ಶಿವಮೊಗ್ಗ: ನಗರದ ಕಟೀಲ್ ಅಶೋಕ್ ಪೈ ಸ್ಮಾರಕ ನರ್ಸಿಂಗ್ ಕಾಲೇಜು ಮತ್ತು ಮಾನಸ ವೃತ್ತಿಪರ ತರಬೇತಿ ಕೇಂದ್ರದ ಆಶ್ರಯದಲ್ಲಿಬಿ.ಎಸ್ಸಿ ನರ್ಸಿಂಗ್ ಹಾಗೂ ಎನ್ ಸಿವಿಆರ್ ಟಿ ಕೋರ್ಸ್ ಗಳಿಗೆ 2025ರಲ್ಲಿಪ್ರವೇಶ ಪಡೆದ ನೂತನ ವಿದ್ಯಾರ್ಥಿಗಳಿಗೆ ಪ್ರೇರಣಾ (ಸ್ವಾಗತ), ಕಾಲೇಜಿನ ಸ್ಥಾಪಕ ಡಾ. ಅಶೋಕ್ ಪೈ ಜನ್ಮದಿನ ಕಾರ್ಯಕ್ರಮ ಮಂಗಳವಾರ ನಡೆಯಿತು. ಅಶೋಕ್ ಪೈ ಅವರ ಸೇವೆ, ಮಾನಸಿಕ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಸ್ಮರಿಸಿ, ಪುಷ್ಪ ನಮನ ಸಲ್ಲಿಸಲಾಯಿತು. ಸಂಸ್ಥೆಯ ಶೈಕ್ಷಣಿಕ ಸಲಹೆಗಾರ ಡಾ.ರಾಜೇಂದ್ರ ಚೆನ್ನಿ, ಅಶೋಕ್ ಪೈ ಅವರ ಸಾಧನೆ, ವ್ಯಕ್ತಿತ್ವ, ಕೊಡುಗೆಗಳ ಬಗ್ಗೆ ಮಾತನಾಡಿದರು. ಮಕ್ಕಳಿಗೆ ಶಿಕ್ಷಣದ ಜತೆಗೆ ಅಶೋಕ್ ಪೈ ಆದರ್ಶಗಳನ್ನು ಜೀವನದಲ್ಲಿಅಳವಡಿಸಿಕೊಳ್ಳುವಂತೆ ತಿಳಿಸಿದರು. ಡಾ.ಅರ್ಚನಾ ಭಟ್ ಮಾತನಾಡಿ, ನರ್ಸಿಂಗ್ ವೃತ್ತಿಯು ಮಾನವೀಯ ಮೌಲ್ಯಧಾರಿತವಾಗಿದ್ದು, ನರ್ಸ್ ಗಳು ರೋಗಿಗಳ ಕುಟುಂಬ ಮತ್ತು ರೋಗಿಗಳ ಮರುಜೀವನಕ್ಕೆ ಆಸರೆಯಾಗುತ್ತಾರೆ ಎಂದು ತಿಳಿಸಿದರು. ಸಂಸ್ಥೆಯ ಆಡಳಿತ ನಿರ್ವಾಹಕ ಪ್ರೊ. ರಾಮಚಂದ್ರ ಬಾಳಿಗ, ನರ್ಸಿಂಗ್ ವಿಭಾಗದ ಪ್ರಾಂಶುಪಾಲ ಪ್ರೊ.ಎಸ್ . ಮಲ್ಲಿಕಾರ್ಜುನ್ ಹಾಗೂ ಸಿಬ್ಬಂದಿ ಇದ್ದರು.

