15-ಎನ್ ವಿಎಲ್ -2 ವಿಕಸುದ್ದಿಲೋಕ ನವಲಗುಂದ
ಬಣವೆಗೆ ಬೆಂಕಿ, ಅಪಾರ ಹಾನಿ
ನವಲಗುಂದ: ಪಟ್ಟಣದ ಕಳ್ಳಿಮಠ ಓಣಿಯ ಪ್ರಗತಿಪರ ರೈತ ಮಲ್ಲಪ್ಪ ಹಳ್ಳದ ಅವರು ಹಿತ್ತಲಿನಲ್ಲಿಜಾನುವಾರುಗಳಿಗೆ ಸಂಗ್ರಹಿಸಿಟ್ಟಿದ್ದ ಹೊಟ್ಟು ಹಾಗೂ ಮೇವಿನ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂ.ಗಳ ಹಾನಿಯಾದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.
ಬೆಂಕಿ ಹತ್ತಿದ ಸುದ್ದಿ ತಿಳಿಯುತ್ತಿದ್ದಂತೆ ಓಣಿಯ ನಾಗಕರಿಕರು, ಪುರಸಭೆ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸಿದರು. ನಂತರ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿಯಶಸ್ವಿಯಾದರು.
ಸುದ್ದಿ ತಿಳಿದ ಶಾಸಕ ಎನ್ .ಎಚ್ .ಕೋನರಡ್ಡಿ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಹಾನಿಗೊಳಗಾದ ರೈತರಿಗೆ ಸಾಂತ್ವನ ಹೇಳಿ ಸರಕಾರದಿಂದ ಅಗತ್ಯ ಪರಿಹಾರ ಬಿಡುಗಡೆಗೆ ಕ್ರಮ ವಹಿಸುವುದಾಗಿ ಹೇಳಿದರು. ತಹಸೀಲ್ದಾರ್ ಸುಧೀರ ಸಾಹುಕಾರ, ಪುರಸಭೆ ಮುಖ್ಯಾಧಿಕಾರಿ ಎಸ್ .ಪಿ.ಪೂಜಾರ ಮತ್ತಿತರರು ಉಪಸ್ಥಿತರಿದ್ದರು.
ಪೊಟೊ-15-ಎನ್ ವಿಎಲ್ -2
ನವಲಗುಂದದಲ್ಲಿಮೇವಿನ ಬಣವೆಗೆ ಬೆಂಕಿ ಹತ್ತಿತ್ತು.

