ಡಾ.ಬಿ.ಆರ್ .ಅಂಬೇಡ್ಕರ್ ಜನ್ಮದಿನಾಚರಣೆ
ವಿಕ ಸುದ್ದಿಲೋಕ ಕುಂದಾಪುರ
ದೇಶದಲ್ಲಿ25ಲಕ್ಷಕ್ಕೂ ಮಿಕ್ಕಿ ದಲಿತ ಸಂಘಟನೆಗಳಿವೆ. ಸಂಘಟನೆಯ ಮುಖಂಡರು ಸ್ವಾರ್ಥಮರೆತು ದಲಿತರ ಕಲ್ಯಾಣಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಲ್ಲಿದಲಿತರು, ಹಿಂದುಳಿದವರು, ಶೋಷಿತರ ಅದೆಷ್ಟೊ ನೋವಿಗೆ ಪರಿಹಾರ ಸಿಗಲಿದೆ ಎಂದು ಹಿಂದುಳಿದ ವರ್ಗಗಳ ಮುಖಂಡ ಅಶೋಕ ಪೂಜಾರಿ ಬೀಜಾಡಿ ಹೇಳಿದರು.
ಮಂಗಳವಾರ ಇಲ್ಲಿನ ಅಂಬೇಡ್ಕರ ಭವನದಲ್ಲಿಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಕುಂದಾಪುರ ತಾಲೂಕು ಸಮಿತಿ ಹಮ್ಮಿಕೊಂಡ ಸಂವಿಧಾನ ಶಿಲ್ಪಿ ಡಾ.ಬಿ.ಆರ್ .ಅಂಬೇಡ್ಕರ್ ಅವರ ಜನ್ಮದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘಟನೆಯ ಅಧ್ಯಕ್ಷ ರಾಜು ಬೆಟ್ಟಿನಮನೆ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು. ಸಿಐಟಿಯು ಮುಖಂಡ ಚಂದ್ರಶೇಖರ ವಿ. ಪ್ರಧಾನ ಭಾಷಣ ಮಾಡಿದರು. ಸಂಘಟನೆಯ ಪ್ರಮುಖರಾದ ನಾರಾಯಣ ಬೀಜಾಡಿ, ಸುರೇಶ್ ಹಕ್ಲಾಡಿ, ಸತೀಶ್ ಕಂಚುಗೋಡು, ಗೋಪಾಲಕೃಷ್ಣ ನಾಡ, ಭೋಜ ನಾಯ್ ್ಕ, ಚಂದ್ರ ಕೊಲ್ಲೂರು ಮತ್ತಿತರರು ಉಪಸ್ಥಿತರಿದ್ದರು.
ಸಮೀಕ್ಷಾ ಹಕ್ಲಾಡಿ ಕ್ರಾಂತಿಗೀತೆ ಹಾಡಿದರು. ಚಂದ್ರ ಕೊರ್ಗಿ ಸ್ವಾಗತಿಸಿದರು. ರವಿ ಬನ್ನಾಡಿ ಕಾರ್ಯಕ್ರಮ ನಿರ್ವಹಿಸಿದರು.
ಪೋಟೊ//14ಕೆ-ಎಎಂಬಿ//. ಹಿಂದುಳಿದ ವರ್ಗಗಳ ಮುಖಂಡ ಅಶೋಕ ಪೂಜಾರಿ ಬೀಜಾಡಿ ಕಾರ್ಯಕ್ರಮ ಉದ್ಘಾಟಿಸಿದರು.

