((ಲೋಗೊ: ಕಸದ ನಿರ್ವಹಣೆಯೇ ಸವಾಲು ರಿಯಾಲಿಟಿ ಚೆಕ್ ಸರಣಿ ಭಾಗ-1))
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಹಲವೆಡೆ ಸ್ವಚ್ಛತೆ ಮರೀಚಿಕೆಯಾಗಿದೆ. ಹೇಳಿಕೊಳ್ಳುವ ಮಟ್ಟಿಗೆ ಕಸದ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಪ್ಲಾಸ್ಟಿಕ್ , ಕೋಳಿ ತ್ಯಾಜ್ಯ, ಮೆಡಿಕಲ್ ವೇಸ್ಟ್ , ಕಟ್ಟಡ ತ್ಯಾಜ್ಯಗಳು ಸಮರ್ಪಕವಾಗಿ ನಿರ್ವಹಣೆಯಿಲ್ಲದೇ, ಎಲ್ಲೆಂದರಲ್ಲಿಎಸೆಯಲಾಗುತ್ತಿದೆ. ಅದರಲ್ಲೂಪ್ಲಾಸ್ಟಿಕ್ ಮಾತ್ರ ದೊಡ್ಡ ಸವಾಲಾಗಿದ್ದು, ಗ್ರಾಮ, ನಗರಗಳ ಅಂದಗೆಡಿಸುತ್ತಿದೆ. ಸ್ಥಳೀಯ ಆಡಳಿತಗಳು ಜಾಗೃತಿ, ಅಲ್ಲಲ್ಲಿದಾಳಿಗೆ ಸೀಮಿತವಾಗಿದ್ದು, ಪರಿಣಾಮಕಾರಿಯಾಗಿ ಇದರ ನಿಯಂತ್ರಣ ಮಾಡುವಲ್ಲಿವಿಫಲವಾಗಿವೆ. ಸ್ವಚ್ಛತೆ ವಿಚಾರದಲ್ಲೂಇದೇ ಸ್ಥಿತಿ. ಅಕ್ಟೋಬರ್ ತಿಂಗಳಲ್ಲಿಗಾಂಧಿ ಜಯಂತಿ ಅಂಗವಾಗಿ ನಡೆಯುವ ಸ್ವಚ್ಛತಾ ಕಾರ್ಯಗಳು ಮತ್ತೆ ಮುಂದುವರಿಯುವುದೇ ಇಲ್ಲ. ಆ ಸಮಯದಲ್ಲಿತೆರವಾಗುವ ತ್ಯಾಜ್ಯಗಳು, ಕೆಲವೇ ದಿನಗಳಲ್ಲಿಅದೇ ಜಾಗ ಆವರಿಸುತ್ತಿದೆ. ಇನ್ನೊಂದೆಡೆ ಜನಸಾಮಾನ್ಯರು ಈ ಬಗ್ಗೆ ಸಾಕಷ್ಟು ನಿರ್ಲಕ್ಷತ್ರ್ಯ ತೋರುತ್ತಿದ್ದಾರೆ. ಹಾಗಾಗಿ ಕಸ ದೊಡ್ಡ ಸಮಸ್ಯೆಯಾಗಿ ಪರಿಣಮಿಸಲು ಕಾರಣವಾಗಿದೆ. ಈ ಬಗ್ಗೆ ವಿಜಯಕರ್ನಾಟಕ ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿಕಸದ ಸಮಸ್ಯೆ, ಪರಿಹಾರಕ್ಕೆ ಕೈಗೊಳ್ಳಬೇಕಾದ ಕ್ರಮದ ಕುರಿತು ರಿಯಾಲಿಟಿ ಚೆಕ್ ಸರಣಿ ವರದಿ ಮೂಲಕ ಬೆಳಕು ಚೆಲ್ಲಲು ಮುಂದಾಗಿದೆ.
ಖಾಲಿ ಜಾಗಗಳæೕ ಕಸದ ತೊಟ್ಟಿ
ಹೆದ್ದಾರಿಗಳ ಬಳಿ ಕಸದ ಸುರಿದು ಬೆಂಕಿ ಹಚ್ಚುವುದು ಸಾಮಾನ್ಯ | ಪ್ಲಾಸ್ಟಿಕ್ ಬಳಕೆಗಿಲ್ಲಕಡಿವಾಣ
ಆದರ್ಶ ಕೋಡಿ ಬೆಂಗಳೂರು ಗ್ರಾಮಾಂತರ
್ಚಧಿada್ಟsha.kಃಠಿಜಿಞಛಿsಟ್ಛಜ್ಞಿdಜಿa.್ಚಟಞ
ಕæೖಗಾರಿಕೆ ಹಬ್ ಆಗಿ ಅಭಿವೃದ್ಧಿ ಹೊಂದುತ್ತಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಕಸದ ನಿರ್ವಹಣೆಯೇ ಸವಾಲಾಗಿದೆ. ಜಿಲ್ಲೆಯಾದ್ಯಂತ ನಾನಾ ಕಡೆಗಳಲ್ಲಿಪ್ಲಾಸ್ಟಿಕ್ ಹಾವಳಿ ಮುಂದುವರಿದಿದ್ದು, ಇದರ ನಿಯಂತ್ರಣಕ್ಕೆ ಸ್ಥಳೀಯ ಆಡಳಿತ ಪರಿಣಾಮಕಾರಿ ಯೋಜನೆ ರೂಪಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.
ಬೆಂಗಳೂರು ಗ್ರಾಮಾಂತರದ 4 ತಾಲೂಕುಗಳಲ್ಲೂವರ್ಷದಿಂದ ವರ್ಷಕ್ಕೆ ಜನಸಂಖ್ಯೆ ಹೆಚ್ಚಾಗುತ್ತಿದೆ. ಇಲ್ಲಿನ ಕೈಗಾರಿಕೆಗಳಲ್ಲಿಕೆಲಸಕ್ಕಾಗಿ ಅನ್ಯ ರಾಜ್ಯಗಳಿಂದ ವಲಸೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿಬರುತ್ತಿದ್ದಾರೆ. ಈ ನಡುವೆ ದಿನಬಳಕೆಯಲ್ಲಿಉಂಟಾಗುವ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿಎಸೆಯುವ ಕೆಲಸವಾಗುತ್ತಿದೆ. ಇದಕ್ಕೆ ಜನಸಾಮಾನ್ಯರು ಕಾರಣವಾಗುತ್ತಿದ್ದಾರೆ. ಜತೆಗೆ ಕೆಲವೆಡೆ ಸ್ಥಳೀಯ ಆಡಳಿತ ಕಸದ ಸಂಗ್ರಹದಲ್ಲಿಹಿಂದುಳಿದಿರುವುದು ಕಾರಣವಾಗುತ್ತಿದೆ. ಇದರಿಂದ ರಸ್ತೆ, ಖಾಲಿ ನಿವೇಶನಗಳು, ಕೆರೆಯಂಗಳ ಕಸದ ತೊಟ್ಟಿಯಾಗಿ ಮಾರ್ಪಡುತ್ತಿವೆ. ಇದು ಆಯಾ ಊರಿನ ಅಂದ ಗೆಡಿಸುತ್ತಿದೆ. ಈಗಲಾದರೂ ಜನಸಾಮಾನ್ಯರು ಹಾಗೂ ಸ್ಥಳೀಯ ಆಡಳಿತ ಈ ಬಗ್ಗೆ ಎಚ್ಚರವಹಿಸಬೇಕಿದೆ. ಅದರಲ್ಲೂಪ್ರಮುಖವಾಗಿ ಪ್ಲಾಸ್ಟಿಕ್ ನಿರ್ಮೂಲನೆಗೆ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಬೇಕಾದ ಸಂದಿಗ್ಧ ಪರಿಸ್ಥಿತಿಯೂ ನಿರ್ಮಾಣವಾಗುತ್ತಿದೆ.
ಜಿಲ್ಲೆಯಲ್ಲಿನಗರ ಪ್ರದೇಶದ ಹೆದ್ದಾರಿಗಳ ಬಳಿ, ನಗರ ಮತ್ತು ಗ್ರಾಮಗಳ ಗಡಿಗಳಲ್ಲಿ, ಖಾಲಿಯಾಗಿರುವ ನಿವೇಶನಗಳಲ್ಲಿಮತ್ತು ಕೆರೆಯಂಗಳಲ್ಲಿಕಸವನ್ನು ತಂದು ಹಾಕುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಅದರಲ್ಲೂವಾಣಿಜ್ಯ ಅಂಗಡಿ ಮುಗ್ಗಟ್ಟುಗಳಲ್ಲಿನ ಪ್ಲಾಸ್ಟಿಕ್ ಸೇರಿದಂತೆ ಇನ್ನಿತರೆ ತ್ಯಾಜ್ಯ ವಸ್ತುಗಳನ್ನು ಜನ ಸಂಚಾರ ವಿರಳ ಇರುವ ಸಮಯದಲ್ಲಿಸುರಿದು ಹೋಗಲಾಗುತ್ತಿದೆ. ಕೆಲವೆಡೆ ಇದಕ್ಕೆ ಬೆಂಕಿ ಹಾಕುವ ಕೆಲಸ ಮಾಡಲಾಗುತ್ತಿದ್ದು, ಕೆಟ್ಟ ವಾಸನೆ ಹರಡುವಂತೆ ಮಾಡುತ್ತಿದೆ. ಈ ಸ್ಥಳಗಳು ಕೇವಲ ಖಾಲಿಯಿರುವ ಜಾಗಗಳಷ್ಟೇ, ಇಲ್ಲಿಕಸ ಹಾಕದಂತೆ ನಾಮಫಲಕ ಅಳವಡಿಸಿದರೂ, ಅದರ ಪಕ್ಕದಲ್ಲಿಯೇ ಕಸ ಹಾಕಿರುವ ಉದಾಹರಣೆ ಸಾಕಷ್ಟಿವೆ. ಈ ಬಗ್ಗೆ ಇನ್ನಾದರೂ ಆಯಾ ಆಡಳಿತಗಳು ಎಚ್ಚೆತ್ತುಕೊಳ್ಳಬೇಕು.
ಪ್ಲಾಸ್ಟಿಕ್ ಗೆ ಕಡಿವಾಣ:
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿಕಳೆದ ಏಪ್ರಿಲ್ ನ ನಂತರ ಒಟ್ಟು 857 ಕಡೆಗಳಲ್ಲಿಪ್ಲಾಸ್ಟಿಕ್ ಬಗ್ಗೆ ದಾಳಿ ನಡೆಸಲಾಗಿದ್ದು, 12,320 ಕೆಜಿಯಷ್ಟು ಪ್ಲಾಸ್ಟಿಕ್ ವಶ ಪಡಿಸಿಕೊಳ್ಳಲಾಗಿದೆ. ಆದರೂ ಇದರ ಸಂಪೂರ್ಣ ನಿಯಂತ್ರಣ ಸಾಧ್ಯವಾಗಿಲ್ಲ. ಜನರಲ್ಲಿಪ್ಲಾಸ್ಟಿಕ್ ಬಗ್ಗೆ ಜಾಗೃತಿ ಕೊರತೆ ಒಂದೆಡೆಯಾದರೆ, ಮತ್ತೊಂದೆಡೆ ಪರ್ಯಾಯ ವಸ್ತುಗಳ ಕೊರತೆಯಿದೆ. ಈ ಬಗ್ಗೆ ಆಯಾ ಗ್ರಾಪಂ, ನಗರ ಆಡಳಿತಗಳು ವಿಶೇಷವಾದ ಅರಿವು ಮೂಡಿಸಬೇಕಿದೆ. ಅಲ್ಲದೇ ದಾಳಿ ಮಾಡುವ ಮೂಲಕ ಜನರಲ್ಲಿಪ್ಲಾಸ್ಟಿಕ್ ನಿಂದ ಅಂತರ ಕಾಯ್ದುಕೊಳ್ಳುವ ಬಗ್ಗೆ ತಿಳಿಸುವ, ಎಚ್ಚರಿಕೆ ನೀಡುವ ಕೆಲಸ ಮಾಡಬೇಕಿದೆ.
ಕೋಟ್ ....
ನಗರ ಭಾಗದಲ್ಲಿತ್ಯಾಜ್ಯ ನಿರ್ವಹಣೆಗೆ ಅಗತ್ಯ ಕ್ರಮವಹಿಸಲಾಗುತ್ತಿದೆ. ಇನ್ನೂ ಗಡಿ ಭಾಗದಲ್ಲಿತ್ಯಾಜ್ಯಗಳ ನಿರ್ವಹಣೆಯ ಬಗ್ಗೆ ಆಯಾ ಗ್ರಾಪಂಗಳಿಗೂ ಮಾಹಿತಿ ನೀಡಲಾಗುತ್ತಿದೆ. ಕಸವನ್ನು ಪ್ರತ್ಯೇಕಿಸಿ ನೀಡಿದರೆ ಅದರ ಸಂಸ್ಕರಣೆಗೂ ಕ್ರಮವಹಿಸಲಾಗುತ್ತದೆ.
-ಕಾರ್ತಿಕೇಶ್ವರ್ | ಪೌರಾಯುಕ್ತ, ದೊಡ್ಡಬಳ್ಳಾಪುರ ನಗರಸಭೆ
ಕೋಟ್ ...
ಪ್ಲಾಸ್ಟಿಕ್ ಬಳಕೆ ನಿಯಂತ್ರಣಕ್ಕೆ ಅಗತ್ಯ ಕ್ರಮವಹಿಸುವಲ್ಲಿಸ್ಥಳೀಯ ಆಡಳಿತಗಳು ವಿಫಲವಾಗಿವೆ. ಇದರಿಂದ ಎಲ್ಲೆಂದರಲ್ಲಿಪ್ಲಾಸ್ಟಿಕ್ ರಾಶಿ ಕಾಣಸಿಗುತ್ತಿದೆ. ಈ ಬಗ್ಗೆ ಜನರು ಎಚ್ಚೆತ್ತುಕೊಳ್ಳಬೇಕು.
-ಕಿರಣ್ ಕುಮಾರ್ | ಪರಿಸರ ಆಸಕ್ತರು, ದೊಡ್ಡಬಳ್ಳಾಪುರ
ಫೋಟೋ: 1003ವಿಕೆ1: ದೊಡ್ಡಬಳ್ಳಾಪುರ ನಗರದ ಆಲಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ ಸಮೀಪ ಕಸದ ರಾಶಿ.

