ಮಹಾನ್ ಮಾನವತವಾದಿ ಡಾ.ಅಂಬೇಡ್ಕರ್
ವಿಕ ಸುದ್ದಿಲೋಕ ಸೊರಬ
ಶತ ಶತಮಾನಗಳಿಂದಲೂ ಶೋಷಣೆಗೆ ಒಳಗಾಗಿ ಬದುಕಿಗಾಗಿ ಬೆಳಕಿನ ನಿರೀಕ್ಷೆಯಲ್ಲಿದ್ದ ತಳ ಸಮುದಾಯಕ್ಕೆ ದಾರಿ ದೀಪವಾದ ಡಾ.ಅಂಬೇಡ್ಕರ್ ಅವರು ಮಹಾನ್ ಮಾನವತವಾದಿ ಎಂದು ಭಾರಂಗಿ ಗ್ರಾ.ಪಂ. ಪಿಡಿಒ ಅಧಿಕಾರಿ ಪಿ.ಶಿವರಾಜ್ ಅಭಿಪ್ರಾಯಪಟ್ಟರು.
ಪಟ್ಟಣದ ರಂಗಮಂದಿರದಲ್ಲಿತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಮಂಗಳವಾರ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್ .ಅಂಬೇಡ್ಕರ್ ಹಾಗೂ ಮಾಜಿ ಉಪ ಪ್ರಧಾನಿ ಬಾಬು ಜಗಜೀವನರಾಂ ಅವರ ಜಯಂತ್ಯುತ್ಸವದಲ್ಲಿಅವರು ಮಾತನಾಡಿದರು.
ಅಂಬೇಡ್ಕರ್ ಅವರಿಗೆ ವಿದೇಶದಲ್ಲಿಅಭ್ಯಾಸ ಮಾಡಿದ್ದರೂ ತಾಯಿ ನಾಡಿಗೆ ಸೇವೆ ಸಲ್ಲಿಸುವ ತುಡಿತ ಕಡಿಮೆ ಆಗಿಲಿಲ್ಲ. ಅವರ ಉತ್ಕತ್ರೃಷ್ಟ ಜ್ಞಾನವನ್ನು ಅಮೆರಿಕ ಸೇರಿದಂತೆ ಇತರ ರಾಷ್ಟ್ರಗಳು ಬಳಸಿಕೊಳ್ಳಲು ಮುಂದಾಗಿತ್ತು. ಆದರೂ ತನ್ನ ದೇಶದ ದಲಿತ ಜನಾಂಗಕ್ಕೆ ನ್ಯಾಯ ಕೊಡಿಸಲು ಅವಿರತ ಶ್ರಮ ವಹಿಸಿದರು ಎಂದರು.
ತಾ.ಪಂ ಇಒ ಕೆ.ಜಿ.ಶಶಿಧರ್ ಪ್ರಾಸ್ತಾವಿಕ ಮಾತನಾಡಿ, ಸ್ವಾತಂತ್ರ್ಯಕ್ಕೆ ಅರ್ಥ ಬರುವುದು ಸಮಾನತೆಯಿಂದ ಮಾತ್ರ ಎಂದರು.
ಉಪನ್ಯಾಸಕ ಎಂ.ಎನ್ .ಮಾರುತಿ ಗಿಣಿವಾಲ ಅವರು ಮಾಜಿ ಉಪಪ್ರಧಾನಿ ಬಾಬು ಜಗಜೀವನರಾಂ ಅವರ ಬಗ್ಗೆ ಕುರಿತು ಮಾತನಾಡಿದರು.
ತಹಸೀಲ್ದಾರ್ ಕೆ.ಪುರಂದರ ಅವರು ಸಂವಿಧಾನ ಪ್ರಸ್ತಾವನೆ ಬಗ್ಗೆ ಪ್ರಮಾಣ ವಚನ ಬೋಧಿಸಿದರು. ಸಮಾಜ ಕಲ್ಯಾಣಾಧಿಕಾರಿ ಇಕ್ಬಾಲ್ ಜಾತಿಗೇರ್ ಸ್ವಾಗತಿಸಿ, ಶೀಲಾ ನಿರೂಪಿಸಿದರು.
ಇದಕ್ಕೂ ಮುನ್ನ ಡಾ.ಬಿ.ಆರ್ .ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಂ ಅವರ ಭಾವಚಿತ್ರವನ್ನು ತೆರೆದ ವಾಹನದಲ್ಲಿಪಟ್ಟಣದ ರಂಗನಾಥ ದೇವಸ್ಥಾನದಿಂದ ಮುಖ್ಯ ಬೀದಿಯಲ್ಲಿವಿವಿಧ ಜನಪದ ಕಲಾತಂಡಗಳೊಂದಿಗೆ ರಂಗಮಂದಿರದ ವರೆಗೆ ಮೆರವಣಿಗೆ ನಡೆಸಲಾಯಿತು.
ಸಮಾಜ ಚಿಂತಕ ರಾಜಪ್ಪ ಮಾಸ್ತರ್ , ಬಿಇಒ ಆರ್ .ಪುಷ್ಪಾ, ಪುರಸಭೆ ಮುಖ್ಯಾಧಿಕಾರಿ ಚಂದನ್ , ಗ್ಯಾರಂಟಿ ಸಮಿತಿ ಅಧ್ಯಕ್ಷ ಜೈಶೀಲಗೌಡ, ಪ್ರಮುಖರಾದ ಗುರುರಾಜ್ , ಪುರುಷೋತ್ತಮ, ದಿನೇಶ್ ಹಣಜಿ, ಮಹೇಶ್ ಶಕುನವಳ್ಳಿ, ನಾಗರಾಜ್ , ಸಂಜೀವ್ ನೇರಲಗಿ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು, ದಲಿತ ಸಂಘರ್ಷ ಸಮಿತಿ ಮತ್ತಿತರರು ಪಾಲ್ಗೊಂಡಿದ್ದರು.
14ಸೊರಬಪಿ18:
ಸೊರಬ ರಂಗಮಂದಿರದಲ್ಲಿಡಾ.ಬಿ.ಆರ್ .ಅಂಬೇಡ್ಕರ್ ಹಾಗೂ ಮಾಜಿ ಉಪ ಪ್ರಧಾನಿ ಬಾಬು ಜಗಜೀವನರಾಂ ಅವರ ಜಯಂತ್ಯುತ್ಸವ ನಡೆಯಿತು.

