ನಿವೃತ್ತ ಸೈನಿಕರಿಗೆ ಭೂಮಿ ನೀಧಿಡಧಿದಕ್ಕೆ ಶಾಧಿಸಕ ಬೇಧಿಸಧಿರ

Contributed bypressannappa.appu321@gmail.com|Vijaya Karnataka

ನಿವೃತ್ತ ಸೈನಿಕರಿಗೆ ಕಳೆದ ಮೂರು ವರ್ಷಗಳಿಂದ ಭೂಮಿ ಅಥವಾ ನಿವೇಶನ ಹಂಚಿಕೆಯಾಗಿಲ್ಲ. ದಾವಣಗೆರೆ ಜಿಲ್ಲೆಯಲ್ಲಿ 338 ಅರ್ಜಿಗಳು ಸ್ವೀಕೃತವಾಗಿದ್ದರೂ ಒಂದೂ ಪುರಸ್ಕೃತವಾಗಿಲ್ಲ, ತಿರಸ್ಕೃತವೂ ಆಗಿಲ್ಲ. ಕಂದಾಯ ಅಧಿಕಾರಿಗಳು ಪರಿಶೀಲನೆಯನ್ನೇ ಮಾಡಿಲ್ಲ ಎಂದು ಶಾಸಕ ಬಿ.ಪಿ ಹರೀಶ್‌ ಅವರು ಸದನದಲ್ಲಿ ಬೇಸರ ವ್ಯಕ್ತಪಡಿಸಿದರು. ದೇಶ ಕಾಯುವ ಸೈನಿಕರಿಗೆ ಸೌಲಭ್ಯ ಸಿಗುತ್ತಿಲ್ಲ ಎಂದು ಅವರು ತಿಳಿಸಿದರು.

land distribution for retired soldiers intense political opposition

ನಿವೃತ್ತ ಸೈನಿಕರಿಗೆ ಭೂಮಿ ನೀಧಿಡಧಿದಕ್ಕೆ ಶಾಧಿಸಕ ಬೇಧಿಸಧಿರ

ವಿಕ ಸುದ್ದಿಲೋಕ ಬೆಳ್ಳೂಡಿ

ಹರಿಹರ ವಿಧಾನ ಸಭಾ ಕ್ಷೇತ್ರದ ಶಾಸಕ ಬಿ.ಪಿ ಹರೀಶ್ ಅವರು ಸೋಮವಾರ ನಡೆದ ಅಧಿವೇಶನದಲ್ಲಿಚುಕ್ಕೆ ಗುರುತಿನ ಪ್ರಶ್ನೆಯಲ್ಲಿನಿವೃತ್ತ ಸೈನಿಕರಿಗೆ ಕಳೆದ 3 ವರ್ಷದಿಂದ ಭೂಮಿ ಅಥವಾ ನಿವೇಶನ ಹಂಚಿಕೆ ಮಾಡದೆ, ಅವರು ಅರ್ಜಿ ಹಿಡಿದುಕೊಂಡು ಕಚೇರಿಗಳಿಗೆ ಅಲೆದಾಡುವಂತೆ ಮಾಡುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ದಾವಣಗೆರೆ ಜಿಲ್ಲೆಯಿಂದ 338 ಅರ್ಜಿ ಸ್ವೀಕೃತವಾಗಿವೆ ಎನ್ನುತ್ತಾರೆ. ಆದರೆ ಒಂದೂ ಪುರಸ್ಕೃತವಾಗಿಲ್ಲ. ಹಾಗೇ ಒಂದೂ ತಿರಸ್ಕೃತಗೊಂಡಿಲ್ಲ. ಕಳೆದ ಮೂರು ವರ್ಷಗಳಿಂದ ಕಂದಾಯ ಅಧಿಕಾರಿಗಳು ಪರಿಶೀಲನೆಯೇ ಮಾಡಿಲ್ಲಎಂದರು. ದೇಶವನ್ನು ಕಾಯುವ ಸೈನಿಕರಿಗೆ ಮೂರು ನಾಲ್ಕು ಎಕರೆ ಜಮೀನು ನೀಡಬೇಕು, ಸರಕಾರದಿಂದ ಆದು ಆಗವುದಿಲ್ಲಎಂದರೆ ಜಿಲ್ಲಾಕೇಂದ್ರ ಅಥವಾ ತಾಲೂಕು ಕೇಂದ್ರಗಳಲ್ಲಿಜಮೀನು ಅಥವಾ ನಿವೇಶನ ನೀಡಬೇಕು. ಆದರೆ ದಾವಣಗೆರೆಯ ಜಿಲ್ಲೆಯ ಹೊಸಳ್ಳಿಯಲ್ಲಿ35 ಜನಕ್ಕೆ 3 ಎಕರೆ, ಜಗಳೂರಿನ ಬಾಗೇನಹಳ್ಳಿಯಲ್ಲಿ2 ಎಕರೆ 20ಗುಂಟೆ ಹರಿಹರ ತಾಲೂಕಿನ ಮಲೆಬೆನ್ನೂರಿನ ಸಮೀಪದ ಗುಡ್ಡಗಾಡು ಪ್ರದೇಶದಲ್ಲಿ30 ಗುಂಟೆ ನೀಡಿದ್ದಾರೆ ಎಂದು ತಿಳಿಸಲಾಗಿದೆ ಎಂದರು.

ದೇಶ ಕಾಯ್ದ ಸೈನಿಕರಿಗೆ ಅವರು ಬಂದಾಗ ನಾವು ಊರೆಲ್ಲಮೆರವಣಿಗೆ ಮಾಡುತ್ತೇವೆ. ಆದರೆ ಅವರಿಗೆ ಸಿಗಬೇಕಾದ ಸಧಿವಧಿಲಧಿತ್ತುಗಳಿಗೆ ಅರ್ಜಿ ಹಿಡಿದು ತಾಲೂಕು ಜಿಲ್ಲಾಡಳಿತಕ್ಕೆ ಅಡ್ಡಾಡಬೇಕಾದ ಪರಿಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತ ಪಡಿಸಿದರು.

ಸದನದಲ್ಲಿದಿ. ಅಪ್ಪಣ್ಣ ಹೆಗ್ಡೆ, ದಾವಣಗೆರೆಯ ಮೋತಿ ವೀರಣ್ಣ ರವರಿಗೆ ಸಂತಾಪ ಸೂಚಿಸಲಾಯಿತು.

ಫೋಟೋ 9 ಬಿ.ಎಲ್ .ಡಿ 1 : ಶಾಸಕ ಬಿ.ಪಿ ಹರೀಶ್