ಬಿಸಿಲಿನೊಂದಿಗೆ ಅಧಿಕ ತಾಪಮಾನ ಮುನ್ಸೂಚನೆ

Contributed bystevan.rego@timesgroup.com|Vijaya Karnataka
Vijay Karnataka

ಮಂಗಳೂರು: ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿಬಿಸಿಲಿನೊಂದಿಗೆ ಅಧಿಕ ತಾಪಮಾನ, ಸಂಜೆ, ರಾತ್ರಿ ಅಲ್ಲಲ್ಲಿಮೋಡದ ವಾತಾವರಣದ ಮುನ್ಸೂಚನೆ ಇದೆ. ಈಗಿನಂತೆ ಏ.18 ಅಥವಾ 19ರಂದು ಅಲ್ಲಲ್ಲಿಮಳೆ ಆರಂಭವಾಗುವ ನಿರೀಕ್ಷೆ ಇದೆ ಎಂದು ಐಎಂಡಿ ಮಾಹಿತಿ ನೀಡಿದೆ.

ಹವಾಮಾನ ಇಲಾಖೆ ನೀಡಿದ ಮಾಹಿತಿಯ ಪ್ರಕಾರ, ಈ ಅವಧಿಯಲ್ಲಿಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2 ರಿಂದ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ. ಕರಾವಳಿ ಭಾಗಗಳಲ್ಲಿಸಮುದ್ರದ ಸಮೀಪತೆ ಕಾರಣದಿಂದಾಗಿ ಆದ್ರತೆ ಪ್ರಮಾಣವೂ ಏರಿಕೆಯಾಗಲಿದೆ. ಮಂಗಳವಾರ ಕರಾವಳಿಯಲ್ಲಿಸರಾಸರಿ 34.7ಡಿಗ್ರಿ ಗರಿಷ್ಠ, 23.9 ಕನಿಷ್ಟ ಉಷ್ಣಾಂಶ ದಾಖಲಾಗಿದೆ. ಬುಧವಾರ ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಅಲ್ಲಲ್ಲಿಮೋಡದ ವಾತಾವರಣದ ಮುನ್ಸೂಚನೆ ಇದೆ.