ಕೆ.ಗಂಗಾಧರ್ ಯಾದವ್ , ಕಾಸರಗೋಡು
ಜa್ಞಜadha್ಟ.kಟ್ಟಛಿkka್ಞaಃಠಿಜಿಞಛಿsಟ್ಛಜ್ಞಿdಜಿa.್ಚಟಞ
ಕೇರಳ ವಿಧಾನಸಭೆ ಚುನಾವಣೆಯಲ್ಲಿಮಹಿಳಾ ಮತದಾರರ ಮತದಾನದ ಶೇಕಡಾವಾರು ಹೆಚ್ಚಳವಾಗಿದೆ.
ಈ ಬಾರಿಯ ಚುನಾವಣೆಯಲ್ಲಿಒಟ್ಟು ಮಹಿಳಾ ಮತದಾರರಲ್ಲಿಶೇ.81.19 ಮಹಿಳೆಯರು ಮತ ಚಲಾಯಿಸಿದ್ದಾರೆ. ಪುರುಷ ಮತದಾರರಲ್ಲಿಕೇವಲ ಶೇ.75.19ರಷ್ಟು ಮಾತ್ರ ಮತ ಚಲಾಯಿಸಿದ್ದಾರೆ.
ಯುಡಿಎಫ್ , ಎಲ್ ಡಿಎಫ್ ಹಾಗೂ ಎನ್ ಡಿಎ ಭರವಸೆಗಳು ಮತ್ತು ಕಲ್ಯಾಣ ಯೋಜನೆಗಳು ಮತ್ತು ರಾಜಕೀಯ ಕಾರಣಗಳು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿಮತಗಟ್ಟೆಗೆ ಆಗಮಿಸಲು ಕಾರಣ ಎಂದು ಅಂದಾಜಿಸಲಾಗಿದೆ.
ಚುನಾವಣಾ ಆಯೋಗವು ಇಲ್ಲಿಯವರೆಗೆ ಒದಗಿಸಿದ ಅಂಕಿ-ಅಂಶಗಳ ಪ್ರಕಾರ, ಒಟ್ಟು 1,39,21,868 ಮಹಿಳಾ ಮತದಾರರಲ್ಲಿ1,13,03,164 ಮಹಿಳೆಯರು ಮತ ಚಲಾಯಿಸಿದ್ದಾರೆ. ಮಹಿಳಾ ಮತ್ತು ಪುರುಷ ಮತದಾರರ ಮತದಾನದ ಶೇಕಡಾವಾರು ನಡುವೆ ಶೇ.6ರಷ್ಟು ವ್ಯತ್ಯಾಸವಿದೆ. ಮತ ಎಣಿಕೆ ನೋಡಿದರೆ, ಪುರುಷ ಮತದಾರರಿಗಿಂತ 13.60 ಲಕ್ಷ ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ.
2021ರ ವಿಧಾನಸಭೆ ಚುನಾವಣೆಯಲ್ಲಿಮಹಿಳಾ ಮತದಾರರ ಮತದಾನ ಶೇ.73.94 ಆಗಿತ್ತು. 2024ರ ಲೋಕಸಭೆ ಚುನಾವಣೆಯಲ್ಲಿಇದು ಶೇ.71.86ರಷ್ಟಿತ್ತು. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿಮತದಾನ ಸುಮಾರು 10 ಪ್ರತಿಶತದಷ್ಟು ಹೆಚ್ಚಳವಾಗಿದೆ. 1987ರಲ್ಲಿಮಹಿಳಾ ಮತದಾರರ ಮತದಾನದ ಪ್ರಮಾಣ ಶೇ.80.58ರಷ್ಟಿತ್ತು. ಪುರುಷ ಮತ್ತು ಮಹಿಳಾ ಮತದಾರರ ಮತದಾನದ ಶೇಕಡಾವಾರು ನಡುವೆ ಇಷ್ಟೊಂದು ವ್ಯತ್ಯಾಸ ಇರುವುದು ಇದೇ ಮೊದಲು.
10 ವರ್ಷ ಎಲ್ ಡಿಎಫ್ ಸರಕಾರವು ಸಾಧನೆಯಾಗಿ ಪರಿಚಯಿಸಿದ ಕಲ್ಯಾಣ ಪಿಂಚಣಿಯಿಂದ ಹಿಡಿದು ಇಂದಿರಾ ಗ್ಯಾರಂಟಿ ಮೂಲಕ ಮಹಿಳೆಯರನ್ನು ಆಕರ್ಷಿಸಲು ಯುಡಿಎಫ್ ನ ವಿವಿಧ ಯೋಜನೆಗಳವರೆಗೆ, ಮಹಿಳಾ ಮತದಾರರನ್ನು ಆಕರ್ಷಿಸಲು ಹಲವು ಭರವಸೆಗಳನ್ನು ನೀಡಲಾಗಿತ್ತು.
ಶೇ.50ರಷ್ಟು ಮಹಿಳೆಯರಿಗೆ ಉದ್ಯೋಗ, ಕೆಎಸ್ ಆರ್ ಟಿಸಿ ಬಸ್ ಗಳಲ್ಲಿಉಚಿತ ಪ್ರಯಾಣ, ಇತರ ಸವಲತ್ತುಗಳನ್ನು ಪಡೆಯದ 35ರಿಂದ 60 ವರ್ಷದೊಳಗಿನ ಮಹಿಳೆಯರಿಗೆ ಘೋಷಿಸಲಾದ ಪಿಂಚಣಿ, ಕಾಲೇಜು ವಿದ್ಯಾರ್ಥಿಗಳಿಗೆ 1,000 ರೂ. ಮಾಸಿಕ ಸಹಾಯ ಮತ್ತು ಬೆಲೆ ಏರಿಕೆ ಮುಂತಾದ ವಿಷಯಗಳು ಮಹಿಳಾ ಮತದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

