ತಳಗವಾದಿ ಗ್ರಾಮದಲ್ಲಿಮಹಿಳಾ ಜಾನಪದ ಸಂಭ್ರಮ

Contributed bymamaramediacentre@gmail.com|Vijaya Karnataka

ತಳಗವಾದಿ ಗ್ರಾಮದಲ್ಲಿ ನಡೆದ ರಾಜ್ಯಮಟ್ಟದ ಮಹಿಳಾ ಜಾನಪದ ಸಂಭ್ರಮದಲ್ಲಿ ಮಹಿಳಾ ಕಲಾವಿದರ ಪ್ರದರ್ಶನ ಗಮನ ಸೆಳೆಯಿತು. ಕೆ.ಎ.ದಯಾನಂದ್‌, ಡಾ.ನಾಗಲಕ್ಷ್ಮಿ ಚೌಧರಿ ಅವರು ಭಾಗವಹಿಸಿದ್ದರು. ಜಾನಪದ ಕಲೆ ಗ್ರಾಮೀಣ ಜನರ ಭಾವನೆಗಳನ್ನು ಹೊರಹಾಕುವ ಸಾಧನವಾಗಿದೆ ಎಂದು ದಯಾನಂದ್‌ ತಿಳಿಸಿದರು. ಸವಿತಾ ಚಿರಕುನ್ನಯ್ಯ ಅವರ ಪೂಜಾ ಕುಣಿತ ಸೇರಿದಂತೆ ಮಹಿಳಾ ಕಲಾವಿದರ ಪ್ರದರ್ಶನ ಗಮನ ಸೆಳೆಯಿತು. ನಾಗಲಕ್ಷ್ಮಿ ಚೌಧರಿ ಅವರು ಕಲಾವಿದರೊಂದಿಗೆ ನೃತ್ಯ ಮಾಡಿ ರಂಜಿಸಿದರು.

talagawadi womens folk festival a new life for the art of women

ಗಮನಸೆಳೆದ ಮಹಿಳಾ ಕಲಾವಿದರ ಪ್ರದರ್ಶನ

ಕೆ.ಎ.ದಯಾನಂದ್ , ಡಾ.ನಾಗಲಕ್ಷ್ಮಿ ಚೌಧರಿ ಭಾಗಿ

ವಿಕ ಸುದ್ದಿಲೋಕ ಮಳವಳ್ಳಿ

ಜಾನಪದ ಕಲೆ ಗ್ರಾಮೀಣ ಜನರ ಭಾವನೆ, ನೋವು, ಸುಖ-ದುಃಖಗಳನ್ನು ಹೊರ ಹಾಕುವ ಸಾಧನವಾಗಿ ಹೊರಹೊಮ್ಮಿದೆ ಎಂದು ಕರ್ನಾಟಕ ಗೃಹಮಂಡಳಿಯ ಆಯುಕ್ತ ಕೆ.ಎ.ದಯಾನಂದ್ ತಿಳಿಸಿದರು.

ಮಲವಳ್ಳಿ ತಾಲೂಕಿನ ತಳಗವಾದಿ ಗ್ರಾಮದಲ್ಲಿ ಚಿರಕುನ್ನಯ್ಯ ಪೂಜಾ ಕುಣಿತ ಕಲಾ ಟ್ರಸ್ಟ್ ಆಯೋಜಿಸಿದ್ದ ರಾಜ್ಯಮಟ್ಟದ ಮಹಿಳಾ ಜಾನಪದ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘‘ಇತ್ತೀಚಿನ ದಿನಮಾನಗಳನ್ನು ಹಲವರು ಸತ್ಯವಂತರ ರೀತಿಯಲ್ಲಿಮಾತನಾಡುತ್ತಾರೆ. ಆದರೆ, ಅವರ ನಡೆ ನುಡಿ ಬೇರೆಯಾಗಿಯೇ ಇರುತ್ತದೆ. ನಡೆನುಡಿಗಳನ್ನು ಒಂದಾಗಿಸಿದರೇ ಮಾತ್ರ ನಾಡಿನಲ್ಲಿಸುಂದರ ಬದುಕನ್ನು ಕಾಣಬಹುದು,’’ ಎಂದರು.

‘‘ಗಂಡಿಗೆ ಸೀಮಿತವಾಗಿದ್ದ ಪೂಜಾ ಕುಣಿತ ಕಲೆಯನ್ನು ಕಲಿತ ಸವಿತಾ ಚಿರಕುನ್ನಯ್ಯ ಅವರು ಬಾಲ್ಯದಿಂದಲೇ ಮೈಗೂಡಿಸಿಕೊಂಡು ವಿಶ್ವಕ್ಕೆ ಮಹಿಳೆಯ ಶಕ್ತಿಯನ್ನು ತೋರಿಸಿದ್ದಾರೆ. ಜಾನಪದ ಕಲೆಯನ್ನು ಉಳಿಸಿ ಬೆಳೆಸುವ ಪ್ರಯತ್ನಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು.

ಕಲಾ ಟ್ರಸ್ಟ್ ಅಧ್ಯಕ್ಷೆ ಸವಿತಾ ಚಿರಕುನ್ನಯ್ಯ ಮಾತನಾಡಿ, ‘‘ನಮ್ಮ ತಂದೆಯಿಂದಲೇ ಈ ರಂಗಮಂದಿರದಲ್ಲಿಪೂಜಾ ಕುಣಿತ ಕಲಿತು ಗುರುತಿಸಿಕೊಂಡಿರುವೆ. ಅವರ ಹೆಸರನ್ನು ಶಾಶ್ವತವಾಗಿ ಇಡುವ ಉದ್ದೇಶದಿಂದ ಟ್ರಸ್ಟ್ ಆರಂಭಿಸಿ ಹೆಣ್ಣು ಮಕ್ಕಳಿಗೆ ಜಾನಪದ ಕಲೆ ಕಲಿಸಲು ಮುಂದಾಗಿದ್ದು, ಎಲ್ಲರ ಸಹಕಾರ ಬೇಕು,’’ ಎಂದು ಮನವಿ ಮಾಡಿದರು.

ವೇದಿಕೆ ಕಾರ್ಯಕ್ರಮ ಆರಂಭಕ್ಕೂ ಮುನ್ನ ಸರಕಾರಿ ಪದವಿಪೂರ್ವ ಕಾಲೇಜು ಆವರಣದಿಂದ ಎತ್ತಿನನಾಡಿಯಲ್ಲಿಅತಿಥಿಗಳನ್ನು ವಿವಿಧ ಜಾನಪದ ಕಲಾತಂಡ ಮೆರವಣಿಗೆ ಮೂಲಕ ಕರತರಲಾಯಿತು. ನಂತರ ಸವಿತಾ ಚಿರಕುನ್ನಯ್ಯ ಅವರ ಪೂಜಾ ಕುಣಿತ ಸೇರಿದಂತೆ ಮಹಿಳಾ ಕಲಾವಿದರ ಪ್ರದರ್ಶನ ಗಮನ ಸೆಳೆಯಿತು. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಸಹ ಕಲಾವಿದರೊಂದಿಗೆ ನೃತ್ಯ ಮಾಡಿ ರಂಜಿಸಿದರು.

ಬಾಕ್ಸ್

ಮಂಡ್ಯ ಜಾನಪದ ಕಲೆಗಳ ನಾಡು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಮಾತನಾಡಿ, ‘‘ಜಾನಪದ ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿಗ್ರಾಮೀಣ ಜನರ ಪಾತ್ರವೇ ಅಧಿಕ. ಇಂಥ ಕಲಾವಿದರನ್ನು ಪ್ರೋತ್ಸಾಹಿಸಬೇಕಿದೆ. ಹಳ್ಳಿಗಾಡಿನ ಜನರಲ್ಲಿಕಲೆಗಳು ಅಡಕವಾಗಿವೆ. ಅವುಗಳನ್ನು ಹೊರ ತರುವ ಪ್ರಯತ್ನವನ್ನು ಕನ್ನಡ ಸಂಸ್ಕೃತಿ ಇಲಾಖೆ ಮಾಡಬೇಕು. ಮಂಡ್ಯ ಜಿಲ್ಲೆಜಾನಪದ ಕಲೆ ನಾಡು. ಕಲಾವಿದರ ಬದುಕಿನಲ್ಲಿಸರಕಾರ ಸಹಾಯ ಮಾಡದೆ ಹೋದರೆ ಜಾನಪದ ಉಳಿಯುವುದಿಲ್ಲ, ಕಲಾವಿದರಿಗೆ ವಿಶೇಷÜ ಪ್ರೋತ್ಸಾಹ ಅಗತ್ಯವಿದೆ,’’ ಎಂದು ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಘಟಕದ ಅಧ್ಯಕ್ಷ ಡಿ.ಪಿ.ಸ್ವಾಮಿ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಸಿ.ಎನ್ .ಮಂಜೇಶ್ ಚನ್ನಾಪುರ, ಮುಖಂಡರಾದ ದಿಲೀಪ್ ಕುಮಾರ್ (ವಿಶ್ವ), ಬೆಳ್ಳಿಕೃಷÜ್ಣ, ಜೆಡಿಎಸ್ ಅಧ್ಯಕ್ಷ ಹನುಮಂತು, ರಾಮಣ್ಣ, ಟಿ.ಎಂ.ಪ್ರಕಾಶ್ , ಟಿ.ಆರ್ .ಸೋಮೇಗೌಡ, ಚಿಕ್ಕೇಗೌಡ, ಟ್ರಸ್ಟ್ ನ ಸಿದ್ದರಾಜು, ರವಿ ಸೇರಿದಂತೆ ಸಾವಿರಾರು ಜನರು ಕಲಾವಿದರು ಭಾಗವಹಿಸಿದ್ದರು.

ಚಿತ್ರ-13-2

ತಳಗವಾದಿ ಮಹಿಳಾ ಜಾನಪದ ಸಂಭ್ರಮದ ಚಿತ್ರ