಾಗಿದ್ದು, ಜಿಲ್ಲೆಯಲ್ಲಿಪ್ರಸ್ತುತ ಸಾಲಿಗೆ ಹೊಸದಾಗಿ 87,696 ಕುಟುಂಬಗಳನ್ನು ಸಂಜೀವಿನಿ-ರಾಷ್ಟಿ್ರಯ ಗ್ರಾಮೀಣ ಜೀವನೋಪಾಯ ಅಭಿಯಾನದ ವ್ಯಾಪ್ತಿಗೆ ಸೇರ್ಪಡಿಸುವ ಗುರಿ ಹೊಂದಲಾಗಿದೆ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿಅನುಷ್ಠಾನವಾಗುತ್ತಿರುವ ಗೃಹಲಕ್ಷಿ ಯೋಜನೆ ಫಲಾನುಭವಿಗಳು, ಮಾಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಮಹಿಳಾ ಕಾರ್ಮಿಕರು, (ವಿಬಿಜಿ ರಾಮ್ -ಜಿ), ಪ್ರಧಾನ ಮಂತ್ರಿ ಆವಾಸ್ ಮಹಿಳಾ ಗ್ರಾಮೀಣ ಫಲಾನುಭವಿಗಳು (ಪಿಎಂಎವೈ-ಜಿ), ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ, ದುರ್ಬಲ ವರ್ಗದ ಮಹಿಳೆಯರು, ವಿಶೇಷ ಚೇತನರು, ಹಿರಿಯ ನಾಗರಿಕರು, ತೃತೀಯ ಲಿಂಗದವರು ಸೇರಿ, ಹೊಸ ಸ್ವ-ಸಹಾಯ ಸಂಘ ರಚಿಸಲು ಅವಕಾಶವಿದ್ದು. ಪ್ರತಿ ಗ್ರಾಪಂ ಮಟ್ಟದ ಒಕ್ಕೂಟದ ವ್ಯಾಪ್ತಿಯ ಎಂಬಿಕೆ, (ಪ್ರಧಾನ ಪುಸ್ತಕ ಬರಹಗಾರರು) ಎಲ್ ಸಿಆರ್ ಪಿ (ಸ್ಥಳಿಯ ಸಮುದಾಯ ಸಂಪನ್ಮೂಲ ವ್ಯಕ್ತಿ) ಗಳಿಗೆ ಸಂರ್ಪಕಿಸಲು ತಿಳಿಸಿದೆ. ಅದರಂತೆ ಈಗಾಗಲೇ ವಿವಿಧ ಇಲಾಖೆ, ಎನ್ ಜಿಒ ಮೂಲಕ ರಚಿಸಿದ ಸ್ವ-ಸಹಾಯ ಸಂಘಗಳು ಸೇರ್ಪಡೆಯಾಗಲು ಅವಕಾಶವಿದೆ. ಯೋಜನೆಯಡಿ ನೀಡುವ ಸಮುದಾಯ ಬಂಡವಾಳ ನಿಧಿ, ಸುತ್ತುನಿಧಿ, ವಿಆರ್ ಎಫ್ ನಿಧಿ, ಪಿಎಂಎಫ್ ಎಂಇ ಮತ್ತು ಕೃಷಿ ಹಾಗೂ ಕೃಷಿಯೇತರ ಜೀವನೋಪಾಯ ಚಟುವಟಿಕೆಗಳ ಬಗ್ಗೆ ತರಬೇತಿ, ಮಾರ್ಗದರ್ಶನ, ರಾಜ್ಯ ಮತ್ತು ಕೇಂದ್ರ ಸರಕಾರದ ಸೌಲಭ್ಯ ಪಡೆಯುವಲ್ಲಿಮೊದಲ ಆದ್ಯತೆ ಮೇಲೆ ಅವಕಾಶ ಪಡೆಯಬಹುದು ಎಂದು ತಿಳಿಸಿದ್ದಾರೆ.