ಡಾ.ಅಂಬೇಡ್ಕರ್ ಸಮಾನತೆ ಹರಿಕಾರ

Contributed bymaheshbadiger05@gmail.com|Vijaya Karnataka
Vijay Karnataka

14ಮಹೇಶ6

ಜಿಲ್ಲಾಡಳಿತದಿಂದ ಡಾ.ಬಿ.ಆರ್ .ಅಂಬೇಡ್ಕರ 135ನೇ ಜಯಂತಿ

ಡಾ.ಅಂಬೇಡ್ಕರ್ ಸಮಾನತೆ ಹರಿಕಾರ

ವಿಕ ಸುದ್ದಿಲೋಕ ಧಾರವಾಡ

ಡಾ.ಬಿ.ಆರ್ .ಅಂಬೇಡ್ಕರ್ ಅವರು ಸಂವಿಧಾನ ರಚನೆ ಮೂಲಕ ದೇಶದ ಸಮಾನತೆ ಮತ್ತು ನ್ಯಾಯ ವ್ಯವಸ್ಥೆಗೆ ಬಲವಾದ ಅಡಿಪಾಯ ಹಾಕಿಕೊಟ್ಟಿದ್ದಾರೆ ಎಂದು ಜಿಲ್ಲಾಉಸ್ತುವಾರಿ ಸಚಿವ ಸಂತೋಷ ಎಸ್ .ಲಾಡ್ ಹೇಳಿದರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿಆಯೋಜಿಸಿದ್ದ ಡಾ.ಬಿ.ಆರ್ .ಅಂಬೇಡ್ಕರ ಅವರ 135ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಡಾ.ಬಿ.ಆರ್ .ಅಂಬೇಡ್ಕರ್ ಅವರು ಎದುರಿಸಿದ ಕಷ್ಟಗಳು ಅಪಾರವಾಗಿದ್ದು, ಸಮಾಜದ ಅನ್ಯಾಯ ಮತ್ತು ಅಸಮಾನತೆ ನಡುವೆಯೇ ಅವರು ಉನ್ನತ ಶಿಕ್ಷಣ ಪಡೆದು, ಹಲವು ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ ಭಾರತದ ಸಂವಿಧಾನವನ್ನು ರಚಿಸಿದ್ದಾರೆ ಎಂದರು.

ಸಂವಿಧಾನವನ್ನು ರಚಿಸಲು ಸುಮಾರು 2 ವರ್ಷ 11 ತಿಂಗಳು 18 ದಿನಗಳ ಕಾಲ ನಿರಂತರ ಚರ್ಚೆ ನಡೆ ಸಲಾಗಿದೆ. ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆ ಇದ್ದ ಸಂದರ್ಭದಲ್ಲಿ, ಹಿಂದುಳಿದ ವರ್ಗಗಳ ಹಕ್ಕುಗಳಿಗಾಗಿ ಡಾ.ಅಂಬೇಡ್ಕರ್ ಅವರು ಹೋರಾಡಿ, ಎಲ್ಲವರ್ಗಗಳಿಗೂ ಸಮಾನ ಹಕ್ಕುಗಳನ್ನು ಒದಗಿಸುವ ವ್ಯವಸ್ಥೆಯನ್ನು ನಿರ್ಮಿಸಿದರು. ಸಂವಿಧಾನವು ಎಲ್ಲನಾಗರಿಕರ ಹಿತಕ್ಕಾಗಿ ರೂಪಿತವಾಗಿದೆ ಎಂದು ಹೇಳಿದರು.

ಮೀಸಲಾತಿ ವ್ಯವಸ್ಥೆಯು ಸಾಮಾಜಿಕ ನ್ಯಾಯ ಸಾಧಿಸಲು ಅಗತ್ಯವಾಗಿದ್ದು, ಇದು ಭಾರತದಲ್ಲಷ್ಟೇ ಅಲ್ಲ, ಅನೇಕ ದೇಶಗಳಲ್ಲಿವಿವಿಧ ರೂಪಗಳಲ್ಲಿಜಾರಿಯಲ್ಲಿದೆ. ಹಿಂದುಳಿದ ವರ್ಗಗಳಿಗೆ ಅವಕಾಶ ಕಲ್ಪಿಸುವುದು ಸಂವಿಧಾನದ ಮುಖ್ಯ ಉದ್ದೇಶವಾಗಿದೆ. ಹೆಣ್ಣುಮಕ್ಕಳ ಹಕ್ಕುಗಳ ವಿಷಯದಲ್ಲಿಡಾ.ಅಂಬೇಡ್ಕರ್ ಅವರ ಕೊಡುಗೆ ಅತ್ಯಂತ ಮಹತ್ವದ್ದು. ಮಹಿಳೆಯರಿಗೆ ಆಸ್ತಿ ಹಕ್ಕು, ಮರು ವಿವಾಹ ಹಕ್ಕು ಹಾಗೂ ಸಮಾನ ಅವಕಾಶಗಳನ್ನು ನೀಡುವಲ್ಲಿಅವರ ಪಾತ್ರವನ್ನು ಸ್ಮರಿಸಬೇಕಾಗಿದೆ ಎಂದು ತಿಳಿಸಿದರು.

ಸಂವಿಧಾನ ಪೂರ್ವದಲ್ಲಿಹೆಣ್ಣುಮಕ್ಕಳಿಗೆ ಪಿತ್ರಾರ್ಜಿತ, ಗಂಡನ ಆಸ್ತಿಯಲ್ಲಿಹಕ್ಕು ಇರಲಿಲ್ಲ. ನಮ್ಮ ದೇಶದಲ್ಲಿಪ್ರತಿ ಹೆಣ್ಣುಮಕ್ಕಳಿಗೂ ಗಂಡನ ಆಸ್ತಿ ಅಥವಾ ಪಿತ್ರಾರ್ಜಿತ ಆಸ್ತಿಯಲ್ಲಿಹಕ್ಕು ಕೊಡಿಸಿದ್ದು ಬಾಬಾಸಾಹೇಬ್ ಅಂಬೇಡ್ಕರ್ ಎಂದರು.

ಜವಾಬ್ದಾರಿ ಅರಿವೂ ಮುಖ್ಯ

ಜಿಲ್ಲಾಧಿಕಾರಿ ಸ್ನೇಹಲ್ ಆರ್ . ಮಾತನಾಡಿ, ಸಮಾಜದಲ್ಲಿಸಮಾನತೆ ಮತ್ತು ನ್ಯಾಯ ಸ್ಥಾಪನೆಗೆ ಯುವ ಸಮೂಹ ಹಕ್ಕುಗಳ ಜತೆಗೆ ಜವಾಬ್ದಾರಿಗಳನ್ನೂ ಅರಿತುಕೊಳ್ಳಬೇಕು. ಯುವಕರು ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುವುದಷ್ಟೇ ಅಲ್ಲ, ಆ ಹಕ್ಕುಗಳೊಂದಿಗೆ ಬಂದಿರುವ ಜವಾಬ್ದಾರಿಗಳನ್ನೂ ತಿಳಿದುಕೊಳ್ಳಬೇಕು ಎಂದರು.

ಡಾ.ಅಂಬೇಡ್ಕರ್ ಅವರು ನಮಗೆಲ್ಲದಾರಿ ದೀವಿಗೆ ಆಗಿದ್ದಾರೆ. ಅವರು ಸಾಕಷ್ಟು ಸಂಕಷ್ಟ, ನೋವು, ತಾರತಮ್ಯ, ಅಪಮಾನ ಅನುಭವಿಸಿದರೂ, ಸಮಾಜಕ್ಕೆ ಒಳಿತನ್ನೇ ಮಾಡಿದರು. ಎಜ್ಯುಕೇಶನ್ ಇಸ್ ದ ಗ್ರೇಟೆಸ್ಟ್ ವೆಪನ್ ಎಂದು ಮನವರಿಕೆ ಮಾಡಿಸಿದವರು ಎಂದರು.

ಹು-ಧಾ ಪೊಲೀಸ್ ಆಯುಕ್ತ ಎನ್ .ಶಶಿಕುಮಾರ ಮಾತನಾಡಿ, ಸ್ವಾತಂತ್ರ್ಯದ ಸಮಯದಲ್ಲಿಕೆಲವು ವಿಶ್ವ ನಾಯಕರು ದೇಶವು ದೀರ್ಘಕಾಲ ಅಖಂಡವಾಗಿ ಉಳಿಯುವುದಿಲ್ಲಎಂದು ಅಭಿಪ್ರಾಯಪಟ್ಟಿದ್ದರು. ಆದರೆ ಸ್ವಾತಂತ್ರ್ಯವಾಗಿ ಸುಮಾರು 8 ದಶಕಗಳ ನಂತರವೂ ಭಾರತವು ಸಮಗ್ರವಾಗಿ ಮತ್ತು ಗಟ್ಟಿಯಾಗಿ ಉಳಿದಿದೆ ಅಂದರೆ ಅದಕ್ಕೆ ಕಾರಣ ಡಾ.ಬಿ.ಆರ್ . ಅಂಬೇಡ್ಕರ್ ರಚಿಸಿದ ಸಂವಿಧಾನವೇ ಎಂದು ತಿಳಿಸಿದರು.

ಹುಬ್ಬಳ್ಳಿ ಜೆ.ಜಿ.ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಮಲ್ಲಮ್ಮ ಯಾಟಗಲ್ ಅವರು ಡಾ.ಬಿ.ಆರ್ .ಅಂಬೇಡ್ಕರ್ ಅವರ ಜೀವನ ಚರಿತ್ರೆ ಕುರಿತು ಪ್ರಧಾನ ಉಪನ್ಯಾಸ ನೀಡಿದರು.

ನಂತರ ವಿವಿಧ ಕ್ಷೇತ್ರಗಳ ಸಾಧಕರಿಗೆ, ಎಸ್ ಎಸ್ ಎಲ್ ಸಿ, ಪಿಯುಸಿ ವಾರ್ಷಿಕ ಪರೀಕ್ಷೆಗಳಲ್ಲಿಉತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಜಿಲ್ಲಾಡಳಿತದಿಂದ ಸನ್ಮಾನಿಸಲಾಯಿತು.

ಗೀತಾ ಸಿ.ಡಿ., ಜಗದೀಶ ಹೆಬ್ಬಳ್ಳಿ, ಅಡಿವೇಶ ಇಟಗಿ, ಶಾಕೀರ ಸನದಿ, ಎಸ್ .ಆರ್ .ಪಾಟೀಲ, ಪ್ರಕಾಶ ಹಳಿಯಾಳ, ಪ್ರೊ.ಐ.ಜಿ.ಸನದಿ, ಭುವನೇಶ ಪಾಟೀಲ, ಗುಂಜನ ಆರ್ಯ, ಶಾಲಂ ಹುಸೇನ್ , ಡಾ.ಡಿ.ಎಚ್ .ಹೂಗಾರ, ಗಂಗಾಧರ ಕಂದಕೂರ, ಎಂ.ಬಿ. ಸನ್ನೇರಿ, ಪ್ರವೀಣ ಮಸಕಿ ಸೇರಿದಂತೆ ವಿವಿಧ ಸಂಘಟಣೆಗಳ ಮುಖಂಡರು ಇತರರು ಇದ್ದರು.

ಬಾಕ್ಸ್ ...

ಭಾವಚಿತ್ರ ಮೆರವಣಿಗೆ

ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಯಿಂದ ಆರಂಭಗೊಂಡ ಡಾ. ಬಿ.ಆರ್ . ಅಂಬೇಡ್ಕರ್ ಅವರ ಭಾವಚಿತ್ರದ ಭವ್ಯ ಮೆರಣಿಗೆಗೆ ಸಚಿವ ಸಂತೋಷ ಲಾಡ್ ಹಾಗೂ ಜಿಲ್ಲಾಧಿಕಾರಿ ಸ್ನೇಹಲ್ ಆರ್ . ಚಾಲನೆ ನೀಡಿದರು. ವಿವಿಧ ಕಲಾತಂಡದೊಂದಿಗೆ ಮೆರವಣಿಗೆಯು ನಗರದ ಕೋರ್ಟ್ ಸರ್ಕಲ್ , ಸಂಗಮ ಸರ್ಕಲ್ , ಮದಾರಮಡ್ಡಿ, ಭೂಸಪ್ಪ ಚೌಕ, ಮೇದಾರ ಓಣಿ, ಕೆಸಿಸಿ ಬ್ಯಾಂಕ್ ಮೂಲಕ ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ.ಪಾಟೀಲ ಪುಟ್ಟಪ್ಪ ಸಭಾಭವನದವರೆಗೆ ಸಾಗಿತು. ನಂತರ ಆಲೂರು ವೆಂಕಟರಾವ್ ವೃತ್ತದಲ್ಲಿರುವ ಡಾ.ಬಿ.ಆರ್ .ಅಂಬೇಡ್ಕರ್ ಹಾಗೂ ಜಗಜ್ಯೋತಿ ಬಸವೇಶ್ವರರ ಪ್ರತಿಮೆಗಳಿಗೆ ಸ್ನೇಹಲ್ ಆರ್ ., ಭುವನೇಶ ಪಾಟೀಲ, ಗುಂಜನ್ ಆರ್ಯ ಅವರು ಸೇರಿದಂತೆ ವಿವಿಧ ಗಣ್ಯರು ಮಾಲಾರ್ಪಣೆ ಮಾಡಿದರು.

ಫೋಟೊ: 14ಮಹೇಶ6

ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿಆಯೋಜಿಸಿದ್ದ ಭಾರತ ರತ್ನ ಡಾ.ಬಿ.ಆರ್ .ಅಂಬೇಡ್ಕರ ಅವರ 135ನೇ ಜಯಂತಿ ಕಾರ್ಯಕ್ರಮದಲ್ಲಿಸಚಿವ ಸಂತೋಷ ಎಸ್ .ಲಾಡ್ ಮಾತನಾಡಿದರು.