ವಶಪಡಿಸಿಕೊಂಡಿದ್ದ ಅಕ್ಕಿ,ರಾಗಿ 22ರಂದು ಹರಾಜು
22 ರಂದು ಅಕ್ಕಿ, ರಾಗಿ ಹರಾಜು
ವಿಕ ಸುದ್ದಿಲೋಕ ಚನ್ನಪಟ್ಟಣ: ಅಗತ್ಯ ವಸ್ತುಗಳ ಕಾಯಿದೆ 1955ರಡಿಯಲ್ಲಿಚನ್ನಪಟ್ಟಣ ತಾಲೂಕಿನಲ್ಲಿನಾನಾ ಪ್ರಕರಣಗಳಲ್ಲಿವಶಪಡಿಸಿಕೊಂಡಿರುವ ಅಕ್ಕಿ ಮತ್ತು ರಾಗಿ ದಾಸ್ತಾನನ್ನು ಏ.22ರಂದು ಹರಾಜು ಮಾಡಲಾಗುತ್ತಿದೆ.
ಏ.22ರಂದು ಬೆಳಗ್ಗೆ ಅಕ್ಕಿ ಮತ್ತು ರಾಗಿ ದಾಸ್ತಾನನ್ನು ಚನ್ನಪಟ್ಟಣದ ಬಿ.ಎಂ. ರಸ್ತೆಯ ಕಬ್ಬಾಳಮ್ಮ ವೇ ಬ್ರಿಡ್ಜ್
ಹಿಂಭಾಗದಲ್ಲಿರುವ ಎಸ್ ಡಬ್ಲೂಯುಸಿ (ಟಿಎಂಪಿಸಿಎಂಎಸ್ ಲಗತ್ತು ಕೆಎಫ್ ಸಿಎಸ್ ಸಿ) ಆಹಾರ ಸಗಟು ಗೋದಾಮಿನಲ್ಲಿ82.97 ಕ್ವಿಂಟಾಲ್ ಅಕ್ಕಿ ಮತ್ತು 0.54 ಕ್ವಿಂಟಾಲ್ ರಾಗಿಯನ್ನು ಮತ್ತು ಅದೇ ದಿನ ಮಧ್ಯಾಹ್ನ 1ಗಂಟೆಗೆ ಜಾನಪದ ಲೋಕದ ಎದುರಿನ ಕೆಎಫ್ ಸಿಎಸ್ ಸಿ ಆಹಾರ ಸಗಟು ಮಳಿಗೆಯಲ್ಲಿ191.10 ಕ್ವಿಂಟಾಲ್ ಅಕ್ಕಿಯನ್ನು ಪ್ರತ್ಯೇಕವಾಗಿ ಷರತ್ತುಗಳಿಗೆ ಒಳಪಟ್ಟು ತಹಸೀಲ್ದಾರ್ ಅಥವಾ ಅವರಿಂದ ಅಧಿಕಾರ ಪಡೆದವರು ಸಾರ್ವಜನಿಕ ಬಹಿರಂಗ ಹರಾಜು ನಡೆಸುತ್ತಿದ್ದು, ಆಸಕ್ತಿದಾರರು ಹರಾಜಿನಲ್ಲಿಭಾಗವಹಿಸಬಹುದು.
ಹರಾಜಿನಲ್ಲಿಭಾಗವಹಿಸುವ ಪ್ರತಿಯೊಬ್ಬ ಬಿಡ್ಡುದಾರರು 10,000 ರೂ. ಮುಂಗಡ ಠೇವಣಿಯನ್ನು ಚನ್ನಪಟ್ಟಣ ತಾಲೂಕಿನ ತಹಸೀಲ್ದಾರ್ ಹೆಸರಿನಲ್ಲಿಡಿ.ಡಿ. ಪಾವತಿಸಬೇಕು.
ಹೆಚ್ಚಿನ ಮಾಹಿತಿಗೆ ಚನ್ನಪಟ್ಟಣ ತಾಲೂಕು ಕಚೇರಿ ಆಹಾರ ಶಾಖೆ ಸಂಪರ್ಕಿಸಬಹುದು, ಹೆಚ್ಚಿನ ವಿವರಗಳಿಗಾಗಿ ಈ ಕೆಳಕಂಡ ದೂ.ಸಂಖ್ಯೆ: 7899689911 ಅಥವಾ 7676983708 ಸಂರ್ಪಕಿಸುವಂತೆ ಪ್ರಕಟಣೆಯಲ್ಲಿತಿಳಿಸಿದ್ದಾರೆ.

