ಐಐಟಿಗೆ ಜಾಗ ಅನ್ಯ ಉದ್ದೇಶಕ್ಕೆ ಬಳಕೆ ಬೇಧಿಡ

Contributed byprakashvkhsn@gmail.com|Vijaya Karnataka
Vijay Karnataka

ಐಐಟಿಗೆ ಜಾಗ ಅನ್ಯ ಉದ್ದೇಶಕ್ಕೆ ಬಳಕೆ ಬೇಧಿಡ

*ರಾಜ್ಯ ಕೈಧಿಗಾಧಿರಿಕೆ ಸಧಿಚಿಧಿವಧಿರಿಗೆ ಮಾಜಿ ಪ್ರಧಿಧಾನಿ ಎಧಿಚ್ ಧಿಡಿಡಿ ಪಧಿತ್ರ*ಧಿಆಧಿದೇಶ ಹೊಧಿರಧಿಡಿಧಿಸುಧಿವಂತೆ ಮಧಿನಧಿವಿ

ವಿಕ ಸುದ್ದಿಲೋಕ ಹಾಸನÜ

ನಗರದಲ್ಲಿಐಐಟಿ ಹಾಗೂ ಇತರ ಕೇಂದ್ರೀಯ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಕೆಎಐಡಿಬಿ ವತಿಯಿಂದ ಸ್ವಾಧೀನ ಪಡಿಸಿಕೊಂಡಿರುವ ಭೂಮಿಯನ್ನು ಅದೇ ಉದ್ದೇಶಕ್ಕೆ ಮೀಸಲಿಟ್ಟು ಆದೇಶ ಹೊರಡಿಸಬೇಕು ಎಂದು ಮಾಜಿ ಪ್ರಧಾನಿ ಎಚ್ .ಡಿ.ದೇವೇಗೌಡ ಅಧಿವರು ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಗೆ ಪತ್ರ ಬರೆದಿದ್ದಾರೆ.

1057.24 ಎಕರೆ ಜಮೀನಿಧಿನ ಪೈಕಿ 100 ಎಕರೆಯಲ್ಲಿಕೈಗಾರಿಕಾ ವಲಯದ ಯೋಜನೆ ರಚಿಸಿ ಅನುಷ್ಠಾನಗೊಳಿಸುತ್ತಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ಟೆಂಡರ್ ಪ್ರಕ್ರಿಯೆ ರದ್ದುಪಡಿಸುವಂತೆ ಮನವಿ ಮಾಡಿದ್ದಾರೆ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಸಭೆಯಲ್ಲಿಅನುಮೋದನೆ ಪಡೆದು ಐಐಟಿ ಹಾಗೂ ಇತರೆ ಕೇಂದ್ರೀಯ ವಿವಿ ಸ್ಥಾಪನೆಗೆ ಸ್ವಾಧೀನವಾಗಿರುವ ಜಮೀನು ಕಾಯ್ದಿರಿಸಬೇಕೆಂದು ವಿನಂತಿಸಿದ್ದಾರೆ.

ನಗರದಲ್ಲಿಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕೆಐಎಡಿಬಿ ಮೂಲಕ ತಾಲೂಕಿನ ಬೂವನಹಳ್ಳಿ ಹಾಗೂ ಮತ್ತಿತರೆ ಗ್ರಾಮಗಳ ಸರ್ವೆ ನಂ ಮತ್ತು ಸರಕಾರಿ ಖರಾಬು ಸೇರಿ 1224.16 ಎಕರೆ ಜಮೀನು ಸ್ವಾಧೀನ ಪ್ರಕ್ರಿಯೆ ನಡೆಸಿ, ಈ ಪೈಕಿ 536 ಎಕರೆ ಜಮೀನು ಸ್ವಾಧೀನ ಪಡಿಸಿಕೊಂಡು ವಿಮಾನ ನಿಲ್ದಾಣ ಕಾಮಗಾರಿ ಪ್ರಗತಿಯಲ್ಲಿದೆ.

ಉಳಿಕೆ ಜಮೀನಿನಲ್ಲಿಭೂ ಸ್ವಾಧೀನ ಅಂತಿಮ ಪ್ರಕ್ರಿಯೆಯಲ್ಲಿರುವ 2008 ರ ಜೆಎಂಸಿ ವರದಿಯಂತೆ ಅಧಿಸೂಚನೆ ಹೊರಡಿಸಿರುವ 420-10ರಲ್ಲಿ ಕೈ ಬಿಟ್ಟಿರುವ 231 ಎಕರೆ ಜಮೀನನ್ನು ಈ ಹಿಂದಿನಂತೆಯೇ ಭೂಸ್ವಾಧೀನ ಪ್ರಕ್ರಿಯೆಯನ್ನು ಮುಂದುವರಿಸಧಿಬೇಕು. 2019 ಜ.17ರಂದು ಭೂ ಸ್ವಾಧೀನವಾಗಿರುವ 189.04 ಎಕರೆ ಮತ್ತು 30.01 ಎಕರೆ, ಒಟ್ಟಾರೆ 219.05 ಎಕರೆಯ ಪೈಧಿಕಿ 19 ಎಕರೆ ಹೊರತುಪಡಿಸಿ, ಈ ಯೋಜನೆಯನ್ನು ಹಾಸನದ ಮಾಜಿ ಶಾಸಕರು, ಭೂ ಮಾಫಿಯಾ ಹಾಗೂ ರಿಯಲ್ ಎಸ್ಟೇಟ್ ಅವರೊಂದಿಗೆ ಕಂದಾಯ ಇಲಾಖಾಧಿಕಾರಿಗಳು ಶಾಮೀಲಾಗಿ ಮೂಲ ಪ್ರಸ್ತಾವನೆಯನ್ನು ಮಾರ್ಪಡಿಸಿ 199.39 ಎಕರೆ ಜಮೀನುಗಳನ್ನು ಡಿನೋಟಿಫೈ ಮಾಡಲು ಕೈಗೊಂಡಿರುವ ಸರಕಾರದ ನಿರ್ಣಯಗಳನ್ನು ಕೈಬಿಡಬೇಕು ಎಂದು ಕೋರಿದ್ದಾರೆ.

ಕೆಎಐಡಿಬಿ ವತಿಯಿಂದ ಭೂಸ್ವಾಧೀನ ಪ್ರಕ್ರಿಯೆಯಲ್ಲಿರುವ ಜಮೀನುಗಳನ್ನು ಹಾಸನ ವಿಮಾನ ನಿಲ್ದಾಣದ ಯೋಜನೆಗೆ ಸ್ವಾಧೀನಪಡಿಸಿಕೊಂಡು ಮೂಲ ಯೋಜನೆಯಂತೆಯೇ ಕಾಮಗಾರಿಗಳನ್ನು ಮುಂದುವರಿಸಬೇಕು ಎಂದು ಮನವಿ ಮಾಡಿದ್ದಾರೆ.

ಹಾಸನ ವಿಮಾನ ನಿಲ್ದಾಣವನ್ನು ಪ್ರಾಥಮಿಕ ಹಂತದಲ್ಲಿಶಿವಮೊಗ್ಗ ಗ್ರೀನ್ ಫೀಲ್ಡ್ ಏರ್ ಪೋರ್ಟ್ ಮಾದರಿಯಲ್ಲಿಏರ್ ಬಸ್ -320 ಹಾರಿ-ಇಳಿಯುವ ಹಂತದ ವಿಮಾನ ನಿಲ್ದಾಣಕ್ಕೆ ಉನ್ನತೀಕರಿಸಲು ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.