ಇ-ಖಾತಾ ವಿಧಿತಧಿರಧಿಣೆಗೆ ಆಧಿನ್ ಧಿಲೈನ್ ಪ್ರಧಿಕ್ರಿಧಿಯೆ

Contributed byRayasab Anasari|Vijaya Karnataka

ಬೆಂಗಳೂರಿನಲ್ಲಿ ಇ-ಖಾತಾ ಪಡೆಯುವುದು ಈಗ ಸುಲಭವಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಆನ್‌ಲೈನ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ನಾಗರಿಕರು ಯಾವುದೇ ಕಚೇರಿಗೆ ಅಲೆಯುವ ಅಗತ್ಯವಿಲ್ಲ. ಅರ್ಜಿಗಳು 3-4 ದಿನಗಳಲ್ಲಿ ಅನುಮೋದನೆಗೊಳ್ಳುತ್ತವೆ. 5 ದಿನಗಳಲ್ಲಿ ಪರಿಶೀಲನೆ ಆಗದಿದ್ದರೆ ಸ್ವಯಂಚಾಲಿತ ಅನುಮೋದನೆ ದೊರೆಯುತ್ತದೆ. ಮಧ್ಯವರ್ತಿಗಳ ಹಾವಳಿ ತಪ್ಪಲಿದೆ. ಅಹವಾಲು ಸಲ್ಲಿಸಲು ಪ್ರತ್ಯೇಕ ಪೋರ್ಟಲ್ ಇದೆ.

easy online method for e account distribution
ಬೆಂಗಳೂರು : ಇ-ಖಾತಾ ವಿತರಣೆಯನ್ನು ಸುಲಭಗೊಳಿಸಲು, ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಆನ್‌ಲೈನ್ ಪ್ರಕ್ರಿಯೆಯನ್ನು ಆರಂಭಿಸಿದೆ. ಇದರಿಂದಾಗಿ ನಾಗರಿಕರು ಯಾವುದೇ ಸರ್ಕಾರಿ ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲ ಎಂದು ಜಿಬಿಎ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ. ಖಾಸಗಿ ಉದ್ಯಮಿಗಳ ಸಹಯೋಗದೊಂದಿಗೆ ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಈ ಮಾಹಿತಿ ನೀಡಿದರು. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಲ್ಲಿ ನಾಗರಿಕರಿಗೆ ಸಹಾಯ ಮಾಡಲು ಮತ್ತು ಡಿಜಿಟಲ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಇ-ಖಾತಾ ವಿತರಣೆ ಸಂಪೂರ್ಣವಾಗಿ ಆನ್‌ಲೈನ್ ಮೂಲಕ ನಡೆಯುವುದರಿಂದ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಬಹುದು. ಸರಾಸರಿ 3 ರಿಂದ 4 ದಿನಗಳಲ್ಲಿ ಇ-ಖಾತಾ ಅರ್ಜಿಗಳನ್ನು ಅನುಮೋದಿಸಲಾಗುತ್ತಿದೆ. ಶೇ.99ರಷ್ಟು ಅರ್ಜಿಗಳನ್ನು ನಿಗದಿತ ಸಮಯದೊಳಗೆ ಪರಿಶೀಲಿಸಿ ಅನುಮೋದಿಸಲಾಗುತ್ತಿದೆ. ಒಂದು ವೇಳೆ 5 ದಿನಗಳೊಳಗೆ ಅರ್ಜಿಯನ್ನು ಪರಿಶೀಲಿಸದಿದ್ದರೆ, ವ್ಯವಸ್ಥೆಯೇ ಸ್ವಯಂಚಾಲಿತವಾಗಿ ಅನುಮೋದನೆ ಪ್ರಕ್ರಿಯೆಯನ್ನು ಆರಂಭಿಸುತ್ತದೆ. ಇದರಿಂದ ನಾಗರಿಕರ ಅರ್ಜಿಗಳನ್ನು ಯಾರೂ ತಡೆಹಿಡಿಯಲು ಸಾಧ್ಯವಿಲ್ಲ ಎಂದು ಮುನೀಶ್ ಮೌದ್ಗಿಲ್ ವಿವರಿಸಿದರು.
ಸ್ಥಳೀಯ ಖಾಸಗಿ ಉದ್ಯಮಿಗಳೊಂದಿಗೆ ಪ್ರತಿ ತಿಂಗಳು ಸಮನ್ವಯ ಸಭೆಗಳನ್ನು ನಡೆಸಿ, ಅವರ ಸಮಸ್ಯೆಗಳನ್ನು ಮತ್ತು ಕಾರ್ಯನಿರ್ವಹಣೆಯ ಸವಾಲುಗಳನ್ನು ಪರಿಹರಿಸಲಾಗುವುದು. ಅಲ್ಲದೆ, ತಿರಸ್ಕೃತಗೊಂಡ ಇ-ಖಾತಾ ಅರ್ಜಿಗಳನ್ನು ಪರಿಶೀಲಿಸಲು 'ರಿಜೆಕ್ಷನ್‌ ಆಡಿಟ್‌ ತಂಡ'ವನ್ನು ರಚಿಸಲಾಗಿದೆ. ತಪ್ಪಾಗಿ ತಿರಸ್ಕೃತಗೊಂಡ ಅರ್ಜಿಗಳನ್ನು ಪರಿಶೀಲಿಸಿ ಅನುಮೋದನೆ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.

ಮಾಹಿತಿ ತಂತ್ರಜ್ಞಾನ (ಇ-ಆಸ್ತಿ) ವಿಭಾಗದ ಉಪ ಆಯುಕ್ತ ಮದನ್ ಮೋಹನ್ ಸಿ., ಕಂದಾಯ ವಿಭಾಗದ ಜಂಟಿ ಆಯುಕ್ತರಾದ ಲಕ್ಷ್ಮೇದೇವಿ, ಮತ್ತು ಕಂದಾಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ನಾಗರಿಕರು ಮತ್ತು ಉದ್ಯಮಿಗಳು ತಮ್ಮ ಅಹವಾಲುಗಳನ್ನು ಸಲ್ಲಿಸಲು ವಿಶೇಷ ಪೋರ್ಟಲ್ ಅನ್ನು ರಚಿಸಲಾಗಿದೆ. https://support.bbmp.gov.in/citizen/ ನಲ್ಲಿ ಅಹವಾಲು ಸಲ್ಲಿಸಬಹುದು. ವೈಯಕ್ತಿಕ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳಿದ್ದಲ್ಲಿ 9480683695 ಸಂಖ್ಯೆಗೆ ಸಂಪರ್ಕಿಸಬಹುದು. ಈ ಹೊಸ ವ್ಯವಸ್ಥೆಯಿಂದ ನಾಗರಿಕರಿಗೆ ಇ-ಖಾತಾ ಪಡೆಯುವುದು ಇನ್ನಷ್ಟು ಸುಲಭವಾಗಲಿದೆ.