ತಹಸೀಲ್ದಾರ್ ಮೂಲಕ ಸರಕಾರಕ್ಕೆ ಜೆಡಿಎಸ್ ಮನವಿ (ಕಿಕ್ಕರ್ )
ಮೂಲ ಸೌಕರ್ಯ ಕಲ್ಪಿಸಲು ಆಗ್ರಹ (ಹೆಡ್ )
ವಿಕ ಸುದ್ದಿಲೋಕ ಕುಂದಗೋಳ
ಕುಂದಗೋಳ ಕ್ಷೇತ್ರದಲ್ಲಿಕುಡಿಯುವ ನೀರು ಹಾಗೂ ರಸ್ತೆ ಸಹಿತ ಇನ್ನಿತರ ಮೂಲ ಸೌಕರ್ಯಗಳಿಗೆ ತಕ್ಷಣ ಸ್ಪಂದಿಸದಿದ್ದಲ್ಲಿಮುಂಬರುವ ದಿನಗಳಲ್ಲಿಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಜೆಡಿಎಸ್ ಕಾರ್ಯಕರ್ತರು ಎಚ್ಚರಿಸಿ ತಹಸೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ತಾಲೂಕು ಅಧ್ಯಕ್ಷ ಶಂಕರಗೌಡ ದೊಡಮನಿ ಮಾತನಾಡುತ್ತ, ತಾಲೂಕಿನಲ್ಲಿಬೇಸಿಗೆ ಮುನ್ನವೇ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. 88 ಘಟಕಗಳಲ್ಲಿಕೇವಲ ‰10-12 ಮಾತ್ರ ಚಾಲೂ ಸ್ಥಿತಿಯಲ್ಲಿವೆ. ಜನತೆ ಶುದ್ಧ ನೀರಿಗಾಗಿ ಪರದಾಡಬೇಕಿದೆ. ಹಲವೆಡೆ ಜಾನುವಾರುಗಳಿಗೂ ಜಲದ ಅಭಾವದ ಜತೆಗೆ 14 ಹಳ್ಳಿಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲಎಂದರು. ಜಿಲ್ಲಾಧ್ಯಕ್ಷ ಬಿ.ಬಿ.ಗಂಗಾಧರಮಠ ಮಾತನಾಡಿ, ಪ್ರಸ್ತುತ ರಾಜ್ಯ ಬಜೆಟ್ ನಲ್ಲಿಕುಂದಗೋಳ ವಿಧಾನಸಭಾ ಕ್ಷೇತ್ರಕ್ಕೆ ಯಾವುದೇ ಅಭಿವೃದ್ಧಿ ಅನುದಾನ ಘೋಷಿಸಿಲ್ಲ. ಆಡಳಿತ ಪಕ್ಷದ ಶಾಸಕರಿಲ್ಲದ ಕಾರಣಕ್ಕೆ ದ್ವಿಮುಖ ನೀತಿ ಅನುಸರಿಸುತ್ತಿದೆ. ಕುಡಿಯುವ ನೀರಿನ ಅಭಾವ ಬಹಳಷ್ಟಿದೆ. ಗ್ರಾಮೀಣ ರಸ್ತೆಗಳು ಹದಗೆಟ್ಟಿದ್ದು ಅನುದಾನ ನೀಡಲು ಮೀನಮೇಷ ಎಣಿಸುತ್ತಿರುವುದು ಸರಿಯಲ್ಲಎಂದರು. ಬೋರವೆಲ್ ಗಳನ್ನು ರಿಪೇರಿಮಾಡಿಸಬೇಕು.ಕೆಲ ಕೆರೆಗಳಿಗೆ ಮಲಪ್ರಭಾ ನೀರು ತುಂಬಿಸಬೇಕು. ಮೂಲಸೌಕರ್ಯ ಗಳಿಗೆ ತಾಲೂಕು ಆಡಳಿತ, ಜಿಲ್ಲಾಡಳಿತ ಸ್ಪಂದಿಸದಿದ್ದಲ್ಲಿಜೆಡಿಎಸ್ ಮುಂಬರುವ ದಿನಗಳಲ್ಲಿಉಗ್ರ ಹೋರಾಟ ಹಮ್ಮಿಕೊಳ್ಳಲಿದೆ ಎಂದರು.
ತಹಸೀಲ್ದಾರ್ ರಾಜು ಮಾವರಕರ ಮನವಿ ಸ್ವೀಕರಿಸಿದರು.
ಜಾ.ದಳ ಸಭೆ:
ಇದಕ್ಕೂ ಮುನ್ನ ಜಾ.ದಳ ಸಭೆಯು ಜರುಗಿತು. ಪಕ್ಷದ ತಾಲೂಕು ಉಸ್ತುವಾರಿ, ನ್ಯಾಯವಾದಿ.ವಿ.ಸಿ.ಭದ್ರಗೌಡ. ಮಾತನಾಡಿ, ಮುಂಬರುವ ಚುನಾವಣೆಯನ್ನು ಪಕ್ಷ ಗಂಭೀರವಾಗಿ ಪರಿಗಣಿಸಬೇಕಿದೆ. ತಳಮಟ್ಟದಲ್ಲಿಪಕ್ಷದ ಕಾರ್ಯಕರ್ತರನ್ನು ಹುರುದುಂಬಿಸಿ, ಕೇಂದ್ರ ಸಚಿವ ಎಚ್ .ಡಿ.ಕುಮಾರಸ್ವಾಮಿ ಕೈ,ಬಲಪಡಿಸಬೇಕು ಎಂದು ಮನವಿ ಮಾಡಿದರು. ಜೆಡಿಎಸ್ ಜಿಲ್ಲಾಧ್ಯಕ್ಷ. ಬಿ.ಬಿ.ಗಂಗಾಧರಮಠ, ಶಂಕರಗೌಡ ದೊಡಮನಿ, ಶಿವಶಂಕರ ಕಲ್ಲೂರ, ರಾಜ್ ಭದ್ರಗೌಡ್ರ, ಅಲಿ, ಎಂ.ಸಂದಿಮನಿ, ಸಿದ್ದಯ್ಯ ಪೂಜಾರ,ನಿರ್ಮಲಾ ಹಣಸಿ,ಗುರುಮೂರ್ತಿ,ರಾಘವೇಂದ್ರ ಕಡಪಟ್ಟಿ,ಬಸವರಾಜ ಹರವಿ,ದಾದಾಪೀರ ರಾಟಿಮನಿ, ಕಾಲಾಸಾಬ ಅಗಸರ, ಮಲ್ಲನಗೌಡ ಧರ್ಮಗೌಡ್ರ, ಬಸವರಾಜ ಬುಳ್ಳಣ್ಣವರ ಸಹಿತ ಹಲವರಿದ್ದರು.
ಫೋಟೋ 9 ಕೆ ಎನ್ ಡಿ 1
ಕುಂದಗೋಳ ತಾಲೂಕಿನ ನೀರಿನ ಸಮಸ್ಯೆ ತಕ್ಷಣ ಬಗೆಹರಿಸ ಬೇಕು ಎಂದು ಒತ್ತಾಯಸಿ ಜೆಡಿಎಸ್ ನಿಂದ ತಹಸೀಲ್ದಾರ್ ಗೆ ಮನವಿ ಸಲ್ಲಿಸಲಾಯಿತು.

