ನಾಳೆ ‘ವಾಸ್ದೇವನ ಪಂಚಕಳಶ ಯಾತ್ರೆ’ ಪುಸ್ತಕ ಬಿಡುಗಡೆ

Contributed byrudraiah4084@gmail.com|Vijaya Karnataka

ಚಿಕ್ಕಮಗಳೂರಿನಲ್ಲಿ ನಾಳೆ 'ವಾಸ್ದೇವನ ಪಂಚಕಳಶ ಯಾತ್ರೆ' ಕಥಾ ಸಂಕಲನ ಬಿಡುಗಡೆಯಾಗಲಿದೆ. ಶ್ರೀನಿವಾಸ ಪಾ.ನಾಯ್ಡು ಅವರ ಈ ಕೃತಿಯನ್ನು ಸದಾಶಿವ ಸೊರಟೂರು ಲೋಕಾರ್ಪಣೆ ಮಾಡಲಿದ್ದಾರೆ. ಲಯನ್ಸ್ ಸೇವಾ ಭವನದಲ್ಲಿ ಸಂಜೆ 5.30ಕ್ಕೆ ವಿಶೇಷ ಕಾರ್ಯಕ್ರಮ ನಡೆಯಲಿದೆ. ಲಯನ್ ಸಿ.ಎನ್.ಕುಮಾರ್ ಅಧ್ಯಕ್ಷತೆ ವಹಿಸಲಿದ್ದು, ಮಕ್ಕಳ ವೈದ್ಯ ಡಾ.ಜೆ.ಪಿ.ಕೃಷ್ಣೇಗೌಡ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

tomorrow vasudeva panchakalasha yatra book release at 530 pm at lions service bhavan

ನಾಳೆ ‘ ವಾಸ್ದೇವನ ಪಂಚಕಳಶ ಯಾತ್ರೆ ’ ಪುಸ್ತಕ ಬಿಡುಗಡೆ

ವಿಕ ಸುದ್ದಿಲೋಕ ಚಿಕ್ಕಮಗಳೂರು

ಸ್ನೇಹ ಬುಕ್ ಹೌಸ್ , ಲಯನ್ಸ್ ಸಂಸ್ಥೆ, ಕಲ್ಕಟ್ಟೆ ಪುಸ್ತಕದ ಮನೆ, ನಾಯ್ಡು ಡಿಜಿಟಲ್ಸ್ ಸಂಯುಕ್ತಾಶ್ರಯದಲ್ಲಿಮಾರ್ಚ್ 12ರಂದು ನಗರದ ಮಧುವನ ಲೇಔಟ್ ನಲ್ಲಿರುವ ಲಯನ್ಸ್ ಸೇವಾ ಭವನದಲ್ಲಿಸಂಜೆ 5.30ಕ್ಕೆ ‘ಹೊತ್ತಿಗೆ ಹೊತ್ತು’ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ನಗರದ ಯುವ ಬರಹಗಾರ, ಶಿಕ್ಷಕ ಶ್ರೀನಿವಾಸ ಪಾ.ನಾಯ್ಡು ಅವರು ಬರೆದ ‘ವಾಸ್ದೇವನ ಪಂಚಕಳಶ ಯಾತ್ರೆ’ ಕಥಾ ಸಂಕಲನವನ್ನು ಈ ಸಂದರ್ಭ ಕತೆಗಾರ ಸದಾಶಿವ ಸೊರಟೂರು ಲೋಕಾರ್ಪಣೆಗೊಳಿಸಲಿದ್ದಾರೆ.

ಲಯನ್ ಸಿ.ಎನ್ .ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಮಕ್ಕಳ ವೈದ್ಯ ಡಾ.ಜೆ.ಪಿ.ಕೃಷ್ಣೇಗೌಡ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಲ್ಕಟ್ಟೆ ಪುಸ್ತಕದ ಮನೆಯ ರೇಖಾ ನಾಗರಾಜರಾವ್ , ಲಯನ್ ಎಲ್ .ಗೋಪಿಕೃಷ್ಣ, ಕೃತಿಕಾರ ಶ್ರೀನಿವಾಸ ಪಾ.ನಾಯ್ಡು ಭಾಗಹಿಸಲಿದ್ದಾರೆ.