ರಂಗಂಪೇಟೆ : ಕೇಂಬ್ರಿಡ್ಜ್ ಶಾಲೆಯ ವಾರ್ಷಿಕೋತ್ಸವ

Contributed bygsshabadi@gmail.com|Vijaya Karnataka

ರಂಗಂಪೇಟೆಯ ಕೇಂಬ್ರಿಡ್ಜ್‌ ಇಂಟರ್‌ ನ್ಯಾಷನಲ್‌ ಸ್ಕೂಲ್‌ನಲ್ಲಿ ಮೊದಲ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಸುರಪುರ ಸಂಸ್ಥಾನದ ರಾಜಾ ಲಕ್ಷಿತ್ರ್ಮೕ ನಾರಾಯಣ ನಾಯಕರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲೆಯ ಪ್ರಾಂಶುಪಾಲರು ಪ್ರಾಥಮಿಕ ಶಿಕ್ಷಣದ ಮಹತ್ವವನ್ನು ವಿವರಿಸಿದರು. ವಿದ್ಯಾರ್ಥಿಗಳು ನೃತ್ಯ, ಹಾಡು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಆದರ್ಶ ದಂಪತಿಗಳನ್ನೂ ಸನ್ಮಾನಿಸಲಾಯಿತು.

cambridge schools historic annual fest a confluence of talent art and education

ಫೋಟೊ : 13ಸುರ್ 4

ಸುರಪುರ ಸಮೀಪದ ರಂಗಂಪೇಟೆಯ ಕೇಂಬ್ರಿಡ್ಜ್ ಶಾಲೆಯ ವಾರ್ಷಿಕೋತ್ಸವವನ್ನು ಅರಸು ಮನೆತನದ ರಾಜಾ ಲಕ್ಷಿತ್ರ್ಮೕನಾರಾಯಣ ನಾಯಕ ಉದ್ಘಾಟಿಸಿದರು.

ರಂಗಂಪೇಟೆ : ಕೇಂಬ್ರಿಡ್ಜ್ ಶಾಲೆಯ ವಾರ್ಷಿಕೋತ್ಸವ

ವಿಕ ಸುದ್ದಿಲೋಕ ಸುರಪುರ

ಸಮೀಪದ ರಂಗಂಪೇಟೆಯ ಕೇಂಬ್ರಿಡ್ಜ್ ಇಂಟರ್ ನ್ಯಾಷನಲ್ ಸ್ಕೂಲ್ ನ ಪ್ರಥಮ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಸುರಪುರ ಸಂಸ್ಥಾನದ ಅರಸು ಮನೆತನದ ರಾಜಾ ಲಕ್ಷಿತ್ರ್ಮೕ ನಾರಾಯಣ ನಾಯಕ ಉದ್ಘಾಟಿಸಿದರು.

ಬಳಿಕ ಶಾಲೆಯ ಪ್ರಾಂಶುಪಾಲ ಮೌನೇಶ್ ನಾಲವಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಪೂರ್ವ ಪ್ರಾಥಮಿಕ ಶಿಕ್ಷಣವು ಮಕ್ಕಳ ಭವಿಷ್ಯದ ವಿದ್ಯಾಭ್ಯಾಸಕ್ಕೆ ಭದ್ರವಾದ ಅಡಿಪಾಯ ಹಾಕುತ್ತದೆ. ಈ ಹಂತದಲ್ಲಿಮಕ್ಕಳು ಕಲಿಕೆಯ ಮೇಲೆ ಆಸಕ್ತಿ ಬೆಳಸಿಕೊಳ್ಳುತ್ತಾರೆ. ಈ ಹಂತದಲ್ಲಿಮಕ್ಕಳಿಗೆ ಓದು ಜತೆಯಲ್ಲಿಆಟ, ಹಾಡು, ಕಥೆಗಳು ಹಾಗೂ ಚಟುವಟಿಕೆಗಳ ಮೂಲಕ ಕಲಿಕೆ ನೀಡಲಾಗುತ್ತದೆ. ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಸಹಾಯವಾಗುತ್ತದೆ ಎಂದರು.

ಈ ವಾರ್ಷಿಕೋತ್ಸವವು ವಿದ್ಯಾರ್ಥಿಗಳ ಪ್ರತಿಭೆ ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದೆ.ಶಾಲೆಯ ಸಾಂಸ್ಕೃತಿಕ ಚುಟುವಟಿಕೆಗಳಿಗೆ ಮಹತ್ವದ ಪಾತ್ರ ವಹಿಸುತ್ತದೆ. ಈ ಭಾಗದಲ್ಲಿಕೇಂಬ್ರಿಡ್ಜ್ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿಗುಣಮಟ್ಟದ ಶಿಕ್ಷಣ ಕೊಡಲಾಗುತ್ತಿದೆ ಎಂದರು.

ಶಾಲೆಯ ಚಿಕ್ಕಮಕ್ಕಳು ನೃತ್ಯ, ಹಾಡು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದರು. ವಿದ್ಯಾರ್ಥಿಗಳ ಕಲಾತ್ಮಕ ಪ್ರದರ್ಶನಗಳು ಎಲ್ಲರ ಮನಸೆಳೆಯುವಂತಾಗಿದ್ದವು. ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳ ವಿದ್ಯಾಭ್ಯಾಸ ಹಾಗೂ ಚಟುವಟಿಕೆಗಳ ಬಗ್ಗೆ ವಿವರಿಸಿದರು.

ರಸಪ್ರಶ್ನೆ ಸ್ಪರ್ಧೆಯಲ್ಲಿಶ್ರಾವಣಿ ಸುರೇಶ ಹಚ್ಚಡ, ಕರಣ್ ಎಸ್ .ಗೋಗಿ, ಕೃತಿ ಎಸ್ .ಗೋಗಿ, ವೇದಾಂತ್ ಶ್ರೀನಿವಾಸ, ಕನ್ನಡ ಮಾಧ್ಯಮದಲ್ಲಿವಿಜೇತರಾದ ಶಶಿಧರ ಮಹೇಶ, ಸ್ನೇಹಾ ಅಯ್ಯಣ್ಣ, ಪೂಜಾ ಹನುಮಂತ, ಚಿತ್ರಕಲೆಯಲ್ಲಿರಮ್ಮನ್ನಾ ಹಬೀಬ್ , ಶ್ರುತಿ ಶ್ರೀಶೈಲ್ ಸಜ್ಜನ್ , ಕೆ.ಶ್ರೀನಿವಾಸ ವಿಜೇತರಾದ ಮಕ್ಕಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು. ಆದರ್ಶ ದಂಪತಿ ಸ್ಪರ್ಧೆಯಲ್ಲಿವಿಜೇತರಾದ ಸುಮಂಗಲಾ ವೀರಭದ್ರ ಕುಂಬಾರ ದಂಪತಿಗೆ ಸನ್ಮಾನಿಸಲಾಯಿತು. ಸಗರನಾಡು ಪ್ರಯೋಗಾಲಯದ ಮುಖ್ಯಸ್ಥ ಮಲ್ಲಯ್ಯ ಲಿಂಗದಳ್ಳಿ ಮುಖ್ಯ ಅತಿಥಿಗಳಾಗಿದ್ದರು. ಸಂಸ್ಥೆಯ ಅಧ್ಯಕ್ಷೆ ಹಾಗೂ ಸುರಕ್ಷಾ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಸುನಂದಾ ನಾಲವಾರ ವೇದಿಕೆಯಲ್ಲಿದ್ದರು. ಸ್ವಾತಿ ಹಿರೇಮಠ ಸ್ವಾಗತಿಸಿದರು. ಉಮಾಶ್ರೀ ಮೇಟಿ ನಿರೂಪಿಸಿದರು. ಬುಜ್ರಾ ಗೋಡಾ ವಂದಿಸಿದರು.