ಜಿಲ್ಲೆಯಲ್ಲಿಗೃಹಬಳಕೆ ಸಿಲಿಂಡರ್ ಗಳಿಗೆ ಸಮಸ್ಯೆ ಇಲ್ಲ( ಪ್ರಮುಖ)
ವಿಕ ಸುದ್ದಿಲೋಕ, ರಾಮನಗರ: ಪ್ರಸ್ತುತ ಕೊಲ್ಲಿರಾಷ್ಟ್ರದ ಯುದ್ಧದ ಪರಿಣಾಮ ಉದ್ಭವಿಸಿರುವ ಎಲ್ ಪಿಜಿ ಸರಬರಾಜು ಬಗ್ಗೆ ಸಮರ್ಪಕವಾಗಿ ಪರಿಹಾರ ಕಂಡುಕೊಳ್ಳುವ ಹಿನ್ನೆಲೆಯಲ್ಲಿರಾಜ್ಯ ಸರಕಾರ ಮಹತ್ವದ ಕ್ರಮಗಳನ್ನು ಕೈಗೊಂಡಿದೆ.
ಜಿಲ್ಲಾಡಳಿತ ತೈಲ ಕಂಪನಿಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಗೃಹ ಬಳಕೆಯ ಎಲ್ ಪಿಜಿ ಸಿಲಿಂಡರ್ ಗಳ ಲಭ್ಯತೆ ಬಗ್ಗೆ ಮಾಹಿತಿ ಪಡೆದು ಸಮಸ್ಯೆ ಇಲ್ಲದ ಬಗ್ಗೆ ತೈಲ ಕಂಪನಿ ಅಧಿಕಾರಿಗಳಿಂದ ಖಾತ್ರಿಪಡಿಸಿಕೊಂಡಿದೆ.
ಅದರಂತೆ ಜಿಲ್ಲೆಯಲ್ಲಿಒಟ್ಟು 3,24,161 ಗ್ರಾಹಕರಿದ್ದು, ಐಒಸಿ 1,20,986, ಬಿಪಿಸಿ-97,842, ಎಚ್ ಪಿಸಿ-1,05,331 ಗ್ರಾಹಕರಿದ್ದು, ದೇಶದಲ್ಲಿಪ್ರಸ್ತುತ ಲಭ್ಯವಿರುವ ದೇಶೀಯ ಎಲ್ ಪಿಜಿ ದಾಸ್ತಾನು ಗೃಹಬಳಕೆ ಗ್ರಾಹಕರಿಗೆ ಅಗತ್ಯವಿರುವ ಬಗ್ಗೆ ಮಾಹಿತಿ ನೀಡಿದ್ದು, ಜಿಲ್ಲೆಯ ಎಲ್ಲಗ್ರಾಹಕರು ಎಲ್ ಪಿಜಿ ಸರಬರಾಜಿನ ಬಗ್ಗೆ ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಗ್ರಾಹಕರು ಆತಂಕದಲ್ಲಿತುರ್ತು ಅನಗತ್ಯ ಬುಕ್ಕಿಂಗ್ ಮಾಡದೇ ಕೃತಕ ಬೇಡಿಕೆ
ಸೃಷ್ಟಿಯಾಗದಂತೆ ಸಮರ್ಪಕವಾಗಿ ಬಳಕೆ ಮಾಡಲು ಸಮತೋಲನ ಕಾಪಾಡಿಕೊಳ್ಳುವಂತೆ ತಿಳಿಸಲಾಗಿದೆ.
ಗ್ರಾಹಕರು ಪ್ರತಿ ಗೃಹ ಬಳಕೆಯ ಸಿಲಿಂಡರ್ ಬುಕ್ ಮಾಡಿ ಪಡೆದುಕೊಂಡ ನಂತರ ಮತ್ತೊಂದು ಗೃಹಬಳಕೆಯ ಸಿಲಿಂಡರ್ ಗಾಗಿ ನಗರ ಪ್ರದೇಶದಲ್ಲಿ25 ದಿನಗಳವರೆಗೆ ಗ್ರಾಮೀಣ ಪ್ರದೇಶದಲ್ಲಿ45 ದಿನಗಳವರೆಗೆ ಕಂಪನಿಗಳು ಅವಕಾಶ ನೀಡಿರುತ್ತವೆ.
ಗ್ರಾಹಕರಿಗೆ ಏಜೆನ್ಸಿಯಲ್ಲಿನೇರವಾಗಿ ಬುಕಿಂಗ್ ಮಾಡಲು ಅವಕಾಶವಿರುವುದಿಲ್ಲ. ಪರ್ಯಾಯವಾಗಿ ಐಒಸಿ,ಬಿಪಿಸಿ ಮತ್ತು ಎಚ್ ಪಿಸಿ ಎಲ್ ಪಿಜಿ ಕಂಪನಿಗಳಲ್ಲಿಗ್ರಾಹಕರು ಸಾಮಾನ್ಯವಾಗಿ ಮಿಸ್ ಕಾಲ್ ಮೂಲಕ ಬುಕಿಂಗ್ ಮಾಡುತ್ತಿದ್ದು ಪರ್ಯಾಯವಾಗಿ ಕಂಪನಿ ಆ್ಯಪ್ (ಎಚ್ ಪಿ ಪೇ, ಇಂಡಿಯನ್ ಆಯಿಲ್ ಒನ್ ಆಪ್ , ಹೆಲೋ ಬಿಪಿಸಿ), ಕಂಪನಿ ಪೋರ್ಟಲ್ , ವಾಟ್ಸ್ ಪ್ , ಐವಿಆರ್ ಎಸ್ , ಬಿಬಿಪಿಎಸ್ , ಎಸ್ ಎಂಎಸ್ ಪ್ಲಾಟ್ ಫಾರಂಗಳನ್ನು ಬಳಸಬಹುದಾಗಿದೆ.
ಜಿಲ್ಲೆಯಲ್ಲಿಎಲ್ ಪಿಜಿ ಸಿಲಿಂಡರ್ ಗಳ ಕೊರತೆ ಇರುವುದಿಲ್ಲವಾದ್ದರಿಂದ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲಮತ್ತು ಸಾಮಾಜಿಕ ಜಾಲ ತಾಣಗಳಲ್ಲಿಹರಿದಾಡುತ್ತಿರುವ ಸುಳ್ಳು ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದೆಂದು ಕೋರಲಾಗಿದೆ.
ಒಂದು ವೇಳೆ ಯಾವುದೇ ಸಮಸ್ಯೆ ಕಂಡುಬಂದಲ್ಲಿತಾಲೂಕು ಮಟ್ಟದಲ್ಲಿಆಯಾ ತಾಲೂಕಿನ ತಹಸೀಲ್ದಾರ್ ಗೆ ಹಾಗೂ ಜಿಲ್ಲಾಮಟ್ಟದಲ್ಲಿಉಪನಿರ್ದೇಶಕರ ಕಚೇರಿಗೆ ಕಚೇರಿ ಸಮಯದಲ್ಲಿದೂರವಾಣಿ ಸಂಖ್ಯೆ: 080-27275148 ಮೂಲಕ ಕರೆ ಮಾಡಬಹುದಾಗಿದೆ.
ಗೃಹ ಬಳಕೆ ಸಿಲಿಂಡರ್ ಗಳನ್ನು ವಾಣಿಜ್ಯ ಬಳಕೆಗೆ ಉಪಯೋಗಿಸಬಾರದು. ಅಲ್ಲದೇ, ಸಿಲಿಂಡರ್ ಗಳನ್ನು ಅನಧಿಕೃತವಾಗಿ ಸಂಗ್ರಹಿಸಿ ಒಂದು ಸಿಲಿಂಡರ್ ನಿಂದ ಮತ್ತೊಂದು ಸಿಲಿಂಡರ್ ಗೆ ವರ್ಗಾಯಿಸುವುದು ಲಿಕ್ವಿಫೈಯ್ಡ್ ಪೆಟ್ರೋಲಿಯಂ ಗ್ಯಾಸ್ (ರೆಗುಲೇಷನ್ ಆಫ್ ಸಪ್ಲೈಡಿಸ್ಟ್ರಿಬ್ಯುಷನ್ ) ಆರ್ಡರ್ 2000ರ ಅನ್ವಯ ಅಪರಾಧ
ವಾಗಿರುತ್ತದೆ.
ಸಿಲಿಂಡರ್ ಗಳನ್ನು ಸಾಗಾಣಿಕೆ ಮಾಡುವ ವಾಹನಗಳು ಮತ್ತು ಸಿಬ್ಬಂದಿ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸುವಂತಹ ಪ್ರಕರಣಗಳು ಕಂಡುಬಂದಲ್ಲಿಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ. ಈ ಸಂಬಂಧ ಸಾರ್ವಜನಿಕರು ದೂರವಾಣಿ ಸಂಖ್ಯೆಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.
ಫೋಟೋ:
13ಆರ್ ಎನ್ ಆರ್ ಎಚ್ 04
ಸಾಂದರ್ಭಿಕ ಚಿತ್ರ

