ಹಕ್ಕುಗಳ ರಕ್ಷಣಾ ಕವಚ ಸಂವಿಧಾನ
ವಿಕ ಸುದ್ದಿಲೋಕ ಅಜ್ಜಂಪುರ
ಅಂಬೇಡ್ಕರ್ ರಚಿಸಿದ ಸಂವಿಧಾನ ಕೇವಲ ಕಾಯಿದೆಯ ಪುಸ್ತಕವಲ್ಲ, ಎಲ್ಲರ ಹಕ್ಕುಗಳ ರಕ್ಷಣಾ ಕವಚ ಎಂದು ಶಾಸಕ ಜಿ.ಎಚ್ . ಶ್ರೀನಿವಾಸ ಅಭಿಪ್ರಾಯಪಟ್ಟರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿಮಂಗಳವಾರ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ ಮತ್ತು ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿಆಯೋಜಿಸಿದ್ದ ಡಾ. ಬಿ.ಆರ್ .ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನ್ ರಾಮ್ ಜನ್ಮ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಈ ಮಹನೀಯರು ಆಶಿಸಿದ ಸಮಾಜ ನಿರ್ಮಾಣದ ನಿಟ್ಟಿನಲ್ಲಿಸರಕಾರ ದಲಿತರ ಕೇರಿಗಳನ್ನು ಖಾಸಗಿ ಲೇಔಟ್ ರೀತಿಯಲ್ಲಿಅಭಿವೃದ್ಧಿಪಡಿಸಲು ಬುದ್ಧ-ಬಸವ-ಅಂಬೇಡ್ಕರ್ ಯೋಜನೆ ಅನುಷ್ಠಾನಗೊಳಿಸುತ್ತಿದೆ. ತಾಲೂಕಿನ ಮಾಳೇನಹಳ್ಳಿಯಲ್ಲಿ36 ಕೋಟಿ ರೂ. ವೆಚ್ಚದಲ್ಲಿಶ್ರಮಿಕರ ಮಕ್ಕಳಿಗಾಗಿ ವಸತಿ ಶಾಲೆ ಮಂಜೂರು ಮಾಡಿದೆ ಎಂದರು.
ತಹಸೀಲ್ದಾರ್ ಪಿ.ವಿ.ವಿನಾಯಕ ಸಾಗರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಕೀಲ ಎಸ್ .ಆರ್ . ಜಯಪ್ರಕಾಶ್ ನಾರಾಯಣ್ ಉಪನ್ಯಾಸ ನೀಡಿದರು. ಬಗರ್ ಹುಕುಂ ಸಮಿತಿ ಸದಸ್ಯ ಶಾಂತಕುಮಾರ, ಅಣ್ಣಪ್ಪ ಮಾತನಾಡಿದರು.
ಪಿಯುಸಿಯಲ್ಲಿಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಆರಂಭದಲ್ಲಿಅಂಬೇಡ್ಕರ್ ಮತ್ತು ಬಾಬು ಜಗಜೀವನ ರಾಮ್ ಭಾವಚಿತ್ರದ ಮೆರವಣಿಗೆಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿನಡೆಸಲಾಯಿತು. ತಾ.ಪಂ. ಇಒ ಎಂ.ಕೆ.ವಿಜಯಕುಮಾರ್ ಸಂವಿಧಾನದ ಬಗ್ಗೆ ಪ್ರಮಾಣ ವಚನ ಬೋಧಿಸಿದರು. ಜ್ಯೋತಿ ಸಂಗಡಿಗರಿಂದ ನಾಡಗೀತೆ, ರೈತಗೀತೆ ಗಾಯನ ನಡೆಯಿತು.
ಮುಖ್ಯಾಧಿಕಾರಿ ಟಿ.ಜಿ.ರಮೇಶ್ , ಪಟ್ಟಣ ಪಂಚಾಯಿತಿ ಸದಸ್ಯರು, ಮುಖಂಡ ಮಹೇಂದ್ರಾಚಾರ್ , ಜಿ.ನಟರಾಜ್ , ತಿಪ್ಪೇಶ್ ಮಡಿವಾಳ, ಬಿ.ಎಂ. ಗುರುಮೂರ್ತಿ, ನೌಕರ ಸಂಘದ ಅಧ್ಯಕ್ಷ ಎಸ್ .ಎಂ.ಪುಟ್ಟಸ್ವಾಮಿ, ಡಿಎಸ್ ಎಸ್ ಮುಖಂಡರು ಹಾಜರಿದ್ದರು.
===
14ಅಜ್ಜಂಪುರ02: ಅಜ್ಜಂಪುರದಲ್ಲಿನಡೆದ ಅಂಬೇಡ್ಕರ್ ಜಯಂತಿಯಲ್ಲಿಶಾಸಕ ಜಿ.ಎಚ್ .ಶ್ರೀನಿವಾಸ ಮಾತನಾಡಿದರು.

